ಮಡಿಕೇರಿ, ಏ. ೪: ಮಡಿಕೇರಿಯಲ್ಲಿ ಮೂರು ದಿನಗಳ ಕಾಲ ಜರುಗಿದ ಜಲವರ್ಣ ಕಲಾಶಿಬಿರದಲ್ಲಿ ರಾಜ್ಯದ ವಿವಿಧೆಡೆಗಳಿಂದ ಪಾಲ್ಗೊಂಡಿದ್ದ ಕಲಾವಿದರು ಕೊಡಗಿನ ವೈವಿಧ್ಯತೆಗಳ ಬಗ್ಗೆ ಅತ್ಯಾಕರ್ಷಕ ಕಲಾಚಿತ್ರಗಳನ್ನು ರೂಪಿಸಿದರು. ಒಂದಕ್ಕಿAತ ಒಂದು ಕಲಾಕೃತಿಗಳು ಪ್ರಕೃತಿ ಸೊಬಗಿನಿಂದ ಸ್ಫೂರ್ತಿ ಪಡೆದು ಬಣ್ಣಬಣ್ಣದ ಚಿತ್ತಾರದಲ್ಲಿ ಹೊಸತನದ ರಂಗಿನಿAದ ಮನಸೂರೆಗೊಂಡವು.

ಭಾರತೀಯ ವಿದ್ಯಾಭವನ ಮತ್ತು ಕರ್ನಾಟಕ ಲಲಿತ ಕಲಾ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಜರುಗಿದ ಕಲಾಶಿಬಿರ ಕ್ಯಾನ್ವಸ್ ಮತ್ತು ಜಲವರ್ಣದಲ್ಲಿ ಅಪೂರ್ವ ಕಲಾಕೃತಿಗಳ ರಚನೆಗೆ ಕಾರಣವಾಯಿತು.

ಮಡಿಕೇರಿಯ ಮಂಗೇರಿರ ಮುತ್ತಣ್ಣ ವೃತ್ತದ ಪರಿಸರ ಹಾಗೂ ಕೊಡವ ಮಹಿಳೆಯ ಅತ್ಯಾಕರ್ಷಕ ಚಿತ್ರ ಚಾಮರಾಜನಗರದ ಕಲಾವಿದ ಎಸ್.ಮಧುಸೂದನ್ ಅವರ ಕುಂಚದಿAದ ಅರಳಿತು.

ಮಂಜುಮುಸುಕಿದ ರಾಜಾಸೀಟ್ ಕಲಾಕೃತಿಯನ್ನು ಉಡುಪಿಯ ಸಂತೋಷ್ ಚಿತ್ರಿಸಿದರು. ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಯಲ್ಲಿ ಮಾವುತ ಸಾಗುತ್ತಿರುವ ದೃಶ್ಯವನ್ನು ತಮ್ಮ ಕುಂಚದಲ್ಲಿ ದಾವಣಗೆರೆಯ ಬೋರಯ್ಯ ಸೆರೆಹಿಡಿದರು. ರಾಜಾಸೀಟ್‌ನ ನಿಸರ್ಗ ವೈಭವÀವನ್ನು ಕಣ್ಣಿಗೆ ಕಟ್ಟುವಂತೆ ಬೆಂಗಳೂರಿನ ಡಾ.ಅಪ್ಪಾಸಾಹೇಬ ಗಾಣಿಗೇರ ಚಿತ್ರಿಸಿದರು.

ಬಾಗಲಕೋಟೆಯ ಕಲಾವಿದೆ ಪ್ರಿಯದರ್ಶಿನಿ ಶಹಾಪೂರ, ಬಳ್ಳಾರಿಯ ಕಲಾವಿದೆ ಕೃಷ್ಣವೇಣಿ, ಹಾಸನದ ವಸಂತಕುಮಾರ್ ಸೇರಿದಂತೆ ಇನ್ನಿತರ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಬಣ್ಣದಲ್ಲಿ ವರ್ಣಿಸಿದರು.

ಕೊಡಗಿನ ಪರಿಸರ ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ. ಇಲ್ಲಿನ ಸಂಸ್ಕೃತಿ, ವಾತಾವರಣ ಕಲಾಶಿಬಿರಕ್ಕೆ ಅತ್ಯಂತ ಸೂಕ್ತ ತಾಣವಾಗಿದೆ ಎಂದು ಕಲಾವಿದರು ಮೆಚ್ಚುಗೆಯ ಮಾತುಗಳನ್ನಾಡಿದರು.

ಕಲಾಶಿಬಿರದ ಆಯೋಜಕರಾದ ಭಾರತೀಯ ವಿದ್ಯಾಭವನ ಬೆಂಗಳೂರಿನ ಸದಸ್ಯೆ, ಹೆಸರಾಂತ ಭರತನಾಟ್ಯ ಕಲಾವಿದೆ ನಾಗಲಕ್ಷಿö್ಮ ರಾವ್ ಪ್ರತಿಕ್ರಿಯಿಸಿ, ಕಳೆದ ವರ್ಷ ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಹಲವಾರು ಕಲಾವಿದರು ಆರ್ಥಿಕವಾಗಿ ನಲುಗಿದ್ದರು. ಕಲಾರಚನೆಯ ಉತ್ಸಾಹವೇ ಬತ್ತಿ ಹೋಗಿತ್ತು. ಹೀಗಾಗಿ ಚಿತ್ರಕಲಾವಿದರಲ್ಲಿ ಮತ್ತೆ ಸ್ಪೂರ್ತಿ ತುಂಬಿ ಕಲಾರಚನೆಗೆ ಪ್ರೋತ್ಸಾಹ ತುಂಬುವ ನಿಟ್ಟಿನಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಸಹಯೋಗದಲ್ಲಿ ಕಲಾಶಿಬಿರವನ್ನು ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದೆವು. ಮೂರು ದಿನಗಳ ಶಿಬಿರದಲ್ಲಿ ಮೂಡಿಬಂದ ಚಿತ್ರಗಳು ಅತ್ಯದ್ಬುತವಾಗಿ ಮೂಡಿಬಂದಿದ್ದು ಮುಂದಿನ ದಿನಗಳಲ್ಲಿ ಕೊಡಗಿಗೆ ಮತ್ತಷ್ಟು ಕಲಾವಿದರು ಬರಲು ಈ ಶಿಬಿರದಲ್ಲಿ ರಚಿತವಾದ ಕಲಾಕೃತಿಗಳು ಪ್ರೇರಣೆಯಾಗಲಿದೆ ಎಂದರು.

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಪ್ರಧಾನಕಾರ್ಯದರ್ಶಿ ಬಾಲಾಜಿ ಕಶ್ಯಪ್ ಪ್ರತಿಕ್ರಿಯಿಸಿ, ಹಲವಾರು ವರ್ಷಗಳ ಬಳಿಕ ಕೊಡಗಿನಲ್ಲಿ ಭಾರತೀಯ ವಿದ್ಯಾಭವನ ವತಿಯಿಂದ ಆಯೋಜಿತ ಕಲಾಶಿಬಿರವು ಯಶಸ್ವಿಯಾಗಿ ನಡೆದ ತೃಪ್ತಿಯಿದೆ. ಶಿಬಿರದ ಸಂಚಾಲಕರಾಗಿದ್ದ ಕೊಡಗಿನ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಪ್ರಯತ್ನವೂ ಶಿಬಿರದ ಯಶಸ್ಸಿನಲ್ಲಿದೆ. ಮುಂದೆಯೂ ಬೇರೆ ಬೇರೆ ಪ್ರಕಾರಗಳ ಶಿಬಿರವನ್ನು ಆಯೋಜಿಸುವ ಚಿಂತನೆಯಿದೆ ಎಂದರು.