ಮಡಿಕೇರಿ, ಮಾ. ೩೦: ಭಾರತೀಯ ವಿದ್ಯಾಭವನ ಮತ್ತು ಕರ್ನಾಟಕ ಲಲಿತ ಕಲಾ ಅಕಾಡೆಮಿ ವತಿಯಿಂದ ಮಡಿಕೇರಿಯಲ್ಲಿ ಏಪ್ರಿಲ್ ೨ ರಿಂದ ೪ ರವರೆಗೆ ಕಲಾ ಶಿಬಿರ ಆಯೋಜಿತವಾಗಿದ್ದು, ಅಂತೆಯೇ ಕಾಲೂರು ಗ್ರಾಮದಲ್ಲಿ ಬೆಂಗಳೂರಿನ ಭಾರತೀಯ ವಿದ್ಯಾಭವನ ಹಾಗೂ ಇನ್ಫೋಸಿಸ್ ಫೌಂಡೇಷÀನ್ ವತಿಯಿಂದ ಏ. ೨ ಹಾಗೂ ೪ ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿತವಾಗಿವೆ.
ಕಲಾ ಶಿಬಿರವನ್ನು ಏಪ್ರಿಲ್ ೨ ರಂದು ಬೆಳಿಗ್ಗೆ ೯.೩೦ ಗಂಟೆಗೆ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಆಯುಕ್ತ ಕೆ.ಆರ್. ರಾಮಕೃಷ್ಣ ಆಗಮಿಸಲಿದ್ದು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಡಿ. ಮಹೇಂದ್ರ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ ಉಪಸ್ಥಿತರಿರುತ್ತಾರೆ. ರಾಜ್ಯದ ವಿವಿಧೆಡೆಗಳ ೧೦ ಕಲಾವಿದರು ಮೂರು ದಿನಗಳ ಕಲಾಶಿಬಿರದಲ್ಲಿ ವೈವಿಧ್ಯಮಯ ಚಿತ್ರಕಲೆ ರಚಿಸಲಿದ್ದಾರೆ.
ಏ. ೪ ರಂದು ಸಂಜೆ ೪.೩೦ ಗಂಟೆಗೆ ಕಾಲೂರು ಗ್ರಾಮದಲ್ಲಿನ ಭಾರತೀಯ ವಿದ್ಯಾಭವನ ‘ಯಶಸ್ವಿ’ ಆವರಣದಲ್ಲಿ ಕಲಾ ಶಿಬಿರದ ಸಮಾರೋಪ ಕಾರ್ಯಕ್ರಮ ಆಯೋಜಿತವಾಗಿದೆ. ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ: ಕಲಾಶಿಬಿರದ ಅಂಗವಾಗಿ ಏಪ್ರಿಲ್ ೨ ರಂದು ಸಂಜೆ ೫ ಗಂಟೆಯಿAದ ೬.೩೦ ಗಂಟೆವರೆಗೆ ಕಾಲೂರು ಗ್ರಾಮದ ಭಾರತೀಯ ವಿದ್ಯಾಭವನದ ‘ಯಶಸ್ವಿ’ ಕ್ಯಾಂಪಸ್ನಲ್ಲಿ ಮುತ್ತುನಾಡು ಅಭಿಮಾನಿ ಒಕ್ಕೂಟ, ಮುತ್ತುನಾಡು ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಜಾನಪದ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂತೆಯೇ ಏಪ್ರಿಲ್ ೪ ರಂದು ಸಂಜೆ ೫ ಗಂಟೆಯಿAದ ೬.೩೦ರವರೆಗೆ ಕಾಲೂರು ಗ್ರಾಮದ ‘ಯಶಸ್ವಿ’ ಕ್ಯಾಂಪಸ್ನಲ್ಲಿ ವಿದ್ವಾನ್ ಹೇಮಂತ-ಹೇರAಭ ಸಹೋದರರಿಂದ ಕೊಳಲು ವಾದನ ಕಾರ್ಯಕ್ರಮ ಆಯೋಜಿತವಾಗಿದೆ.
ಕಾಲೂರಿನಲ್ಲಿ ನಡೆಯುವ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿಚ್ಛಿಸುವ ಕಲಾಸಕ್ತರಿಗಾಗಿ ಏ. ೨ ಮತ್ತು ೪ ರಂದು ಸಂಜೆ ೪ ಗಂಟೆಗೆ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಬಳಿಯಿರುವ ಭಾರತೀಯ ವಿದ್ಯಾಭವನದಿಂದ ವಾಹನ ವ್ಯವಸ್ಥೆ ಮಾಡಲಾಗಿದೆ.
ಅಂತೆಯೇ ಕಲಾವಿದರ ಕಲಾ ರಚನೆಯನ್ನು ನೋಡ ಬಯಸುವ ಆಸಕ್ತರಿಗಾಗಿ ಏ. ೩ ಮತ್ತ ೪ ರಂದು ಮಧ್ಯಾಹ್ನ ೨ ಗಂಟೆಯಿAದ ೪ ಗಂಟೆಯವರೆಗೆ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಶಿಕ್ಷಣ ಸಂಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಭಾರತೀಯ ವಿದ್ಯಾಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕಲಾ ಶಿಬಿರದ ನಿರ್ವಾಹಕ ರೂಪೇಶ್ ನಾಣಯ್ಯ-೯೯೦೦೬೦೩೮೭೨ ಇವರನ್ನು ಸಂಪರ್ಕಿಸಬಹುದು.