ನಾಪೋಕ್ಲು, ಮಾ. ೨೯: ೧.೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೆಲಜಿ-ಎಮ್ಮೆಮಾಡು ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.
ನಂತರ ಕೂರುಳಿ-ಎಮ್ಮೆಮಾಡು ರಸ್ತೆ ಉದ್ಘಾಟಿಸಿದ ಅವರು ಅಜ್ಜಿಮುಟ್ಟ-ಕೂರುಳಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಗ್ರಾಮಸ್ಥರು ಇದ್ದರು.