ಮಡಿಕೇರಿ, ಏ. ೧: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟ ಹಾಗೂ ಕರಾವಳಿಯಲ್ಲಿ ಮಹಾಮಳೆಯಿಂದ ಉಂಟಾದ ಭೂಕುಸಿತ ತಡೆಗಟ್ಟಲು ಹಾಗೂ ನಿಯಂತ್ರಿಸುವ ಮಾರ್ಗೋಪಾಯಗಳ ಬಗ್ಗೆ ಅರಣ್ಯ, ಪರಿಸರ ಮತ್ತು ಜೀವಶಾಸ್ತç ಇಲಾಖೆಯ ಭೂಕುಸಿತ ಅಧ್ಯಯನ ಸಮಿತಿ ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗ್ಗಡೆ ಅಶೀಸರ ಅಧ್ಯಕ್ಷತೆಯ ತಂಡ ಮಾಡಿದ ಅಧ್ಯಯನ ಪ್ರತಿಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಾಯಿತು.

ಕೇಂದ್ರ ಸರಕಾರದ ಅಧೀನದ ಇಸ್ರೋ ಅಂಗ ಸಂಸ್ಥೆಯಾದ ಎನ್.ಆರ್.ಎಸ್.ಸಿ ಮತ್ತು ಭಾರತೀಯ ಭೂಗರ್ಭಶಾಸ್ತç ಸರ್ವೇಕ್ಷಣಾ ಸಂಸ್ಥೆ ಈಗಾಗಲೇ ಪಶ್ಚಿಮಘಟ್ಟದಲ್ಲಿ ಈವರೆಗೂ ಸಂಭವಿಸಿರುವ ಭೂಕುಸಿತಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿದೆ. ಅಧ್ಯಯನ ಆಧಾರದಲ್ಲಿ ಭವಿಷ್ಯದಲ್ಲಿ ಭೂಕುಸಿತ ಉಂಟಾಗುವ ಪ್ರದೇಶಗಳನ್ನು ಊಹಿಸಲಾಗಿದೆ. ಇದರ ಅನ್ವಯ ಕೊಡಗು ಜಿಲ್ಲೆಯ ವೀರಾಜಪೇಟೆ, ಸೋಮವಾರಪೇಟೆ, ಮಡಿಕೇರಿ ತಾಲೂಕು ಸೇರಿದಂತೆ ಸಕಲೇಶಪುರ, ಕೊಪ್ಪ, ಮೂಡಿಗೇರಿ, ಶೃಂಗೇರಿ, ಚಿಕ್ಕಮಗಳೂರು, ಸಾಗರ, ಕಾರಾವಾರ, ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಜೋಯ್ಡಾ, ಕಾರ್ಕಾಳ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಮಂಗಳೂರನ್ನು ಭೂಕುಸಿತ ಉಂಟಾಗುವ ಪ್ರದೇಶ ಎಂದು ಪರಿಗಣಿಸಲಾಗಿದೆ.

ಭೂಕುಸಿತದ ಕಾರಣ

ಪ್ರಕೃತಿಗೆ ವಿರುದ್ಧವಾದ ಪ್ರಕ್ರಿಯೆ ಹಾಗೂ ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ಭೂಕುಸಿತಕ್ಕೆ ಮೂಲ ಕಾರಣ ಎಂದು ಅಧ್ಯಯನದ ವರದಿ ಹೇಳಿದೆ.

ಕಲ್ಲುಮಿಶ್ರಿತ ಸಡಿಲವಾದ ಮಣ್ಣಿನ ರಚನೆ, ಕಡಿದಾದ ಗುಡ್ಡಗಳು, ತೆಳುವಾದ ಮೇಲ್ಮಣ್ಣಿನ ಹೊದಿಕೆ ಇವೆಲ್ಲ ಭೂಕುಸಿತಕ್ಕೆ ಪೂರಕವಾಗಬಲ್ಲ ಸನ್ನಿವೇಶ ಸೃಷ್ಟಿಸಬಲ್ಲವು. ಕಲ್ಲುಬಂಡೆಗಳ ಅದಿರಿನ ಸ್ವರೂಪ ಮತ್ತು ರಚನೆ, ಮೇಲ್ಮಣ್ಣು ಹಾಗೂ ಕೆಳಸ್ಥರದ ಭೂರಚನೆ, ಇಳಿಜಾರಿನ ಪ್ರದೇಶದ ಭೂಸ್ವರೂಪದ ಬದಲಾವಣೆ, ನೀರಿನ ಹರಿವಿನ ನೈಸರ್ಗಿಕ ಕಾಲುವೆಗಳ ನಾಶ, ಹೂಳು ತುಂಬಿರುವುದು, ಅಭಿವೃದ್ಧಿ ಕಾರ್ಯಕ್ಕೆ ಇಳಿಜಾರನ್ನು ಕತ್ತರಿಸುವುದು. ಮಣ್ಣು ಸಡಿಲವಾದ ಪ್ರದೇಶದಲ್ಲಿ ಮಳೆ ನೀರು ಹರಿದು ಮತ್ತು ಇಂಗುವುದು, ಮಣ್ಣು ಸವೆತ, ಅನ್ಯ ಉದ್ದೇಶಕ್ಕೆ ಅರಣ್ಯಭೂಮಿಯನ್ನು ತ್ವರಿತವಾಗಿ ಹಾಗೂ ವ್ಯಾಪಾಕರವಾಗಿ ಭೂಪರಿವರ್ತನೆ ಮಾಡುವುದು ಸೇರಿದಂತೆ ಇನ್ನಿತರ ಪ್ರಕೃತಿ ವಿರುದ್ಧದ ಕ್ರಿಯೆ ಸಮಸ್ಯೆಗೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗುವ ಭೂಕುಸಿತಗಳು ತೇವಾಂಶಭರಿತ ಮಣ್ಣು ಹಾಗೂ ಕಲ್ಲುಬಂಡೆಗಳ ಜಾರುವಿಕೆ ಎಂದು ತಜ್ಞರು ಗುರುತಿಸಿದ್ದಾರೆ.

ಸಮಗ್ರ ಭೂಬಳಕೆ ವಿಧಾನ

ಮಲೆನಾಡು ಹಾಗೂ ಕರಾವಳಿಯಲ್ಲಿ ಭೂಕುಸಿತ ಸಾಧ್ಯತೆಗಳಿರುವ ಪ್ರದೇಶಗಳೆಂದು ವೈಜ್ಞಾನಿಕವಾಗಿ ಗುರುತಿಸಿರುವ ಪ್ರದೇಶಗಳಲ್ಲಿ ೭ ಅಂಶಗಳನ್ನು ಒಳಗೊಂಡ ಸಮಗ್ರ ಭೂಬಳಕೆ ವಿಧಾನವನ್ನು ಜಾರಿಗೆ ತರಬೇಕಾಗಿದೆ ಎಂಬ ಸಲಹೆ ಸಮಿತಿ ನೀಡಿದೆ. ಸೂಕ್ತ ಭೂಬಳಕೆ ಯೋಜನಾ ನಕ್ಷೆ ರಚಿಸಬೇಕು. ಈ ಮೂಲಕ ಭವಿಷ್ಯದ ಭೂಪರಿವರ್ತನೆ ಹಾಗೂ ನೆಲ, ಜಲ ನಿರ್ವಹಣೆ ನಿರ್ಧಾರ ಕೈಗೊಳ್ಳಬೇಕು. ಇದರೊಂದಿಗೆ ಕಡಿದಾದ ಪ್ರದೇಶಗಳ ನಿರ್ವಹಣೆ ಮಾಡಬೇಕು ಅಪಾಯದ ಊರಿನ ವ್ಯಾಪ್ತಿಯ ನದಿಗಳ ಸಂರಕ್ಷಣೆ, ಮಣ್ಣು ಕೊರೆತ ಆಗದಂತೆ, ಅರಣ್ಯ ಅತಿಕ್ರಮಣ ತಡೆ, ಮರಕಡಿತವನ್ನು ನಿಲ್ಲಿಸಬೇಕು. ಅನಧಿಕೃತ ಗಣಿಗಾರಿಕೆ ಹಾಗೂ ಕ್ವಾರಿಗಳ ನಿಯಂತ್ರಿಸಬೇಕು. ಕಾಡು ಸೀಳುವ ಯೋಜನೆಗಳ ನಿರ್ವಹಣೆಯಾಗಬೇಕು. ಎಲ್ಲ ಬಗೆಯ ಮೇಲ್ಮೆöÊ ನೆಲಬಳಕೆಗೆ ಮಾರ್ಗದರ್ಶಿ ಸೂತ್ರ ಅನುಸರಿಸಬೇಕು. ಕಾಡು ಹಾಗೂ ರಸ್ತೆಯಂಚಿನ ಅತಿಕ್ರಮಣ ನಿಯಂತ್ರಿಸಲು ಕ್ರಮವಹಿಸಬೇಕು. ಏಕಪ್ರಬೇದ ನೆಡುತೋಪುಗಳ ನಿಯಂತ್ರಣ ಆಗಬೇಕೆಂಬ ಅಂಶಗಳನ್ನು ಸಮಿತಿ ಸಲಹೆ ರೂಪದಲ್ಲಿ ನೀಡಿದೆ.

‘ಲ್ಯಾಂಡ್-ಸ್ಲಿಪ್’ ಅಧ್ಯಯನ

ಕೇಂದ್ರ ಸರಕಾರದ ಲ್ಯಾಂಡ್ ಸ್ಲಿಪ್ ಅಧ್ಯಯನ ಯೋಜನೆಯನ್ನು ಕರ್ನಾಟಕಕ್ಕೆ ವಿಸ್ತರಿಸುವ ಅಗತ್ಯವಿದ್ದು, ರಾಜ್ಯ ಸರಕಾರ ಈ ಸಂಬAಧ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಬಹುದಾಗಿದೆ ಎಂದು ಸೂಚಿಸಿದೆ.

ಭಾರತ ಸರಕಾರದ ಅಧೀನದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಬ್ರಿಟಿಷ್ ಸರಕಾರದ ಸಹಭಾಗಿತ್ವದೊಂದಿಗೆ ಲ್ಯಾಂಡ್-ಸ್ಲಿಪ್ ಎಂಬ ಭೂಕುಸಿಯ ಕುರಿತಾಗಿನ ಮಹತ್ವದ ಅಧ್ಯಯನ ಯೋಜನೆಯನ್ನು, ಈಗಾಗಲೇ ದೇಶದ ವಿವಿಧ ಭೂಕುಸಿತ ಪ್ರದೇಶಗಳಲ್ಲಿ ಹಮ್ಮಿಕೊಂಡಿದೆ. ಭೂಕುಸಿತ ಪೂರ್ವದಲ್ಲಿಯೇ ಮುನ್ಸೂಚನೆ ನೀಡುವ ಅತ್ಯಾಧುನಿಕ ತಂತ್ರಜ್ಞಾನ ರೂಪಿಸುವ ಯೋಜನೆ ಇದಾಗಿದ್ದು, ಈ ಯೋಜನೆಯನ್ನು ಕರ್ನಾಟಕದಲ್ಲಿ ಭೂಕುಸಿತ ಘಟಿಸುವ ಹೆಚ್ಚಿನ ಸಾಧ್ಯತೆಗಳಿರುವ ಕೊಡಗು ಜಿಲ್ಲೆ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಅವಶ್ಯಕತೆ ಎಂದು ಸಮಿತಿ ಹೇಳಿದೆ. ಇದರೊಂದಿಗೆ ಭೂಕುಸಿತ ಸಾಧ್ಯತೆ ಇರುವ ಪ್ರದೇಶಗಳ ಜಿಲ್ಲೆಯಲ್ಲಿ ರಾಜ್ಯ ಸರಕಾರ ಈಗಾಗಲೇ ಒಪ್ಪಿಸಿರುವ ಸುಸ್ಥಿರ ಅಭಿವೃದ್ಧಿ ಗುರಿ ಸೂತ್ರಗಳ ಅನ್ವಯವೇ ಎಲ್ಲ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸಬೇಕು ಎಂದಿದೆ.

ಮಾರ್ಗೋಪಾಯಗಳು

ಭೂಕುಸಿತ ಕಡಿಮೆ ಮಾಡುವ ನಿಯಂತ್ರಣ ಮತ್ತು ಪರಿಹಾರದ ಮಾರ್ಗೋಪಾಯಗಳ ಬಗ್ಗೆ ಸರಕಾರಕ್ಕೆ ೫ ಅಂಶಗಳ ಸಲಹೆಗಳನ್ನು ಸಮಿತಿ ನೀಡಿದೆ.

ಸಾಂಸ್ಥಿಕ ನೆಲೆಗಟ್ಟು ಮೂಲಕ ಕರ್ನಾಟಕ ರಾಜ್ಯ ಅವಘಡ ನಿಯಂತ್ರಣ ಪ್ರಾಧಿಕಾರದ ನೇತೃತ್ವದಲ್ಲಿ ಸೂಕ್ತ ನೀತಿ ರೂಪಿಸಬೇಕು. ಇದರೊಂದಿಗೆ ಕಾನೂನು ಅನ್ವಯ ವಿಪತ್ತು ಗುರುತಿಸುವಿಕೆ. ತಾಂತ್ರಿಕ ಸಹಭಾಗಿತ್ವ, ತಳಮಟ್ಟದ ನಿರ್ವಹಣಾ ಸ್ಥಾಪಿಕ ಸ್ವರೂಪ, ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿ ಕೋಶಗಳ ಕೇಂದ್ರೀಕೃತ ಬಳಕೆ ಮಾಡಿಕೊಳ್ಳುವಂತೆ ಮಾರ್ಗೋಪಾಯ ನೀಡಿದೆ.