ಮಡಿಕೇರಿ, ಏ. ೭: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮೂರ್ನಾಡು ಸನಿಹದ ಬೇತ್ರಿಯಲ್ಲಿ ಇಂದು ಖಾಸಗಿ ಬಸ್ ಹಾಗೂ ಜೀಪೊಂದರ ನಡುವೆ ಭೀಕರ ಅವಘಡ ಸಂಭವಿಸಿದೆ. ಘಟನೆಯಲ್ಲಿ ವೃದ್ಧೆಯೊಬ್ಬರು ದುರ್ಮರಣಗೊಂಡಿದ್ದು, ಇನ್ನಿಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಬಿಳಿಗೇರಿಯ ನಿವಾಸಿಯಾದ ಜೀಪ್ ಚಾಲಿಸುತ್ತಿದ್ದ ನಿವೃತ್ತ ಯೋಧ ಮುಕ್ಕಾಟಿ ಮೋಹನ್ ಅವರ ತಾಯಿ ಲಕ್ಷಿö್ಮ (೭೦) ಎಂಬವರು ಸಾವನ್ನಪ್ಪಿದ್ದಾರೆ. ಇವರು ದಿವಂಗತ ಪೂವಯ್ಯ ಅವರ ಪತ್ನಿಯಾಗಿದ್ದಾರೆ. ಜೀಪ್ ಚಾಲಿಸುತ್ತಿದ್ದ ಮೋಹನ್ ಹಾಗೂ ಅವರ ಪತ್ನಿ ಧರಣಿಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ. ವೀರಾಜಪೇಟೆಯಿಂದ ಮಡಿಕೇರಿಯತ್ತ ಬರುತ್ತಿದ್ದ ಖಾಸಗಿ ಬಸ್(ಕೆಎ-೧೨ ಎ-೫೨೧೧ಗೆ ಎದುರಿನಿಂದ ಬಂದ ಜೀಪು (ಕೆಎ-೧೨ ಪಿ-೨೭೯೮) ಡಿಕ್ಕಿಯಾಗಿದೆ. ಬಸ್‌ನ ಮುಂಬದಿಗೆ ಜೀಪ್ ಗುದ್ದಿದ್ದು, ವಾಹನಗಳೆರಡೂ ಜಖಂಗೊAಡಿವೆ. ಅವಘಡದಿಂದ ಗಾಯಗೊಂಡಿದ್ದ ಮೂವರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೀಪ್‌ನ ಮುಂಬದಿಯಲ್ಲಿದ್ದ ಲಕ್ಷಿö್ಮ (೭೦) ಅವರು ಸಾವಿಗೀಡಾಗಿದ್ದಾರೆ. ಮೃತರ ಪುತ್ರ ಮೋಹನ್ (೫೦) ಹಾಗೂ ಅವರ ಪತ್ನಿ ಧರಣಿ (೪೩) ಇಬ್ಬರಿಗೂ ತೀವ್ರ ಪೆಟ್ಟಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಬಸ್ ಅನ್ನು ರವಿ ಎಂಬವರು ಚಾಲಿಸುತ್ತಿದ್ದರೆನ್ನಲಾಗಿದೆ. ಅವಘಡದ ತೀವ್ರತೆ ಎಷ್ಟಿತ್ತೆಂದರೆ ಬಸ್‌ಗೆ ಡಿಕ್ಕಿಯಾದ ಜೀಪ್ ಸುಮಾರು ೬೦ ಅಡಿಗಳಷ್ಟು ದೂರ ಹಿಂದಕ್ಕೆ ಜರುಗಿದ್ದು, ವಿದ್ಯುತ್ ಕಂಬವೊAದಕ್ಕೆ ಡಿಕ್ಕಿಯಾಗಿ ನಿಂತಿದೆ