ಮಡಿಕೇರಿ,ಏ.೧: ಇಂದಿನಿAದ ಜಿಲ್ಲೆಯಲ್ಲಿ ೪೫ ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಹಾಕುವ ಕಾರ್ಯ ಆರಂಭವಾಗಿದ್ದು ಇಂದು ೭೩೯ ಮಂದಿ ಲಸಿಕೆ ಪಡೆದಿದ್ದಾರೆ.

ಮಂಗಳವಾರ ಹಾಗೂ ಗುರುವಾರ ಗರ್ಭಿಣಿಯರಿಗೆ, ಮಕ್ಕಳಿಗೆ ಚುಚ್ಚುಮದ್ದು ಇತ್ಯಾದಿ ಚಿಕಿತ್ಸೆ ನೀಡಬೇಕಾಗಿರುವುದರಿಂದ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಇಂದು ಕೋವಿಡ್ ಲಸಿಕೆ ನೀಡಿಲ್ಲ. ಬದಲಿಗೆ ೨೮ ಪ್ರಾಥಮಿಕ ಆರೋಗ್ಯ ಕೇಂದ್ರ , ಜಿಲ್ಲಾಸ್ಪತ್ರೆ ,೨ ತಾಲೂಕು ಆಸ್ಪತ್ರೆ ಮತ್ತು ೭ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಕೋವಿಡ್ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ೪೫ ವರ್ಷ ಮೇಲ್ಪಟ್ಟವರು ೧,೫೫,೬೦೬ ಮಂದಿ ಇದ್ದು , ರಕ್ತದೊತ್ತಡ , ಮಧುಮೇಹ ಇತ್ಯಾದಿ ಕಾಯಿಲೆಗಳಿದ್ದ ೨೦ ಸಾವಿರಕ್ಕೂ ಅಧಿಕ ಮಂದಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಇದೀಗ ಸರ್ಕಾರದ ಆದೇಶದಂತೆ ಕಾಯಿಲೆ ಉಳ್ಳವರು; ಇಲ್ಲದವರು ಎಲ್ಲರಿಗೂ ಲಸಿಕೆ ಹಾಕಬೇಕಾಗಿದ್ದು, ಈ ತಿಂಗಳೊಳಗಾಗಿ ಇದು ಪೂರ್ಣಗೊಳ್ಳಬೇಕಿದೆ. ೪೫ ವರ್ಷ ಮೇಲ್ಪಟ್ಟವರಲ್ಲಿ ಇನ್ನೂ ಸಾಕಷ್ಟು ಮಂದಿ ಲಸಿಕೆ ಪಡೆಯಬೇಕಾಗಿದೆ. ನಿರೀಕ್ಷಿತ ಉತ್ಸಾಹ ಕಂಡುಬರುತ್ತಿಲ್ಲ ಎಂದು ತಿಳಿಸಿರುವ ಆರ್‌ಸಿಹೆಚ್ ಅಧಿಕಾರಿ ಡಾ. ಗೋಪಿನಾಥ್ ಎಲ್ಲರೂ ಆತಂಕವನ್ನು ಬದಿಗೊತ್ತಿ ಲಸಿಕೆ ಪಡೆಯುವಂತಾಗ ಬೇಕೆಂದು ಸಲಹೆ ನೀಡಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಬೆಳಗ್ಗಿನಿಂದಲೇ ೪೫ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಸಂಜೆಯವರೆಗೂ ನಡೆಯಿತು. ಬೆಳಿಗ್ಗೆ ಸುಮಾರು ೧೦.೩೦ ಗಂಟೆ ವೇಳೆಗೆ ೫೪ ಮಂದಿ ಲಸಿಕೆ ಪಡೆದಿದ್ದರು. ಲಸಿಕೆ ಪಡೆಯಲು ಬಂದವರಿಗೆ ಲಸಿಕೆ ನೀಡಿ ಬಳಿಕ ಕೆಲ ಹೊತ್ತು ಅಲ್ಲಿಯೇ ಕುಳ್ಳಿರಿಸಿ ಯಾವುದೇ ಅಡ್ಡ

(ಮೊದಲ ಪುಟದಿಂದ) ಪರಿಣಾಮಗಳಿಲ್ಲ ಎಂದು ಖಚಿತಗೊಂಡ ಬಳಿಕ ಕಳುಹಿಸಿಕೊಡಲಾಗುತ್ತಿತ್ತು.

ಲಸಿಕೆ ಪಡೆದು ‘ಶಕ್ತಿ' ಯೊಂದಿಗೆ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್ ಕೋವಿಡ್ ಲಸಿಕೆಯಿಂದ ಯಾವುದೇ ತೊಂದರೆಯಿಲ್ಲ ಆದ್ದರಿಂದ ಪ್ರತಿಯೊಬ್ಬರು ಲಸಿಕೆ ಪಡೆದು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕೆಂದರು. ಪಿ.ಬಿ. ಭರತ್ ಕುಮಾರ್ ಎಂಬವರು ಕೋವಿಡ್ ಲಸಿಕೆ ಬಗ್ಗೆ ವಿನಾ ಕಾರಣ ಜನರಿಗೆ ಭಯ ಉಂಟುಮಾಡಲಾಗುತ್ತಿದ್ದು ಆ ರೀತಿ ಭಯಪಡುವಂತದ್ದೇನು ಇಲ್ಲ. ಧೈರ್ಯವಾಗಿ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ವರ್ ಸಮಸ್ಯೆ ಇಲ್ಲ

ಕೋವಿಡ್ ಲಸಿಕೆ ನೀಡಿ ಆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವ ಸಂಬAಧ ಜಿಲ್ಲೆಯಲ್ಲಿ ಆರಂಭದಲ್ಲಿ ಇದ್ದಷ್ಟು ಸರ್ವರ್ ಸಮಸ್ಯೆ ಈಗ ಇಲ್ಲ. ಸರ್ವರ್ ವ್ಯವಸ್ಥೆ ಸಾಕಷ್ಟು ಪ್ರಗತಿ ಕಂಡಿದೆ. ಸೂರ್ಲಬ್ಬಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ಅಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಿಲ್ಲ ಎಂದು ಆರ್‌ಸಿಹೆಚ್ ಅಧಿಕಾರಿ ಡಾ. ಗೋಪಿನಾಥ್ ತಿಳಿಸಿದ್ದಾರೆ.

ಪ್ರಸ್ತುತ ೧೫ ಸಾವಿರದಷ್ಟು ಲಸಿಕೆ ಇದ್ದು, ತಾ. ೪ ರಂದು ಪುನಹ ಲಸಿಕೆ ಬರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆಗೆ ಸಂಬAಧಿಸಿದ ಮಾಹಿತಿಯನ್ನು ‘ಅಪ್ಲೋಡ್’ ಮಾಡುವ ಸಂಬAಧ ಸಿಬ್ಬಂದಿ ಕೊರತೆ ಕಂಡು ಬಂದರೆ ಬೇರೆ ಇಲಾಖೆಗಳಿಂದ ನಿಯೋಜನೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿರುವ ೧೮೦ ಆರೋಗ್ಯ ಉಪ ಕೇಂದ್ರಗಳಲ್ಲಿ ೧೧೨ ಕೇಂದ್ರಗಳಿಗೆ ಸ್ವಂತ ಕಟ್ಟಡವಿದ್ದು, ಸ್ವಂತ ಕಟ್ಟಡವಿರುವ ಕೇಂದ್ರಗಳಲ್ಲೂ ಕೋವಿಡ್ ಲಸಿಕೆ ನೀಡುವ ಸಂಬAಧ ಚಿಂತನೆ ನಡೆಸಲಾಗುತ್ತಿದೆ ಎಂದು ಗೋಪಿನಾಥ್ ಹೇಳಿದರು. ಕೋವಿಡ್ ಲಸಿಕಾ ಅಭಿಯಾನದಲ್ಲಿ ಕೊಡಗು ಪ್ರಸ್ತುತ ೫ನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.