ಪೊನ್ನಂಪೇಟೆ, ಏ. ೧: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ (ಪೊನ್ನಂಪೇಟೆ ನಿಸರ್ಗ ಜೇಸಿಸ್) ವತಿಯಿಂದ ತಾ. ೪ ರಂದು ಜೇಸಿ ಸದಸ್ಯರಿಗಾಗಿ ಮತ್ತು ಆಸಕ್ತ ಸಾರ್ವಜನಿಕರಿಗಾಗಿ ‘ಪರಿಣಾಮಕಾರಿ ಭಾಷಣ ಕಲೆ (ಇPS)' ಮತ್ತು 'ಅಧ್ಯಕ್ಷತೆ ಹಾಗೂ ಸಂಸದೀಯ ನಡಾವಳಿ (ಅಂPP)' ಕುರಿತ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವನ್ನು ಆಯೋಜಿಸ ಲಾಗಿದೆ. ಗೋಣಿಕೊಪ್ಪಲಿನ ಹೊಟೇಲ್ ಸಿಲ್ವರ್ ಸ್ಕೆöÊ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಈ ಎರಡು ವಿಷಯಗಳ ಕುರಿತು ಪ್ರತ್ಯೇಕವಾಗಿ ವಿಶೇಷ ತರಬೇತಿ ನೀಡಲಾಗುವುದು ಎಂದು ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಎಂ.ಎನ್. ವನಿತ್‌ಕುಮಾರ್ ಮತ್ತು ಕಾರ್ಯದರ್ಶಿ ಎ.ಪಿ. ದಿನೇಶ್ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತೀಯ ಜೇಸಿಸ್‌ನ ರಾಷ್ಟಿçÃಯ ತರಬೇತುದಾರರಾದ ತುಮಕೂರಿನ ಡಿ.ವಿ. ಶ್ರೀಕಾಂತ್ ಅವರು ಪ್ರಧಾನ ತರಬೇತುದಾರರಾಗಿ ಪಾಲ್ಗೊಂಡು ಈ ವಿಶೇಷ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.

ಅಂದು ಬೆಳಿಗ್ಗೆ ೧೦ ಗಂಟೆಗೆ ಆರಂಭವಾಗಲಿರುವ ಕಾರ್ಯಾಗಾರ ವನ್ನು ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಕೆ. ವಿಜು ಸುಬ್ರಮಣಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯುವ ರಾಜಕಾರಣಿ ತೀತಿರ ಧರ್ಮಜ ಉತ್ತಪ್ಪ ಅವರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಾಗಾರದ ಯೋಜನಾ ನಿರ್ದೇಶಕರಾಗಿ ಕ್ಯಾಪ್ಟನ್ ಬಿ.ಎಂ. ಗಣೇಶ್ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ವನಿತ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳಾದ ೯೮೮೬೦೬೦೩೪೨, ೯೮೮೦೫೦೪೨೦೮ ಅಥವಾ ೯೪೪೮೫೮೨೫೮೬ ಅನ್ನು ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.