ವೀರಾಜಪೇಟೆ, ಏ. ೧: ಧರ್ಮದ ಹೆಸರಿನಲ್ಲಿ ಅಧರ್ಮ ಮಾಡುವುದು ಧರ್ಮಗಳನ್ನು ನೀಡಿದಂತಹ ದೇವನಿಗೆ ಮಾಡುವ ಅವಮಾನವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ ಹೇಳಿದರು.

ವೀರಾಜಪೇಟೆಯ ಸರಕಾರಿ ಪ್ರಥಮ ಕಾಲೇಜಿನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯವ್ಯಾಪಿಯಾಗಿ ನಡೆಸಿದ್ದ “ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ” ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತರಿಗೆ, ಶಿಕ್ಷಕರುಗಳಿಗೆ ಹಾಗೂ ವಕೀಲರುಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರ್ಮಗಳು ಮನುಷ್ಯನಿಗೆ ಬದುಕನ್ನು ಕಲಿಸುತ್ತದೆ. ಧರ್ಮಗಳು ಮನುಷ್ಯನನ್ನು ದೇವನೊಂದಿಗೆ ಜೋಡಿಸುತ್ತವೆ. ನೈಜ ಧಾರ್ಮಿಕ ವಿಶ್ವಾಸಿಗಳು ಎಂದೂ ಅಧರ್ಮಕ್ಕೆ ಕೈಹಾಕುವುದಿಲ್ಲ. ಪ್ರವಾದಿ ಮುಹಮ್ಮದ್(ಸ) ಅವರು ಕೇವಲ ಮುಸಲ್ಮಾನರ ಪ್ರವಾದಿಯಲ್ಲ. ಅವರು ಇಡೀ ಮಾನವಕುಲಕ್ಕೆ ಮಾರ್ಗದರ್ಶಕರಾಗಿ ದೇವನಿಂದ ಅವತೀರ್ಣಗೊಂಡ ಅಂತಿಮ ಪ್ರವಾದಿಯಾಗಿದ್ದರು ಎಂದರು.

ಅತಿಥಿಗಳಾಗಿದ್ದ ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರೂ, ಧರ್ಮಗುರುಗಳೂ ಆದ ರೆ.ಫಾ. ಮದುಲೈಮುತ್ತು ಮಾತನಾಡಿ, ಎಲ್ಲಿ ಧರ್ಮವಿರುವುದಿಲ್ಲವೋ ಅಲ್ಲಿ ಅಧರ್ಮ ಪಾರಮ್ಯತೆಯನ್ನು ಮೆರೆಯುತ್ತದೆ.

ಧರ್ಮದ ಅಭಾವದಲ್ಲಿ ಅನೈತಿಕತೆ, ಮೌಲ್ಯಗಳ ಕೊರತೆ ಮತ್ತು ಅಶಾಂತಿ ಮನುಷ್ಯನ ಮೇಲೆ ಹಿಡಿತ ಸಾಧಿಸುತ್ತವೆ. ಧರ್ಮಗಳಿಂದ ಮಾತ್ರ ನೆಮ್ಮದಿ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು. ಮತ್ತೊಬ್ಬ ಅತಿಥಿ ಬಾಳೆಲೆ ವಿಜಯಲಕ್ಷಿö್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ, ತನ್ನ ಧರ್ಮವನ್ನು ಗೌರವಿಸುವಂತೆ ಇತರರ ಧರ್ಮವನ್ನು ಗೌರವಿಸುವಾತನು ದೇವನ ಮುಂದೆ ಆದರಣೀಯನಾಗುತ್ತಾನೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ.ಕೆ. ಬೋಪಯ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ತಾಲೂಕು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯೆ ಬೊವ್ವೇರಿಯಂಡ ಆಶಾ ಸುಬ್ಬಯ್ಯ ಮಾತನಾಡಿದರು.

ಪ್ರಬಂಧ ಸ್ಪರ್ಧೆಯಲ್ಲಿ ಪತ್ರಕರ್ತರ ವಿಭಾಗದಲ್ಲಿ ಕೊಡಗು ಒಳಗೊಂಡ ಮಂಗಳೂರು ವಲಯಕ್ಕೆ ವೀರಾಜಪೇಟೆಯ ಹವ್ಯಾಸಿ ಪತ್ರಕರ್ತೆ ಉಷಾ ಪ್ರೀತಮ್ ಅವರು ಪ್ರಥಮ ಬಹುಮಾನವಾದ ೧೫ ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು. ವಕೀಲರ ವಿಭಾಗದಲ್ಲಿ ಕುಶಾಲನಗರದ ಎಂ.ಆರ್. ಜಯರಾಮ್ ದ್ವಿತೀಯ ಹಾಗೂ ವೀರಾಜಪೇಟೆಯ ಸಿ.ಕೆ. ಧರ್ಮವನ್ನು ಗೌರವಿಸುವಂತೆ ಇತರರ ಧರ್ಮವನ್ನು ಗೌರವಿಸುವಾತನು ದೇವನ ಮುಂದೆ ಆದರಣೀಯನಾಗುತ್ತಾನೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ.ಕೆ. ಬೋಪಯ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ತಾಲೂಕು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯೆ ಬೊವ್ವೇರಿಯಂಡ ಆಶಾ ಸುಬ್ಬಯ್ಯ ಮಾತನಾಡಿದರು.

ಪ್ರಬಂಧ ಸ್ಪರ್ಧೆಯಲ್ಲಿ ಪತ್ರಕರ್ತರ ವಿಭಾಗದಲ್ಲಿ ಕೊಡಗು ಒಳಗೊಂಡ ಮಂಗಳೂರು ವಲಯಕ್ಕೆ ವೀರಾಜಪೇಟೆಯ ಹವ್ಯಾಸಿ ಪತ್ರಕರ್ತೆ ಉಷಾ ಪ್ರೀತಮ್ ಅವರು ಪ್ರಥಮ ಬಹುಮಾನವಾದ ೧೫ ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು. ವಕೀಲರ ವಿಭಾಗದಲ್ಲಿ ಕುಶಾಲನಗರದ ಎಂ.ಆರ್. ಜಯರಾಮ್ ದ್ವಿತೀಯ ಹಾಗೂ ವೀರಾಜಪೇಟೆಯ ಸಿ.ಕೆ.