ಮಡಿಕೇರಿ, ಏ. ೬: ಜಿಲ್ಲೆಯಲ್ಲಿ ತಾ. ೬ ರಂದು ೨೨ ಹೊಸ ಕೋವಿಡ್-೧೯ ಪ್ರಕರಣ ದೃಢಪಟ್ಟಿದೆ. ೧೧ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೧೧ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.

ಮಡಿಕೇರಿ ತಾಲೂಕಿನಲ್ಲಿ ೧೩, ಸೋಮವಾರಪೇಟೆ ತಾಲೂಕಿನಲ್ಲಿ ೯ ಪ್ರಕರಣ ದೃಢಪಟ್ಟಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೬೪೫೭ ಆಗಿದ್ದು, ೬೨೯೪ ಮಂದಿ ಗುಣಮುಖರಾಗಿದ್ದಾರೆ. ೧೦೨ ಸಕ್ರಿಯ ಪ್ರಕರಣಗಳಿದ್ದು, ೮೩ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‌ಮೆAಟ್ ವಲಯಗಳ ಸಂಖ್ಯೆ ೮೬ ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ತಿಳಿಸಿದ್ದಾರೆ.