ಮಡಿಕೇರಿ, ಏ. ೩: ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ೨೦೨೫ಕ್ಕೆ ಕ್ಷಯ ಮುಕ್ತ ದೇಶವನ್ನಾಗಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ಕಲಾ ತಂಡದಿAದ ಕುಶಾಲನಗರ ಮಾರುಕಟ್ಟೆ ಮತ್ತು ಸೋಮವಾರಪೇಟೆ ಬಸ್ ನಿಲ್ದಾಣದಲ್ಲಿ ಕ್ಷಯ ರೋಗ ನಿರ್ಮೂಲನೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ಬೀದಿ ನಾಟಕ ಪ್ರದರ್ಶನ ನಡೆಯಿತು. ಕಲಾವಿದ ಈ. ರಾಜು ಮತ್ತು ತಂಡದವರು ಬೀದಿನಾಟಕ ಮೂಲಕ ಜಾಗೃತಿ ಮೂಡಿಸಿದರು.