ನಾಪೋಕ್ಲು, ಏ. ೫: ಪುರಾಣ ಪ್ರಸಿದ್ಧ ಕುಂಜಿಲ- ನಾಲ್ಕೇರಿ ಶ್ರೀ ಭಗವತಿ ದೇವಿಯ ಉತ್ಸವವು ತಾ. ೫ರಿಂದ (ಇಂದಿನಿAದ) ತಾ ೮ರ ವರೆಗೆ ನಡೆಯಲಿದೆ. ಸಂಜೆ ದೀಪಾರಾಧನೆ, ದೇವರ ಬಲಿ, ಮಹಾಪೂಜೆ, ಅನ್ನಸಂತರ್ಪಣೆ, ತಾ. ೬ ರಂದು ಬೆಳಿಗ್ಗೆ ಇರ್‌ಬೊಳಕು, ಪಟ್ಟಣಿ ಹಬ್ಬದ ಪ್ರಯುಕ್ತ ಅಲಂಕಾರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೇವರ ನೃತ್ಯ ಬಲಿ ನಡೆಯಲಿದೆ. ತಾ. ೭ ರಂದು ಬೆಳಿಗ್ಗೆ ಅಲಂಕಾರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೇವಿಯ ಅವಭೃತ ಸ್ನಾನ, ನೃತ್ಯ ಬಲಿ, ವಸಂತ ಪೂಜೆ ನಡೆಯಲಿದ್ದು, ತಾ. ೮ ರಂದು ದೇವಳದಲ್ಲಿ ಶುದ್ಧ ಕಲಶದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಳದ ತಕ್ಕಮುಖ್ಯಸ್ಥರು ಮತ್ತು ಆಡಳಿತ ಮಂಡಳಿ ತಿಳಿಸಿದ್ದಾರೆ.