ಮಡಿಕೇರಿ, ಏ. ೬: ದಕ್ಷಿಣಕೊಡಗಿನಲ್ಲಿ ಕಳೆದೆರಡು ದಿನಗಳ ಹಿಂದೆ ಗೋಣಿಕೊಪ್ಪದ ಕಾವೇರಿ ಪೊಮ್ಮಕ್ಕಡ ಕೂಟ (ಕೆ.ಪಿ.ಕೆ) ವತಿಯಿಂದ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ವಿನೂತನವಾದ ‘ಮೀನ್ಯಾರ್ ನಮ್ಮೆ’ ಕಾರ್ಯಕ್ರಮ ವಿಜೃಂಭಣೆಯೊAದಿಗೆ ಗಮನ ಸೆಳೆಯಿತು. ಕೇವಲ ಮಹಿಳೆಯರಿಗಾಗಿಯೇ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕಿನ ವ್ಯಾಪ್ತಿಯ ಗ್ರಾಮಗಳ ಕೊಡವ ಮಹಿಳೆಯರು ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಗಳಿಂದಲೂ ಮಹಿಳೆಯರು ಭಾಗಿಗಳಾಗಿದ್ದರು.
ಸಭಾಕಾರ್ಯಕ್ರಮ, ವಿವಿಧ ರೀತಿಯ ಮಳಿಗೆಗಳು, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ವಾಲಗತಾಟ್‌ನ ಸಂಭ್ರಮ ಈ ರೀತಿಯಾಗಿ ದಿನವಿಡೀ ನಡೆದ ಕಾರ್ಯಕ್ರಮ ಗಮನ ಸೆಳೆಯಿತು. ಮಹಿಳೆಯರೇ ತಯಾರಿಸಿದ ವಿವಿಧ ತಿಂಡಿ ಪದಾರ್ಥಗಳು, ಉಪ್ಪಿನಕಾಯಿ, ಜ್ಯೂಸ್, ನರ್ಸರಿ ಗಿಡಗಳು, ಕೊಡವ ಆಹಾರದ ವೈವಿಧ್ಯತೆ ಈ ರೀತಿಯಾಗಿ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿತ್ತು. ಮಡಿಕೇರಿ, ಚೆಟ್ಟಳ್ಳಿ, ಕುಶಾಲನಗರ, ಸೋಮವಾರಪೇಟೆ, ಸಿದ್ದಾಪುರ ಸೇರಿದಂತೆ ದಕ್ಷಿಣಕೊಡಗಿನ ವಿವಿಧ ಗ್ರಾಮಗಳ ಮಹಿಳೆಯರು ಭಾಗಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಒಡ್ಡೋಲಗ ಸಹಿತ ಬರ ಮಾಡಿಕೊಳ್ಳಲಾಯಿತು. ಕೋವಿಡ್ ಶಿಷ್ಟಾಚಾರ ಪಾಲನೆಗೂ ಒತ್ತು ನೀಡಲಾಗಿತ್ತು. ಇವೆಲ್ಲದರ ನಡುವೆ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು.
ಕಾವೇರಿ ಪೊಮ್ಮಕ್ಕಡ ಕೂಟದ ಸದಸ್ಯರ ತಂಡದೊAದಿಗೆ, ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ, ಪೊನ್ನಂಪೇಟೆ ಕೊಡವ ಸಮಾಜದ ತಂಡ, ಸಾಯಿಶಂಕರ್ ವಿದ್ಯಾಸಂಸ್ಥೆ, ಹೈಸೊಡ್ಲೂರುವಿನ ಪೊಯ್ಯಾಡ್ ಮಂದ್‌ನ ತಂಡದ ಸದಸ್ಯರಿಂದ ಸಾಂಸ್ಕೃತಿಕ ವೈವಿಧ್ಯಮಗಳು ಜರುಗಿದವು. ರ‍್ಯಾಂಪ್‌ವಾಕ್‌ನ ಆಕರ್ಷಣೆ, ಸಾಮೂಹಿಕವಾದ ವಾಲಗತಾಟ್‌ನ ಸಂಭ್ರಮದೊAದಿಗೆ ಇದೇ ಪ್ರಥಮ ಬಾರಿಗೆ ಏರ್ಪಡಿಸಲಾಗಿದ್ದ ಮೀನ್ಯಾರ್ ನಮ್ಮೆ ಕಾರ್ಯಕ್ರಮ ಯಶಸ್ಸು ಕಂಡಿತು. ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ, ಕಾರ್ಯದರ್ಶಿ ನೆಲ್ಲಮಕ್ಕಡ ಪ್ರತಿಷ್ಠ ಸೇರಿದಂತೆ ಇತರ ಪದಾಧಿಕಾರಿಗಳು, ಸದಸ್ಯರ ತಂಡ ಈ ನಮ್ಮೆಯನ್ನು ಆಯೋಜಿಸಿತ್ತು.