ಮಡಿಕೇರಿ, ಮಾ. ೩೦: ಹಿರಿಯ ನಾಗರಿಕರ ವೇದಿಕೆ ವತಿಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರವು ನಗರದ ರೋಟರಿ ಸಂಸ್ಥೆಯಲ್ಲಿ ನಡೆಯಿತು. ಈ ಶಿಬಿರದಲ್ಲಿ ೭೫ ಮಂದಿ ಹಿರಿಯ ನಾಗರಿಕರು ಪಾಲ್ಗೊಂಡಿ ದ್ದರು. ನೇತ್ರ ತಜ್ಞರಾದ ಡಾ. ಪ್ರಶಾಂತ್ ಹಿರಿಯ ನಾಗರಿಕರ ಕಣ್ಣಿನ ತಪಾಸಣೆ ಮಾಡಿದರು. ಕಣ್ಣಿನ ತೊಂದರೆಯಿದ್ದವರಿಗೆ ಉಚಿತವಾಗಿ ಔಷಧಿ ನೀಡಿದರು. ಕನ್ನಡಕ ಅವಶ್ಯಕತೆ ಇರುವವರಿಗೆ ಕನ್ನಡಕವನ್ನು ಹಿರಿಯ ನಾಗರಿಕರ ವೇದಿಕೆ ಮುಖಾಂತರ ಡಾ. ಪ್ರಶಾಂತ್ ಉಚಿತವಾಗಿ ಒದಗಿಸಲಿದ್ದಾರೆ ಎಂದು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಕೆ.ಎ. ತಿಮ್ಮಯ್ಯ ತಿಳಿಸಿದ್ದಾರೆ.