*ಸಿದ್ದಾಪುರ, ಏ. ೩: ವಾಲ್ನೂರು ಗ್ರಾಮದ ಶ್ರೀಬಸವೇಶ್ವರ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ದೇವತಕ್ಕರಾದ ಎಂ.ಬಿ. ದೇವಯ್ಯ ಅವರ ಮನೆಯಿಂದ ಭಂಡಾರ ತರುವ ಮೂಲಕ ಆರಂಭವಾದ ವಾರ್ಷಿಕ ಉತ್ಸವದಲ್ಲಿ ಅರ್ಚಕರಾದ ಶಂಕರಪ್ಪ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಪಲ್ಲಕ್ಕಿ ಹೊತ್ತು ಅಮ್ಮಂಗಲ ಬಸವೇಶ್ವರ ದೇವಾಲಯಕ್ಕೆ ತೆರಳುವ ಸಂದರ್ಭ ಮನೆ ಮನೆಗಳಿಂದ ಪೂಜೆ ಸಲ್ಲಿಸಲಾಯಿತು.

ತ್ಯಾಗತ್ತೂರು ಶ್ರೀಭಗವತಿ ದೇವಾಲಯದಲ್ಲೂ ಪೂಜೆ, ಪುನಸ್ಕಾರಗಳು ನಡೆದವು. ಉತ್ಸವದ ಸಂದರ್ಭ ಕೋವಿಡ್ ಸೋಂಕು ನಿವಾರಣೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ದೇವಾಲಯ ಸಮಿತಿಯ ಅಧ್ಯಕ್ಷರಾದ ಜಿ.ಎನ್. ರಾಮಪ್ಪ, ಪ್ರಮುಖರಾದ ಜಿ.ಆರ್. ಭುವನೇಂದ್ರ, ಜಿ.ಆರ್. ವಿವೇಕ್, ಎ.ವಿ. ಶಾಂತಕುಮಾರ್, ಎಂ.ಬಿ. ಸುರೇಶ್, ಎ.ವಿ. ಕಾರ್ಯಪ್ಪ ಮತ್ತಿತರರು ಉತ್ಸವದಲ್ಲಿ ಪಾಲ್ಗೊಂಡಿದ್ದರು.