ಕಡಂಗ, ಏ. ೮: ವಿಶ್ವ ಆರೋಗ್ಯ ದಿನದ ಅಂಗವಾಗಿ ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಬ್ಲಡ್ ಸೈಬೋ ಹಾಗೂ ವೈದ್ಯಕೀಯ ಕಾಲೇಜು ಸಹಯೋಗದೊಂದಿಗೆ ಎಸ್‌ಎಸ್‌ಎಫ್ ಚೆಟ್ಟಿಮಾನಿ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಂಘಟನೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಜನರಿಗೆ ನೆರವಾಗುವ ವಿಚಾರದಲ್ಲಿ ನಡೆಸುತ್ತಿರುವ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಪೊಲೀಸ್ ಸಿಬ್ಬಂದಿಗಳು ಸಹಿತ ಹಲವಾರು ರಕ್ತದಾನಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಎಸ್‌ಎಸ್‌ಎಫ್ ಕೊಡಗು ಜಿಲ್ಲಾಧ್ಯಕ್ಷÀ ಶಾಫಿ ಸಅದಿ ಸೋಮವಾರಪೇಟೆ ಮಾತನಾಡಿ, ಎಸ್‌ಎಸ್‌ಎಫ್ ಒಂದು ಧಾರ್ಮಿಕ ಸಂಘಟನೆಯಾಗಿದ್ದರೂ ಕೂಡ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದರು.
ಚೆಟ್ಟಿಮಾನಿ ಜಮಾಅತ್ ಅಧ್ಯಕ್ಷ ತಮೀಮ್ ತಂಙ್ಞಳ್, ಜಿಲ್ಲಾ ಕಾರ್ಯದರ್ಶಿ ಶೌಕತ್ ಎಮ್ಮೆಮಾಡು, ಎಸ್‌ವೈಎಸ್ ಮುಖಂಡರಾದ ಪಿ.ಯು. ಇಬ್ರಾಹಿಂ, ಝಕರಿಯಾ ಜೌಹರಿ ಶಾಖಾ ಅಧ್ಯಕ್ಷ ಹಂಸ ಶರ್ಫುದ್ದೀನ್ ಇನ್ನಿತರರು ಹಾಜರಿದ್ದರು.