ಡಿ.ಕೆ.ಶಿ. - ಲಕ್ಷಿö್ಮÃ ಹೆಬ್ಬಾಳ್ಕರ್ ವಿರುದ್ಧ ದೂರು

ಬೆಂಗಳೂರು, ಏ. ೨: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಹಿರಂಗಗೊAಡಿರುವ ರಾಸಲೀಲೆ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಶಾಸಕಿ ಲಕ್ಷಿö್ಮÃ ಹೆಬ್ಬಾಳ್ಕರ್ ವಿರುದ್ಧ ದೂರು ದಾಖಲಾಗಿದೆ. ಬನಶಂಕರಿ ನಿವಾಸಿ ಶ್ರೀಧರ್ ಮೂರ್ತಿ ಎಂಬವರು ಡಿ.ಕೆ. ಶಿವಕುಮಾರ್, ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿಜಯ್ ಮುಳಗುಂದ, ಶಂಕಿತ ಮಾಜಿ ಪತ್ರಕರ್ತ ನರೇಶ್ ಗೌಡ ಸೇರಿ ಐವರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಹನಿಟ್ರಾö್ಯಪ್ ಹಾಗೂ ಒಳಸಂಚಿಗೆ ಸುಮಾರು ರೂ. ೫೦೦ ಕೋಟಿ ಅಕ್ರಮ ವ್ಯವಹಾರ ನಡೆದಿದ್ದು, ಇಸಿಐಆರ್ ದಾಖಲಿಸಿಕೊಂಡು ತನಿಖೆ ಮಾಡಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ನೀಡಿರುವ ದೂರು ಆಧರಿಸಿ ತನಿಖೆ ನಡೆಸಬೇಕು. ಸಿಡಿ ಪ್ರಕರಣದಲ್ಲಿ ಜಾರಕಿಹೊಳಿಯನ್ನು ಸಿಲುಕಿಸಲು ಹನಿಟ್ರಾö್ಯಪ್ ಮಾಡಲಾಗಿದೆ. ಇದಕ್ಕಾಗಿ ಸುಮಾರು ರೂ. ೫೦೦ ಕೋಟಿ ಖರ್ಚು ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಹೀಗಾಗಿ ಇಸಿಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ದೆಹಲಿಯ ಇಡಿ ನಿರ್ದೇಶಕ ಹಾಗೂ ಬೆಂಗಳೂರಿನ ಜಂಟಿ ನಿರ್ದೇಶಕರಿಗೆ ಶ್ರೀಧರ್ ಮೂರ್ತಿ ದೂರು ನೀಡಿದ್ದಾರೆ.

ಹೆಚ್ಚುವರಿ ಹಣ ಪಡೆದ ಬಾರ್ ಮಾಲೀಕನಿಗೆ ದಂಡ

ಶಿವಮೊಗ್ಗ, ಏ. ೨: ಎಂಆರ್‌ಪಿಗಿAತ ರೂ. ೪೨ ಹೆಚ್ಚುವರಿ ಶುಲ್ಕ ವಿಧಿಸಿದ್ದಕ್ಕಾಗಿ ಮದ್ಯದಂಗಡಿ ಮಾಲೀಕರಿಗೆ ಗ್ರಾಹಕ ವಿವಾದ ಪರಿಹಾರ ಆಯೋಗ ದುಬಾರಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗದ ಅಧ್ಯಕ್ಷ ಚಂಚಲ ಸಿ.ಎಂ, ಸದಸ್ಯರಾದ ಸವಿತಾ ಬಿ. ಪಟ್ಟನಶೆಟ್ಟಿ ಮತ್ತು ಪಿ.ವಿ. ಲಿಂಗರಾಜ್ ನೇತೃತ್ವದ ಪೀಠ ದುಬಾರಿ ಬೆಲೆಗೆ ವೈನ್ ಮಾರಿದ ಶ್ರೀನಿಧಿ ವೈನ್ಸ್ ಮಾಲೀಕರ ದುಬಾರಿ ದಂಡ ವಿಧಿಸಿದೆ. ಅಲ್ಲದೆ ದಾವೆ ಹೂಡಿದ ಸಂತ್ರಸ್ತರಿಗೆ ಈ ಕೂಡಲೇ ಪರಿಹಾರ ನೀಡುವಂತೆ ಸೂಚಿಸಿದೆ. ಆಯೋಗವು ವೈನ್ ಶಾಪ್ ಮಾಲೀಕರಿಗೆ ತಾವು ಹೆಚ್ಚುವರಿಯಾಗಿ ಪಡೆದ ರೂ. ೪೨ ಹಣಕ್ಕೆ ವಾರ್ಷಿಕ ಶೇ. ೧೦ ಬಡ್ಡಿಯೊಂದಿಗೆ ಸೇವೆಯ ಕೊರತೆಗೆ ಪರಿಹಾರವಾಗಿ ರೂ. ೧,೦೦೦, ಮಾನಸಿಕ ಸಂಕಟದ ಪರಿಹಾರಕ್ಕೆ ರೂ. ೧,೦೦೦ ಮತ್ತು ದಾವೆ ವೆಚ್ಚಕ್ಕೆ ರೂ. ೨,೫೦೦ ಮತ್ತು ಆಯೋಗದ ಗ್ರಾಹಕ ಕಲ್ಯಾಣ ನಿಧಿಯ ಬ್ಯಾಂಕ್ ಖಾತೆಗೆ ರೂ. ೫,೦೦೦ ಹಣ ಠೇವಣಿ ಇಡುವಂತೆ ಸೂಚಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ೨೧ ರಂದು ಭದ್ರಾವತಿ ಮೂಲದ ದೂರುದಾರ ಸಿ. ಶಿವರಾಮ್ ಎಂಬವರು ತಲಾ ೯೦ ಎಂಎಲ್‌ನ ೨೧ ಪ್ಯಾಕೆಟ್ ಬೆಂಗಳೂರು ವಿಸ್ಕಿಯನ್ನು ೬೩೦ ರೂ.ಗೆ ಖರೀದಿಸಿದ್ದರು. ಈ ಪ್ಯಾಕೆಟ್ ಎಂಆರ್‌ಪಿ ದರ ೨೭.೯೮ ರೂಗಳಾಗಿದ್ದು, ೨೧ ಪ್ಯಾಕೆಟ್‌ಗೆ ೫೮೭.೫೮ ರೂ.ಗಳಾಗುತ್ತದೆ. ಆದರೆ ಶ್ರೀನಿಧಿ ವೈನ್ಸ್ ಶಿವರಾಮ್ ಬಳಿಯಿಂದ ೬೩೦ ರೂ ಪಡೆದಿತ್ತು. ಎಂಆರ್‌ಪಿಗಿAತ ಹೆಚ್ಚು ದರ ಏಕೆ ನೀಡಬೇಕು ಎಂದು ಶಿವರಾಮ್ ಕೇಳಿದಾಗ ಮಾಲೀಕ ಉಡಾಫೆ ಉತ್ತರ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಶಿವರಾಮ್ ನೇರವಾಗಿ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಅಲ್ಲದೆ ರೂ. ೯೫ ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.

ಅನಾರೋಗ್ಯ : ವಿಚಾರಣೆಗೆ ರಮೇಶ್ ಗೈರು

ಬೆಂಗಳೂರು, ಏ. ೨: ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬAಧಿಸಿದAತೆ ಶುಕ್ರವಾರ ವಿಚಾರಣೆಗೆ ಹಾಜರಾಗಬೇಕಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಅನಾರೋಗ್ಯದ ಹಿನ್ನೆಲೆ ಎಸ್‌ಐಟಿ ವಿಚಾರಣೆಗೆ ಗೈರಾಗಿದ್ದಾರೆ. ಈ ಕುರಿತು ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ಅವರಿಗೆ ಆರೋಗ್ಯ ಸಮಸ್ಯೆಯಾಗಿದ್ದರಿಂದ ಇಂದು ಅವರು ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿಸಿದರು. ಈ ವಿಚಾರವನ್ನು ಈಗಾಗಲೇ ಎಸ್‌ಐಟಿ ತನಿಖಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಎರಡು ದಿನ ಕಾಲಾವಕಾಶ ಕೇಳಲಾಗಿದೆ. ಅವರು ಮತ್ತೊಮ್ಮೆ ನೋಟೀಸ್ ನೀಡುವುದಾಗಿ ತಿಳಿಸಿದ್ದಾರೆ ಎಂದರು. ಜಾರಕಿಹೊಳಿ ಅವರಿಗೆ ಯಾವುದೇ ಬಂಧನದ ಭೀತಿ ಇಲ್ಲ. ಅನಾರೋಗ್ಯದ ಹಿನ್ನೆಲೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಅಷ್ಟೇ. ಸದ್ಯ ಅವರು ಗೋಕಾಕ್‌ನಲ್ಲಿಯೇ ಇದ್ದಾರೆ. ಬೇರೆಲ್ಲೂ ತೆರಳಿಲ್ಲ ಎಂದು ಶ್ಯಾಮ್ ಸುಂದರ್ ತಿಳಿಸಿದರು.

ಬೆಂಗಳೂರು ವಿವಿಯಲ್ಲಿ ಅಗ್ನಿ ಅವಘಡ

ಬೆಂಗಳೂರು, ಏ. ೨: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಇಂದು ಬೆಳಿಗ್ಗೆ ವಿವಿಯ ಆವರಣದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ನಾಗರಿಕ ರಕ್ಷಣಾ ಪಡೆ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣಗಳು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಬಾಲಕಿಯ ಗಡಿಪಾರಿಗೆ ಮುಂದಾದ ಅಸ್ಸಾಂ: ಕರೆದುಕೊಳ್ಳಲು ಮ್ಯಾನ್ಮಾರ್ ನಿರಾಕರಣೆ

ಸಿಲ್ಚಾರ್, ಏ. ೨: ೧೪ ವರ್ಷದ ರೋಹಿಂಗ್ಯಾ ಬಾಲಕಿಯನ್ನು ಗಡಿಪಾರು ಮಾಡುವ ವೇಳೆ ಮಣಿಪುರ ಅಂತರಾಷ್ಟಿçÃಯ ಗಡಿಯಲ್ಲಿ ಮ್ಯಾನ್ಮಾರ್ ಸರ್ಕಾರ ಆಕೆಯನ್ನು ಕರೆದುಕೊಳ್ಳಲು ನಿರಾಕರಿಸಿದೆ ಎಂದು ಅಸ್ಸಾಂ ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ ಬಾಲಕಿಯನ್ನು ಅಸ್ಸಾಂನ ಸಿಲ್ಚಾರ್‌ನಿಂದ ಮಣಿಪುರದ ಮೊರೆಹಾನಲ್ಲಿ ಗುರುವಾರ ಗಡಿಪಾರು ಮಾಡಲು ಮುಂದಾಗಿತ್ತು. ಆದರೆ ವಲಸೆ ಕಚೇರಿಯ ಅಧಿಕಾರಿಗಳು ಆಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಕೊರೊನಾ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಚೆಕ್‌ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ. ಯಾವುದೇ ರೀತಿಯ ಗಡಿಪಾರು ಮಾಡಲು ತಮ್ಮ ದೇಶದ ಪರಿಸ್ಥಿತಿ ಸೂಕ್ತವಾಗಿಲ್ಲ ಎಂದು ಮ್ಯಾನ್ಮಾರ್ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪೊಲೀಸ್ ತಂಡವು ಬಾಲಕಿಯೊಂದಿಗೆ ಸಿಲ್ಚಾರ್‌ಗೆ ಹಿಂತಿರುಗಿ ಆಕೆ ವಾಸಿಸುತ್ತಿದ್ದ ಆಶ್ರಯ ಮನೆಗೆ ಕಳುಹಿಸಿದ್ದಾರೆ. ಕ್ಯಾಚರ್ ಜಿಲ್ಲೆಯ ಸಿಲ್ಚಾರ್‌ನ ರೊಂಗ್‌ಪುರ ಪ್ರದೇಶದ ಮನೆಯಲ್ಲಿ ಎರಡು ವರ್ಷಗಳ ಹಿಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ನಿಗೂಢವಾಗಿ ಪತ್ತೆಯಾಗಿದ್ದಳು. ಆಕೆಯ ಪೋಷಕರು ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ನಿರಾಶ್ರಿತರ ಶಿಬಿರದಲ್ಲಿದ್ದರು ಎಂದು ತಿಳಿದುಬಂದಿದೆ.