ಸೋಮವಾರಪೇಟೆ, ಏ. ೮: ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ ಒಂದು ಮತದ ಅಂತರದಿAದ ಸೋತಿದ್ದ ಹರದೂರು ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್ ಮುಖಂಡ ಉಲ್ಲಾಸ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಗರಗAದೂರು ಗ್ರಾಮದ ಉಲ್ಲಾಸ್ ಮತ್ತು ಈರಪ್ಪ ಅವರು ತಮ್ಮ ಬೆಂಬಲಿಗರೊAದಿಗೆ ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಈ ಸಂದರ್ಭ ಗರಗಂದೂರು ಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಕೆ. ಪದ್ಮನಾಭ್, ಹರದೂರು ಪಂಚಾಯಿತಿ ಅಧ್ಯಕ್ಷ ಪದ್ಮನಾಭ್, ಪ್ರಮುಖರಾದ ಐಗೂರಿನ ಎಂ.ಎ. ಪ್ರಭಾಕರ್, ಮಚ್ಚಂಡ ಪ್ರಕಾಶ್, ಶಶಿಕುಮಾರ್, ಚಿದಾನಂದ್, ಅರೆಯೂರು ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.