ಮಡಿಕೇರಿ/ಕುಶಾಲನಗರ, ಮಾ. ೩೦: ಸೂರ್ಯೋದಯಕ್ಕೂ ಮುನ್ನ ಇಂದು ಬೆಳಗ್ಗೆ ೫ ಗಂಟೆ ವೇಳೆಗೆ ಮುಂಜಾನೆಯ ಮಂಜಿನಲಿ ಕುಶ ಮರಳಿ ಬಂದ.. ಕಳೆದ ಒಂದು ವರ್ಷದ ಹಿಂದೆ ದುಬಾರೆ ಸಾಕಾನೆ ತರಬೇತಿ ಶಿಬಿರದಿಂದ ಚೈನು ಮತ್ತು ಬೇಡಿಯನ್ನು ತುಂಡರಿಸಿ ತಪ್ಪಿಸಿಕೊಂಡು ಹೋಗಿದ್ದ ಕುಶ ಇದೀಗ ಮತ್ತೆ ತವರಿಗೆ ಬಂದಿದ್ದಾನೆ.ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಮಾರ್ಗದರ್ಶನದೊಂದಿಗೆ ಡಾ. ಮುಜೀಬ್, ಉಪ ವಲಯ ಅರಣ್ಯಾಧಿಕಾರಿ ಕೆ.ಪಿ ರಂಜನ್, ಮೋಜಣಿದಾರ ಸುಬ್ರಾಯ, ಮಾವುತರು, ಕಾವಾಡಿಗರು ಹಾಗೂ ಮೀನುಕೊಲ್ಲಿ ಶಾಖೆಯ ಅರಣ್ಯ ಸಿಬ್ಬಂದಿಗಳ ಪ್ರಯತ್ನದ ಫಲವಾಗಿ ಕುಶಾಲನಗರ ವಲಯ ವ್ಯಾಪ್ತಿಯ ಮೀನುಕೊಲ್ಲಿ ಮೀಸಲು ಅರಣ್ಯದಲ್ಲಿ ೨೯ ವರ್ಷ ವಯಸ್ಸಿನ ಗಂಡಾನೆಯನ್ನು ಸೆರೆಹಿಡಿಯಲು ಸಾಧ್ಯವಾಯಿತು.

ಈ ತಂಡದ ಜೊತೆಗೆ ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಪ್ರಶಾಂತ, ಧನಂಜಯ, ಸುಗ್ರೀವ ಮತ್ತು ಲಕ್ಷö್ಮಣ ಇವುಗಳ ಸಹಕಾರ ವಿಶೇಷವಾಗಿತ್ತು. ಕಾಡಿನ ಇತರ ಆನೆಗಳೊಂದಿಗೆ ಸುತ್ತಾಡುತ್ತಿದ್ದ ಕುಶನನ್ನು ಅವುಗಳ ತಂಡದಿAದ ಮೊದಲಿಗೆ ಬಿಡಿಸಲಾಯಿತು. ಬಳಿಕ ಸೆರೆಹಿಡಿದು ಪ್ರಸ್ತುತ ಮೀನುಕೊಲ್ಲಿ ಅರಣ್ಯ ಶಾಖೆಯ ಸಿಬ್ಬಂದಿ ವಸತಿಗೃಹದ ಮೀಸಲು

(ಮೊದಲ ಪುಟದಿಂದ) ಅರಣ್ಯದ ಬಳಿ ಕಟ್ಟಿ ಹಾಕಲಾಯಿತು. ಕುಶ ಆನೆಯನ್ನು ಶೀಘ್ರದಲ್ಲಿಯೇ ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ದು ಪುನಃ ತರಬೇತಿ ಮೂಲಕ ಪಳಗಿಸಲಾಗುತ್ತದೆ ಎಂದು ಅರಣ್ಯಾಧಿಕಾರಿ ಅನನ್ಯ ಕುಮಾರ್ ತಿಳಿಸಿದ್ದಾರೆ.

೨೦೧೮ರಲ್ಲಿ ಸೆರೆ – ೨೦೧೯ ರಲ್ಲಿ ಕಾಣೆ.!

೨೦೧೮ರಲ್ಲಿ ಚೆಟ್ಟಳ್ಳಿ ಕಂಡಕೆರೆ ವ್ಯಾಪ್ತಿಯಲ್ಲಿ ಈ ಆನೆ ಜನರಿಗೆ ಕಿರುಕುಳ ನೀಡುತ್ತಿದ್ದದ್ದನ್ನು ತಪ್ಪಿಸುವ ಸಲುವಾಗಿ ಅನುಮತಿ ಪಡೆದು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಬಳಿಕ ದುಬಾರೆ ಆನೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿತ್ತು.

೨೦೧೯ರ ಸೆಪ್ಟೆಂಬರ್ ತಿಂಗಳಲ್ಲಿ ಕುಶ ಶಿಬಿರದಿಂದ ಚೈನು ಮತ್ತು ಬೇಡಿ ಯನ್ನು ತುಂಡರಿಸಿ ತಪ್ಪಿಸಿಕೊಂಡಿತ್ತು. ಮದವೇರಿದ ಪರಿಣಾಮ ಕಾಲಿಗೆ ಕಟ್ಟಲಾಗಿದ್ದ ಚೈನ್‌ಅನ್ನು ಕೂಡ ಕಿತ್ತು ತಪ್ಪಿಸಿಕೊಂಡು ಸುಮಾರು ೧೭ ಆನೆಗಳನ್ನೊಳಗೊಂಡ ಕಾಡಾನೆ ಗುಂಪೊAದನ್ನು ಕುಶ ಸೇರಿಕೊಂಡಿತ್ತು.

ನಿರಂತರ ಕಾರ್ಯಾಚರಣೆ

ಕಾಣೆಯಾದ ದಿನದಿಂದ ಕುಶನ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ಸತತವಾಗಿ ನಡೆಯುತಿತ್ತು. ಆದರೆ, ಕುಶ ಅರಣ್ಯ ಇಲಾಖೆ ಕಾಣಿಗೆ ಬಿದ್ದರು ಸೆರೆಹಿಡಿಯಲಾಗುತ್ತಿರಲಿಲ್ಲ.

ಕಾಡಾನೆ ಹಿಂಡು ಸೇರಿದ್ದ ಕುಶನನ್ನು ಇಲಾಖೆಯವರು ಸೆರೆಹಿಡಿಯಲೆಂದು ಸಮೀಪ ಹೋದರೆ, ಓಡಿ ಹೋಗುತಿತ್ತು. ಸುಮಾರು ೧ ಕಿ.ಮಿ ದೂರದಲ್ಲಿಯೇ ಕಾರ್ಯಾಚರಣೆ ನಡೆಸುವ ತಂಡದವರ ವಾಸನೆ, ಶಬ್ಧ ಕೇಳಿ ತಪ್ಪಿಸಿಕೊಂಡು ಕೈಗೆ ಸಿಗದೆ ಅರಣ್ಯ ಇಲಾಖೆಯನ್ನೇ ಆಟವಾಡಿಸುತಿತ್ತು.

ಕುಶ ಸೇರಿದ್ದ ೧೭ ಆನೆಗಳ ಗುಂಪಿನಲ್ಲಿ ಮರಿಯಾನೆಗಳು ಕೂಡ ಇತ್ತು. ಗುಂಪಿನ ಹೆಣ್ಣಾನೆಗಳು ಆಕ್ರಮಣಕಾರಿ ಸ್ವಭಾವ ಇದ್ದ ಹಿನ್ನೆಲೆ ಕಾರ್ಯಾಚರಣೆ ತೊಡಕಾಗುತಿತ್ತು. ಕುಶನ ಕತ್ತಲ್ಲಿ ಶಿಬಿರದಲ್ಲಿ ಹಾಕಲಾಗಿದ್ದ ಕುಶ ಸೇರಿದ್ದ ೧೭ ಆನೆಗಳ ಗುಂಪಿನಲ್ಲಿ ಮರಿಯಾನೆಗಳು ಕೂಡ ಇತ್ತು. ಗುಂಪಿನ ಹೆಣ್ಣಾನೆಗಳು ಆಕ್ರಮಣಕಾರಿ ಸ್ವಭಾವ ಇದ್ದ ಹಿನ್ನೆಲೆ ಕಾರ್ಯಾಚರಣೆ ತೊಡಕಾಗುತಿತ್ತು. ಕುಶನ ಕತ್ತಲ್ಲಿ ಶಿಬಿರದಲ್ಲಿ ಹಾಕಲಾಗಿದ್ದ ಕುಶ ಸೇರಿದ್ದ ೧೭ ಆನೆಗಳ ಗುಂಪಿನಲ್ಲಿ ಮರಿಯಾನೆಗಳು ಕೂಡ ಇತ್ತು. ಗುಂಪಿನ ಹೆಣ್ಣಾನೆಗಳು ಆಕ್ರಮಣಕಾರಿ ಸ್ವಭಾವ ಇದ್ದ ಹಿನ್ನೆಲೆ ಕಾರ್ಯಾಚರಣೆ ತೊಡಕಾಗುತಿತ್ತು. ಕುಶನ ಕತ್ತಲ್ಲಿ ಶಿಬಿರದಲ್ಲಿ ಹಾಕಲಾಗಿದ್ದ ಕುಶ ಸೇರಿದ್ದ ೧೭ ಆನೆಗಳ ಗುಂಪಿನಲ್ಲಿ ಮರಿಯಾನೆಗಳು ಕೂಡ ಇತ್ತು. ಗುಂಪಿನ ಹೆಣ್ಣಾನೆಗಳು ಆಕ್ರಮಣಕಾರಿ ಸ್ವಭಾವ ಇದ್ದ ಹಿನ್ನೆಲೆ ಕಾರ್ಯಾಚರಣೆ ತೊಡಕಾಗುತಿತ್ತು. ಕುಶನ ಕತ್ತಲ್ಲಿ ಶಿಬಿರದಲ್ಲಿ ಹಾಕಲಾಗಿದ್ದ ಮಾಡಲು ತಂಡÀ ರಚನೆ ಮಾಡಿ ಹಲವೆಡೆ ಕ್ಯಾಮರಾ ಟ್ರಾö್ಯಪ್‌ರ್‌ಗಳನ್ನಿಡಲಾಗಿತ್ತು. ಅರವಳಿಕೆ ಮದ್ದು ಕೂಡ ಸಿದ್ಧ ಮಾಡಲಾಗಿತ್ತು.