-
ಮಡಿಕೇರಿ, ಏ.೧ : ಅಭ್ಯತ್‌ಮಂಗಲದ ಶ್ರೀ ವೈದ್ಯನಾಥ ದೈವರಾಜ ಕೋಟೆದಬಬ್ಬು ಸ್ವಾಮಿ ಸೇವಾ ಸಮಿತಿ ವತಿಯಿಂದ ತಾ. ೩, ೪ ಹಾಗೂ ೫ ರಂದು ಶ್ರೀ ವೈದ್ಯನಾಥೇಶ್ವರ ದೈವಸ್ಥಾನದ ವಾರ್ಷಿಕೋತ್ಸವ ನಡೆಯಲಿದೆ.
ತಾ. ೩ ರಂದು (ನಾಳೆ) ಬೆಳಿಗ್ಗೆ ೮ ಗಂಟೆಗೆ ಶ್ರೀ ವೈದ್ಯನಾಥ ಸ್ವಾಮಿಯ ಭಂಡಾರ ಹೇರಿಕೆ ನಡೆಯಲಿದ್ದು, ರಾತ್ರಿ ೧೦ ಗಂಟೆಗೆ ಕೋಟೆದ ಬಬ್ಬು ಸ್ವಾಮಿ ಮತ್ತು ತಂಗಡಿ ತನ್ನಿಮಾನಿಗ ದೈವಗಳ ನೇಮೋತ್ಸವ ಪ್ರಾರಂಭವಾಗಲಿದೆ.
ತಾ. ೪ ರಂದು ರಾತ್ರಿ ಶ್ರೀ ಚಾಮುಂಡೇಶ್ವರಿ, ಕತ್ತಲಕಾನದ ಗುಳಿಗ ಮತ್ತು ಜಾಗದ ಗುಳಿಗ ಹಾಗೂ ಪಂಜುರ್ಲಿ ಗುಳಿಗ ನೇಮೋತ್ಸವ ನಡೆಯಲಿದ್ದು, ಏ. ೫ ರಂದು ಬೆಳಗ್ಗೆ ರಾಹುಗುಳಿಗ ನೇಮೋತ್ಸವ ಜರುಗಲಿದೆ. ತಾ. ೩ ಮತ್ತು ೪ ರಂದು ಸಾರ್ವಜನಿಕ ಭಕ್ತಾಧಿಗಳಿಗೆ ರಾತ್ರಿ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.