ಗೋಣಿಕೊಪ್ಪಲು, ಏ. ೩:ಪೊನ್ನಂಪೇಟೆ ಬಳಿಯ ಮುಗುಟಗೇರಿ ಬಳಿ ಮಧ್ಯರಾತ್ರಿ ಕಳೆದು ಇಂದು ನಸುಗತ್ತಲಿನ ವೇಳೆ ಅಮಾನವೀಯ ದುಷ್ಕೃತ್ಯ ನಡೆದಿದೆ. ದುರಾಚಾರಿಯೊಬ್ಬ ತನ್ನ ಪತ್ನಿಯ ಮೇಲಿನ ದ್ವೇಷ ತೀರಿಸುವ ಅಮಾನುಷ ಪ್ರವೃತ್ತಿಯಿಂದ, ಪಾನಮತ್ತನಾಗಿ ತನ್ನ ಪತ್ನಿ ಹಾಗೂ ಸಂಬAಧಿಕರಾದ ಇತರ ಓರ್ವ ಮಹಿಳೆೆ ಹಾಗೂ ನಾಲ್ಕು ಮಂದಿ ಮಕ್ಕಳನ್ನು ಬಲಿ ತೆಗೆದುಕೊಂಡಿದ್ದಾನೆ. ಹೊಂಚು ಹಾಕಿ ಮನೆಯವರೆಲ್ಲ ಮಲಗಿದ ವೇಳೆ ಮನೆಯ ಹೆಂಚು ತೆಗೆÉದು ಒಳÀಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಮಾಯಕರನ್ನು ಜೀವಂತ ಭಸ್ಮ ಮಾಡಿದ್ದಾನೆ. ಇಬ್ಬರು ಮಹಿಳೆಯರು, ಓರ್ವ ಹಸುಳೆ ಘಟನೆ ನಡೆದ ಪೊನ್ನಂಪೇಟೆಯ ಮುಗುಟಗೇರಿಯಲ್ಲಿ ಜೀವಂತ (ಹೆಚ್.ಕೆ.ಜಗದೀಶ್)ಗೋಣಿಕೊಪ್ಪಲು, ಏ. ೩:ಪೊನ್ನಂಪೇಟೆ ಬಳಿಯ ಮುಗುಟಗೇರಿ ಬಳಿ ಮಧ್ಯರಾತ್ರಿ ಕಳೆದು ಇಂದು ನಸುಗತ್ತಲಿನ ವೇಳೆ ಅಮಾನವೀಯ ದುಷ್ಕೃತ್ಯ ನಡೆದಿದೆ. ದುರಾಚಾರಿಯೊಬ್ಬ ತನ್ನ ಪತ್ನಿಯ ಮೇಲಿನ ದ್ವೇಷ ತೀರಿಸುವ ಅಮಾನುಷ ಪ್ರವೃತ್ತಿಯಿಂದ, ಪಾನಮತ್ತನಾಗಿ ತನ್ನ ಪತ್ನಿ ಹಾಗೂ ಸಂಬAಧಿಕರಾದ ಇತರ ಓರ್ವ ಮಹಿಳೆÉ ಹಾಗೂ ನಾಲ್ಕು ಮಂದಿ ಮಕ್ಕಳನ್ನು ಬಲಿ ತೆಗೆದುಕೊಂಡಿದ್ದಾನೆ. ಹೊಂಚು ಹಾಕಿ ಮನೆಯವರೆಲ್ಲ ಮಲಗಿದ ವೇಳೆ ಮನೆಯ ಹೆಂಚು ತೆಗೆÉದು ಒಳÀಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಮಾಯಕರನ್ನು ಜೀವಂತ ಭಸ್ಮ ಮಾಡಿದ್ದಾನೆ. ಇಬ್ಬರು ಮಹಿಳೆಯರು, ಓರ್ವ ಹಸುಳೆ ಘಟನೆ ನಡೆದ ಪೊನ್ನಂಪೇಟೆಯ ಮುಗುಟಗೇರಿಯಲ್ಲಿ ಜೀವಂತ ಅಂತ್ಯಗೊAಡಿದೆ. ಕೃತ್ಯವೆಸೆದು ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ ನಡೆದಿದೆ. ಪೊನ್ನಂಪೇಟೆ ಸಮೀಪದ ಕಾನೂರು ರಸ್ತೆ ಮುಗುಟಗೇರಿ ಬಳಿಯ ಕೋಳೆರ ಚಿಟ್ಟಿಯಪ್ಪನವರ ಲೈನ್ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.

ಈ ನಡುವೆ ಓರ್ವನ ಸಮಯ ಪ್ರಜ್ಞೆಯಿಂದಾಗಿ ಉಳಿದ ಕೆಲವು ಮಂದಿಯ ಜೀವ ಉಳಿದಿದೆ.

ಬೇಬಿ(೪೦),ಚೀತೆ(೪೫)ಹಾಗೂ ಪ್ರಾರ್ಥನಾ (೬) ಮನೆಯಲ್ಲಿ ಅಸುನೀಗಿದ್ದಾರೆ. ಗಂಭೀರ ಸ್ವರೂಪದ ಗಾಯಗಳಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಕಂದಮ್ಮಗಳಾದ ಪ್ರಕಾಶ್, (೬) ವಿಶ್ವಾಸ್(೭) ಹಾಗೂ ಮತ್ತೋರ್ವ ವಿಶ್ವಾಸ್ (೪) ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಮೃತಪಟ್ಟಿದ್ದಾರೆ. ಕೊಲೆ ಆರೋಪಿ ಯರವರ ಬೋಜ (೫೦) ಎಂದು ತಿಳಿದು ಬಂದಿದ್ದು, ಈತ ತಲೆ ಮರೆಸಿಕೊಂಡಿದ್ದಾನೆ. ಈತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸ್ಥಳಕ್ಕೆ ಮೈಸೂರು ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಕೊಡಗು ಜಿಲ್ಲಾ ಎಸ್.ಪಿ.ಕ್ಷಮಾ ಮಿಶ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ವಿವರ

ಆರೋಪಿ ಬೋಜ ಕಳೆದ ೧೫ ದಿನಗಳಿಂದ ಕೂಲಿಯಾಳುವಾಗಿ ಮುಗುಟಗೇರಿಯ ಮುದ್ದಿಯಡ ನರೇಶ್ ಎಂಬವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ. ಆತ ಹಾಗೂ ಆತನ ಪತ್ನಿ ನಡುವೆ ಆಗಿಂದಾಗ್ಗೆ, ಜಗಳ, ಹೊಡೆದಾಟ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ನೊಂದ ಪತ್ನಿ ಬೇಬಿ ತನ್ನ ತಮ್ಮ ಮಂಜು ವಾಸ ಮಾಡುವ ಮನೆಗೆ ಆಗಮಿಸಿದ್ದಳು. ಮಂಜು ಪೊನ್ನಂಪೇಟೆ ಸಮೀಪದ ಕಾನೂರು ರಸ್ತೆ ಮುಗುಟಗೇರಿ ಬಳಿಯ ಕೋಳೆರ ಚಿಟ್ಟಿಯಪ್ಪನವರ ಲೈನ್ ಮನೆಯಲ್ಲಿದ್ದು ಅವರ ತೋಟದಲ್ಲಿ ಕಾರ್ಮಿಕನಾಗಿದ್ದಾನೆ. ಕಳೆದ ಎಂಟು ದಿನಗಳಿಂದ ಇಲ್ಲಿಯೇ ವಾಸವಿದ್ದ ಬೇಬಿಯನ್ನು ಕೊಲ್ಲುವುದಾಗಿ, ಫೋನ್ ಮೂಲಕ

(ಮೊದಲ ಪುಟದಿಂದ) ಬೋಜ ಬೆದರಿಕೆ ಹಾಕಿದ್ದ. ಘಟನೆ ದಿನವಾದ ಶುಕ್ರವಾರ ಪಾನಮತ್ತಗೊಂಡ ಬೋಜ ತನ್ನ ಪತ್ನಿಯ ಮೇಲಿನ ಕೋಪ ತೀರಿಸಿಕೊಳ್ಳುವ ಉದ್ದೇಶದಿಂದ ಮನೆಯತ್ತ ಹಗಲು ವೇಳೆ ಆಗಮಿಸುವ ಪ್ರಯತ್ನ ಮಾಡಿದ್ದ. ಆದರೆ, ಮನೆಯಲ್ಲಿ ಪತ್ನಿಯ ತಮ್ಮ ಮಂಜು ಇರುವದÀನ್ನು ಮನಗಂಡು ಇತ್ತ ಬರುವ ಪ್ರಯತ್ನ ಮಾಡಲಿಲ್ಲ.

ಮಂಜು ವಾಸವಿರುವ ಲೈನ್ ಮನೆಗೆ, ಸುತ್ತಮುತ್ತಲಿನಲ್ಲಿ ವಾಸವಿರುವ ಬಂಧುಗಳು ಗುಡ್‌ಫ್ರೆöÊಡೆ ಹಬ್ಬವನ್ನು ಆಚರಿಸಲು ಮಕ್ಕಳಾದಿಯಾಗಿ ಏಳೆಂಟು ಮಂದಿ ಆಗಮಿಸಿ ಹಬ್ಬದ ಅಡುಗೆ ಮಾಡಿ ಖುಷಿಯಿಂದಲೇ ಊಟ ಮಾಡಿ ಮೊಬೈಲ್‌ನಲ್ಲಿ ವೀಡಿಯೋ ನೋಡಿಕೊಂಡು ನಿದ್ರೆಗೆ ಜಾರಿದ್ದಾರೆ. ಒಂದು ಕೊಠಡಿಯಲ್ಲಿ ಬೇಬಿ ಸೇರಿದಂತೆ ಆರು ಮಂದಿ ನಿದ್ದೆ ಮಾಡಿದ್ದರು. ಉಳಿದವರು ಇನ್ನೊಂದು ಕೋಣೆಯಲ್ಲಿ ಮಲಗಿದ್ದರು.

ಮಧ್ಯರಾತ್ರಿ ವೇಳೆ ಬೇಬಿಯ ಪತಿ ಬೋಜ ಮನೆಗೆ ಆಗಮಿಸಿ ಮಂಜು ಇರುವ ಮನೆಯ ಹಿಂದಿನ ಹಾಗೂ ಮುಂದಿನ ಬಾಗಿಲನ್ನು ಭದ್ರಪಡಿಸಿ ಸಮೀಪದ ನೀರಿನ ಟ್ಯಾಂಕ್ ಪೈಪ್ ಅನ್ನು ಭದ್ರಪಡಿಸಿ ಅಲ್ಲೆ ಇದ್ದ ಏಣಿಯ ಸಹಾಯದಿಂದ ಮನೆಯ ಮೇಲೆ ತೆರಳಿದ್ದಾನೆ. ಹೆÀಂಚು ತೆಗೆದ ಬೋಜ ತನ್ನೊಂದಿಗೆ ತಂದಿದ್ದ ಪೆಟ್ರೋಲ್ ಅನ್ನು ಒಂದೇ ಸಮನೆ ಸುರಿದಿದ್ದಾನೆ. ಕೂಡಲೇ ಬೆಂಕಿ ಇಟ್ಟಿದ್ದಾನೆ. ನಿದ್ರೆಯಲ್ಲಿದ್ದು ಎಚ್ಚರಗೊಂಡವರು ಬೊಬ್ಬೆ ಹಾಕಿದರೂ ಪ್ರಯೋಜನವಾಗಲಿಲ್ಲ. ದಿಢೀರ್ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸಮೀಪದ ಕೊಠಡಿಯಲ್ಲಿ ಮಲಗಿದ್ದ ಮಂಜು ಹಾಗೂ ತೋಲ ಇದರಿಂದ ಎಚ್ಚರಗೊಂಡು ಮನೆಯ ಬಾಗಿಲನ್ನು ತೆರೆಯುವ ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಕೂಡಲೇ ಬುದ್ದಿ ಉಪಯೋಗಿಸಿದ ಮಂಜು ಹೆಂಚು ತೆಗೆದು ಹೊರ ನಡೆದು ಬಾಗಿಲನ್ನು ತೆರೆದಿದ್ದಾನೆ. ತಕ್ಷಣ ಸಮೀಪದಲ್ಲಿದ್ದ ತೋಟ ಮಾಲೀಕರ ಮನೆಗೆ ತೆರಳಿ ನಡೆದ ಘಟನೆ ಬಗ್ಗೆ ಮಾಹಿತಿ ಒದಗಿಸಿದ್ದಾನೆ. ಸ್ಥಳಕ್ಕೆ ಧಾವಿಸಿದ ಮಾಲೀಕರು ಆಟೋ ರಿಕ್ಷಾ ಸಹಾಯದಿಂದ ಸುಟ್ಟ ಗಂಭೀರ ಸ್ವರೂಪದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬೆಳಿಗ್ಗೆ ೭-೧೫ ಕ್ಕೆ ಮೂವರು ಆಸ್ಪತ್ರೆಯಲ್ಲಿ ಮ್ರೃತಪಟ್ಟಿದ್ದಾರೆ.

ಸುದ್ದಿ ತಿಳಿದ ತೋಟ ಮಾಲೀಕರು ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುಂಜಾನೆ ಏಳು ಘಂಟೆಗೆ ಎಸ್.ಪಿ.ಕ್ಷಮಾಮಿಶ್ರಾ ಹಾಗೂ ಅಧಿಕಾರಿಗಳು ಆಗಮಿಸಿ ಮಾಹಿತಿ ಪಡೆದರು. ಮಧ್ಯಾಹ್ನ ಒಂದು ಗಂಟೆಗೆ ಐಜಿಪಿ ಆಗಮಿಸಿ ಪರಿಶೀಲನೆ ನಡೆಸಿದರು. ಆರೋಪಿಯ ಸುಳಿವು ಲಭ್ಯವಿದ್ದು, ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿರುವುದಾಗಿ ಮಾಧ್ಯಮಕ್ಕೆ ಮಾಹಿತಿ ಒದಗಿಸಿದರು.

ಮೊದಲೇ ಸ್ಕೆಚ್

ತನ್ನ ಪತ್ನಿ ಬೇಬಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಾ ದಿನ ಕಳೆಯುತ್ತಿದ್ದ ಬೋಜ ಪತ್ನಿಯನ್ನು ಎಲ್ಲಿಯೂ ನೆಮ್ಮದಿಯಾಗಿ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಅನವಶ್ಯಕವಾಗಿ ಜಗಳ ಮಾಡುತ್ತಿದ್ದ ಕಾರಣ ಬೇಬಿ ತನ್ನ ತಮ್ಮ ಮಂಜುವಿನ ಮನೆಯಲ್ಲಿ ಆಶ್ರಯ ಪಡೆಯಲು ಆಗಮಿಸಿ ನಾಲ್ಕು ದಿನ ಕಳೆದಿತ್ತು.ಇದರಿಂದ ಬೋಜ ಇತ್ತ ಬರುವ ಮನಸ್ಸು ಮಾಡಲಿಲ್ಲ. ತೆರಳಿದರೆ ಮಂಜುವಿನ ಭಯ ಕಾಡುತ್ತಿತ್ತು.ಇದರಿಂದ ತನ್ನ ಪತ್ನಿಯನ್ನು ಕೊಲ್ಲಲೇಬೇಕು ಎಂಬ ನಿರ್ಧಾರ ತೆಗೆದುಕೊಂಡ ಬೋಜ ಶುಕ್ರವಾರ ಮಧ್ಯಾಹ್ನದ ವೇಳೆ ಸಮೀಪದ ಪೆಟ್ರೋಲ್ ಬಂಕ್‌ನಿAದ ಪೆಟ್ರೋಲ್ ಖರೀದಿಸಿ ಮಂಜುವಿನ ಮನೆಯ ಸಮೀಪದ ತೋಟದಲ್ಲಿ ಅಡಗಿ ಕುಳಿತಿದ್ದಾನೆ.ಎಲ್ಲರೂ ನಿದ್ರೆಗೆ ಜಾರಿದ ವೇಳೆ ಮನೆಯ ಬಾಗಿಲನ್ನು ಭದ್ರ ಪಡಿಸಿ ಅಮಾನವೀಯ ಕೃತ್ಯ ಎಸಗಿದ್ದಾನೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದರು.

ಅಂತ್ಯಕ್ರಿಯೆ ಸಮಸ್ಯೆ

ಮೃತಪಟ್ಟ ವ್ಯಕ್ತಿಗಳು ಅನ್ಯ ಧರ್ಮಕ್ಕೆ ಸೇರಿದ ಹಿನ್ನೆಲೆಯಲ್ಲಿ ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಲಿಲ್ಲ. ಹುಣಸೂರು ಭಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಮೃತದೇಹಗಳನ್ನು ಬಂಧುಗಳು ಸಾಗಿಸಿದರು. ಈ ನಡುವೆ ಮಡಿಕೇರಿಯಲ್ಲಿಯೂ ಹಿಂದೂ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ನಡೆಸುವ ಪ್ರಯತ್ನ ಸಫಲವಾಗಲಿಲ್ಲ. ಘಟನಾ ಸ್ಥಳದಲ್ಲಿ ಗೋಣಿಕೊಪ್ಪ ಸಿಪಿಐ ಜಯರಾಂ, ಶ್ರೀಧರ್, ಠಾಣಾಧಿಕಾರಿಗಳಾದ ಕುಮಾರ್, ಸುಬ್ಬಯ್ಯ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು. ಇಬ್ಬರು ಗಾಯಾಳುಗಳಾದ ಮಂಜು ಹಾಗೂ ತೋಲಾ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಭಾಗ್ಯ ಹಾಗೂ ಪಾಜೆ ಎಂಬವರುಗಳು ಮೈಸೂರಿನಲ್ಲಿ ಚಿಕಿತ್ಸೆ ಪಡೆÀಯುತ್ತಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಾವಿಗೀಡಾದವರ ಸಂಬAಧಗಳು

ಆರೋಪಿ ಬೋಜನ ಪತ್ನಿ ಬೇಬಿ(೪೦) ಮೃತರಾಗಿದ್ದಾರೆ. ಇನ್ನುಳಿದಂತೆ ಸ್ಥಳದಲ್ಲಿ ಸಾವಿಗೀಡಾದವರು ಹಬ್ಬಕ್ಕಾಗಿ ಮನೆಗೆ ಬಂದಿದ್ದ ಮಂಜುವಿನ ಸಂಬAಧಿ ತೋಲನ ಪುತ್ರಿ ಪ್ರಾರ್ಥನಾ (೬) ಹಾಗೂ ತೋಲನ ಅತ್ತೆ ಚೀತೆ(೪೫).

ಆಸ್ಪತ್ರೆಯಲ್ಲಿ ಸಾವಿಗೀಡಾದ ಮಕ್ಕಳ ಪೈಕಿ ಮಂಜುವಿನ ಪ್ರಥಮ ಪತ್ನಿ ಸುಜಾತಳಲ್ಲಿ ಜನಿಸಿದ ಮಕ್ಕಳಾದ ಪ್ರಕಾಶ್ ಮತ್ತು (೬) ವಿಶ್ವಾಸ್(೭) . ಸುಜಾತ ಕೈಕೇರಿಯಲ್ಲಿ ಮತ್ತ್ತೊಬ್ಬ ಪುತ್ರನ ಜೊತೆ ವಾಸವಾಗಿದ್ದಾಳೆ. ಸುಜಾತಳ ಸಹೋದರಿ ಭೋಜಕ್ಕಿಯನ್ನು ಮಂಜು ದ್ವಿತೀಯ ವಿವಾಹವಾಗಿದ್ದು ಈಕೆಗೆ ಆದರ್ಶ್ ಎಂಬ ೮ ತಿಂಗಳ ಪುತ್ರನಿದ್ದು ಮಂಜುವಿನೊAದಿಗೆ ಈಕೆ ವಾಸವಾಗಿದ್ದಾಳೆ. ತಾಯಿ ಮತ್ತು ಮಗು ಘಟನೆ ಸಂದರ್ಭ ಅದೃಷ್ಟವಶಾತ್ ಅಪಾಯದಿಂದ ಪಾರಾಗಿ ಬದುಕಿದ್ದಾರೆ. ಆಸ್ಪತ್ರೆÉಯಲ್ಲಿ ಸಾವಿಗೀಡಾದ ಮತ್ತೋರ್ವ ವಿಶ್ವಾಸ್ (೪) ಎಂಬ ಬಾಲಕ ಮಂಜುವಿನ ಸಂಬAಧಿ ತೋಲನ ಪುತ್ರನಾಗಿದ್ದಾನೆ.