ಪೆರಾಜೆ, ಏ. ೬: ಪೆರಾಜೆ ಗೌಡ ಗ್ರಾಮ ಸಮಿತಿ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟಕ್ಕೆ ಶ್ರೀ ಶಾಸ್ತಾವು ದೇವಾಲಯ ಆಡಳಿತ ಮಂಡಳಿ ಮೊಕ್ತೇಸರರಾದ ವಿಶ್ವನಾಥ ಕುಂಬಳಚೇರಿ ಚಾಲನೆ ನೀಡಿದರು.
ಗ್ರಾಮ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ಸುಳ್ಯ ಗೌಡರ ಯುವ ಸೇವಾ ಸಂಘ ಕೋಶಾಧಿಕಾರಿಗಳಾದ ತೇಜಪ್ರಸಾದ್ ಅಮೆಚೂರು ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಕಿರಣ್ ಕುಂಬಳಚೇರಿ, ಶ್ರೀ ಶಾಸ್ತಾವು ದೇವಸ್ಥಾನದ ದೇವತಕ್ಕರಾದ ರಾಜಗೋಪಾಲ ರಾಮಕಜೆ, ಕಾವೇರಿ ಗದ್ದೆಯ ಮಾಲೀಕರಾದ ಸುಬ್ರಮಣ್ಯ ಮೂಲೆಮಜಲು, ಜ್ಯೋತಿ ಪ್ರೌಢಶಾಲಾ ಮುಖ್ಯ ಶಿಕ್ಷಕ ದೊಡ್ಡಣ್ಣ ಬರೆಮೇಲು ಇದ್ದರು.
ಗ್ರಾಮ ಸಮಿತಿ ಕಾರ್ಯದರ್ಶಿ ಪ್ರವೀಣ ಬಂಗಾರಕೋಡಿ ಸ್ವಾಗತಿಸಿ, ತರುಣ ಘಟಕದ ಕಾರ್ಯದರ್ಶಿ ಮನೋಜ್ ನಿಡ್ಯಮಲೆ ನಿರೂಪಿಸಿ, ಕ್ರೀಡಾ ಸಂಚಾಲಕ ಉದಯಚಂದ್ರ ಕುಂಬಳಚೇರಿ ವಂದಿಸಿದರು.