ಮಡಿಕೇರಿ, ಏ. ೩: ತಮಿಳುನಾಡಿ ನಿಂದ ಕೊಡಗಿಗೆ ಪ್ರವಾಸ ಬಂದಿದ್ದ ಪ್ರವಾಸಿಗರ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿಕೊಂಡ ಪರಿಣಾಮ ೧೨ ಮಂದಿಗೆ ಗಾಯಗಳಾಗಿದ್ದು, ಈ ಪೈಕಿ ಓರ್ವ ಬಾಲಕನ ಕೈ ಮುರಿತಕ್ಕೊಳಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ.
ತಮಿಳುನಾಡಿನಿಂದ ಕರ್ನಾಟಕಕ್ಕೆ ಪ್ರವಾಸ ಬಂದಿದ್ದ ೨೫ ಮಂದಿ ಬೆಂಗಳೂರಿನಿAದ ಬಸ್ ಅನ್ನು (ಕೆ ೫೧ ಎಸಿ ೬೨೯೯) ಬಾಡಿಗೆಗೆ ಪಡೆದು ಕೊಡಗು ಜಿಲ್ಲೆಯತ್ತ ಪ್ರಯಾಣ ಬೆಳೆಸಿದ್ದಾರೆ. ನಿನ್ನೆ ತಡರಾತ್ರಿ ೧೨ ಗಂಟೆಗೆ ಬೆಂಗಳೂರಿನಿAದ ಹೊರಟಿದ್ದು, ಬೆಳಗ್ಗಿನ ಜಾವ ಕೆದಕಲ್ ಬಳಿಯ ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ
(ಮೊದಲ ಪುಟದಿಂದ) ಮಗುಚಿಕೊಂಡಿದೆ. ಪರಿಣಾಮ ಬಸ್‌ನಲ್ಲಿದ್ದ ೧೨ ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಲಕೈ ಮೂಳೆ ಉಳುಕಿರುವ ಬಾಲಕನನ್ನು ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.