ಮಡಿಕೇರಿ, ಏ. ೧: ನ್ಯಾಯಾಲಯದ ಆವರಣದಲ್ಲೇ ಮಹಿಳಾ ವಕೀಲೆಯರಿಬ್ಬರು ಪರಸ್ಪರ ಜಗಳ ಮಾಡಿಕೊಂಡಿದ್ದು, ಹಲ್ಲೆ ನಡೆಸಿರುವ ಆರೋಪದಂತೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿರುವ ಪ್ರಸಂಗವೊAದು ವರದಿಯಾಗಿದೆ. ಪೊನ್ನಂಪೇಟೆ ನ್ಯಾಯಾಲಯ ಆವರಣದಲ್ಲಿ ಈ ಘಟನೆ ಮಾ. ೩೦ರಂದು ನಡೆದಿದೆ. ಅಲ್ಲಿನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ವಕೀಲೆಯರಾದ ಭಾರತಿ ಹಾಗೂ ಜ್ಯೋತಿ ಎಂಬವರ ನಡುವೆ ಕಲಹ ನಡೆದಿದೆ ಎಂದು ತಿಳಿದುಬಂದಿದೆ.

ಕಲಾಪ ಮುಗಿಸಿ ಹಿಂತಿರುಗುವ ವೇಳೆ ಕಾರು ನಿಲುಗಡೆ ಸ್ಥಳದಲ್ಲಿ ವಕೀಲೆ ಭಾರತಿ ಹಾಗೂ ಮದನ್ ಕಾರನ್ನು ಅಡ್ಡಲಾಗಿ ನಿಲ್ಲಿಸಿದ್ದರು.

ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಬ್ಬರ ಕಲಹ

(ಮೊದಲ ಪುಟದಿಂದ) ಅವಾಚ್ಯ ಪದಗಳಿಂದ ನಿಂದಿಸಿದ ಭಾರತಿ ತಮ್ಮ ಮೇಲೆ ಹಲ್ಲೆಯನ್ನೂ ನಡೆಸಿದ್ದು, ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಇತರ ವಕೀಲರು ಬಿಡಿಸಿದ ಸಂದರ್ಭ ಬೆದರಿಕೆಯೊಡ್ಡಿ ತೆರಳಿದ್ದಾರೆ. ಹಲ್ಲಗೊಳಗಾದ ತಾನು ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹಲ್ಲೆಗೆ ವಕೀಲ ಮದನ್ ಅವರ ಕುಮ್ಮಕ್ಕು ಇದೆ ಎಂದು ಜ್ಯೋತಿ ಅವರು ದೂರು ನೀಡಿದ್ದಾರೆ.

ಮತ್ತೊಂದೆಡೆ ಪ್ರಕರಣವೊಂದರ ವಿಚಾರದಲ್ಲಿ ಸಾಕ್ಷಿ ಹೇಳಬಾರದೆಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಮೇಲೆ ವಕೀಲೆ ಜ್ಯೋತಿ ಹಾಗೂ ಆಕೆÀಯೊಂದಿಗಿದ್ದ ರಫೀಕ್ ಹಲ್ಲೆ ನಡೆಸಿರುವುದಾಗಿ ವಕೀಲೆ ಭಾರತಿ ಅವರಿಂದಲೂ ದೂರು ದಾಖಲಾಗಿದೆ. ಇವರೂ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಉಭಯ ಕಡೆಯವರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಮಹಿಳಾ ವಕೀಲೆಯರ ಕಲಹ ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ. ನ್ಯಾಯಾಲಯದ ಆವರಣದಲ್ಲಿ ಇಂತಹ ಘಟನೆ ನಡೆಯಬಾರದೆಂದು ಹಲವು ವಕೀಲರು ಅಭಿಪ್ರಾಯಪಟ್ಟಿದ್ದು, ಇದರ ಮುಂದಿನ ಕ್ರಮ ಏನೆಂಬದರ ಬಗ್ಗೆ ಕಾದು ನೋಡುತ್ತಿದ್ದಾರೆ.