ಮಡಿಕೇರಿ, ಏ. ೪: ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ನೊಕ್ಯ ದೇವರಕಾಡು ಪೈಸಾರಿಯಲ್ಲಿ ವಾಸವಿರುವ ಸುಮಾರು ೪೦ ಕುಟುಂಬಗಳಿಗೆ ರಸ್ತೆ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ಮಾಧ್ಯಮ ಘಟಕದ ರಾಜ್ಯಾಧ್ಯಕ್ಷ ಕೆ.ಟಿ. ಶ್ರೀನಿವಾಸ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೊಕ್ಯ ದೇವರಕಾಡು ಪೈಸಾರಿಯಲ್ಲಿ ವಾಸವಿರುವ ಸುಮಾರು ೪೦ ಬಡ ಕುಟುಂಬಗಳು ೬೦ ವರ್ಷಗಳಿಗೂ ಅಧಿಕ ಕಾಲದಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತ ಗೊಂಡಿದ್ದಾರೆ. ಪ್ರಮುಖವಾದ ರಸ್ತೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ಇಲ್ಲಿನ ನಿವಾಸಿಗಳು ಪರಿತಪಿಸು ವಂತಾಗಿದೆ. ಮಳೆಗಾಲದಲ್ಲಿ ಶಾಲಾ ಮಕ್ಕಳು ತಿರುಗಾಡಲು ಕೂಡ ಕಲ್ಲು-ಮಣ್ಣಿನ ರಸ್ತೆಯಲ್ಲಿ ಸಾಧ್ಯವಾಗುತ್ತಿಲ್ಲ. ವಯೋವೃದ್ಧರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಮಡಿಕೇರಿ, ಏ. ೪: ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ನೊಕ್ಯ ದೇವರಕಾಡು ಪೈಸಾರಿಯಲ್ಲಿ ವಾಸವಿರುವ ಸುಮಾರು ೪೦ ಕುಟುಂಬಗಳಿಗೆ ರಸ್ತೆ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ಮಾಧ್ಯಮ ಘಟಕದ ರಾಜ್ಯಾಧ್ಯಕ್ಷ ಕೆ.ಟಿ. ಶ್ರೀನಿವಾಸ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೊಕ್ಯ ದೇವರಕಾಡು ಪೈಸಾರಿಯಲ್ಲಿ ವಾಸವಿರುವ ಸುಮಾರು ೪೦ ಬಡ ಕುಟುಂಬಗಳು ೬೦ ವರ್ಷಗಳಿಗೂ ಅಧಿಕ ಕಾಲದಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತ ಗೊಂಡಿದ್ದಾರೆ. ಪ್ರಮುಖವಾದ ರಸ್ತೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ಇಲ್ಲಿನ ನಿವಾಸಿಗಳು ಪರಿತಪಿಸು ವಂತಾಗಿದೆ. ಮಳೆಗಾಲದಲ್ಲಿ ಶಾಲಾ ಮಕ್ಕಳು ತಿರುಗಾಡಲು ಕೂಡ ಕಲ್ಲು-ಮಣ್ಣಿನ ರಸ್ತೆಯಲ್ಲಿ ಸಾಧ್ಯವಾಗುತ್ತಿಲ್ಲ. ವಯೋವೃದ್ಧರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಸೂಕ್ತ ರಸ್ತೆ ಸಂಪರ್ಕವಿಲ್ಲದೆ ಹೆಣಗಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಆರೋಪಿಸಿದರು.

ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಸೌಲಭ್ಯವು ಕೂಡ ಇಲ್ಲದೆ, ಸುಮಾರು ಅರ್ಧ ಕಿಲೋ ಮೀಟರ್‌ಗೂ ಅಧಿಕ ದೂರ ದಿಂದ ಹಲವು ವರ್ಷಗಳ ಹಿಂದೆ ತಿತಿಮತಿ ಗ್ರಾಮ ಪಂಚಾಯಿತಿ ವತಿ ಯಿಂದ ನಿರ್ಮಿಸಲಾದ ಕೊಳವೆ ಬಾವಿಗಳ ಮೂಲಕ ನೀರನ್ನು ತಂದು ತಮ್ಮ ಜೀವನ ನಿರ್ವಹಣೆ ಮಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ದೇವರು ಕಾಡು ನೂಕ್ಯ ಪೈಸಾರಿ ನಿವಾಸಿಗಳಿಗೆ ಸೂಕ್ತ ರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು. ತಿತಿಮತಿ ಗ್ರಾ.ಪಂ.ಯಲ್ಲಿ ಅನುದಾನದ ಕೊರತೆ ಇರುವುದರಿಂದ ಜಿ.ಪಂ.ಯಿAದ ಸೂಕ್ತ ಅನುದಾನ ಒದಗಿಸಬೇಕು. ಈ ಸಂಬAಧ ಜಿ.ಪಂ. ಸಿಇಓ, ಜಿಲ್ಲಾಧಿಕಾರಿ, ಉಪ ವಿಭಾಗಾ ಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದ ಶ್ರೀನಿವಾಸ್, ದೇವರಕಾಡು ಎಂಬ ಹೆಸರಿದ್ದರೂ ವಾಸವಿರುವ ಪ್ರದೇಶ ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಆದ್ದರಿಂದ ಕೂಡಲೇ ಮೂಲಭೂತ ಸೌಲಭ್ಯ ಒದಗಿಸಿ ಕೊಡುವಂತೆ ಒತ್ತಾಯಿಸಿದರು.

ವೇದಿಕೆ ಸೋಮವಾರಪೇಟೆ ಅಧ್ಯಕ್ಷ ಶಿವಕುಮಾರ್, ವೀರಾಜಪೇಟೆ ಅಧ್ಯಕ್ಷೆ ಫಿಲೋಮಿನಾ, ಸ್ಥಳೀಯರಾದ ಸುರೇಶ್, ಮೀನಾ, ರಮೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.