ಮಡಿಕೇರಿ, ಏ. ೩: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿ ಯೇಷನ್ ವತಿಯಿಂದ ಎಸ್.ಇ.ಎಸ್. ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೇತ್ರಿ ಸಂಘಟನೆಯ ಸಹಯೋಗದೊಂದಿಗೆ ೧೭ ನೇ ವರ್ಷದ ಜಿಲ್ಲಾ ಮಟ್ಟದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ತಾ. ೪ ರಿಂದ (ಇಂದಿನಿAದ) ತಾ. ೧೧ರ ವರೆಗೆ ಚೆರಿಯಪರಂಬು ಜ. ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಸೈಫ್ ಆಲಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕೂಟಕ್ಕೆ ಮಡಿಕೇರಿ, ಏ. ೩: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿ ಯೇಷನ್ ವತಿಯಿಂದ ಎಸ್.ಇ.ಎಸ್. ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೇತ್ರಿ ಸಂಘಟನೆಯ ಸಹಯೋಗದೊಂದಿಗೆ ೧೭ ನೇ ವರ್ಷದ ಜಿಲ್ಲಾ ಮಟ್ಟದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ತಾ. ೪ ರಿಂದ (ಇಂದಿನಿAದ) ತಾ. ೧೧ರ ವರೆಗೆ ಚೆರಿಯಪರಂಬು ಜ. ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಸೈಫ್ ಆಲಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕೂಟಕ್ಕೆ (ಮೊದಲ ಪುಟದಿಂದ) ಉದ್ಘಾಟಿಸಲಿದ್ದಾರೆ. ಎಸ್.ಇ.ಎಸ್. ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಪಿ.ಎಂ. ರಶೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಟಿ.ಎಸ್.ಕೆ. ಕೊಂಡAಗೇರಿ, ಬೆಂಗಳೂರು ಮೊಬೈಲ್ ಪ್ಯಾಲೇಸ್‌ನ ಅಬ್ದುಲ್ ರಶೀದ್, ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಖಾದರ್, ಹೊದ್ದೂರು ಗ್ರಾ.ಪಂ. ಸದಸ್ಯ ಹಂಸ ಕೊಟ್ಟಮುಡಿ, ನಾಪೋಕ್ಲು ಗ್ರಾ.ಪಂ. ಉಪಾಧ್ಯಕ್ಷ ಕುರೈಶಿ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಕಿರಣ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಾಕೌಟ್ ಮಾದರಿಯ ಪಂದ್ಯಾವಳಿ ೫ ಓವರ್‌ಗೆ ಸೀಮಿತವಾಗಿದ್ದು, ೧೩೨ ತಂಡಗಳು ನೋಂದಾಯಿಸಿಕೊAಡಿವೆ. ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ೫೦,೦೦೦, ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ೨೫,೦೦೦ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ತಾ. ೧೧ ರಂದು ಸೆಮಿ ಫೈನಲ್, ಫೈನಲ್ ಪಂದ್ಯಾಟ ಹಾಗೂ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಸೋಸಿಯೇಷನ್ ಸದಸ್ಯರಾದ ಹಮೀದ್, ಎಸ್.ಇ.ಎಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಅಬ್ದುಲ್ ರಶೀದ್, ಕಾರ್ಯದರ್ಶಿ ಅಬ್ದುಲ್ ಶಮೀರ್, ನಿರ್ದೇಶಕ ಸಲೀಂ, ಬೇತ್ರಿ ಜಮಾಅತ್ ಅಧ್ಯಕ್ಷ ಮುಸ್ತಫಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.