ಮಡಿಕೇರಿ, ಮಾ. ೨೯: ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿ ಗಸ್ತಿನಲ್ಲಿದ್ದಾಗ ಗೋಣಿಕೊಪ್ಪ ರಸ್ತೆ ಬದಿಯಲ್ಲಿ ಆಕ್ಟಿವ್ ಹೊಂಡಾದಲ್ಲಿ (ಕೆ.ಎ. ೧೨ ಆರ್. ೭೧೭೭) ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕೆ.ಜಿ. ಅಶೋಕ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಮದ್ಯ ಹಾಗೂ ವಾಹನ ಸೇರಿ ೬೨ ಸಾವಿರ ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಭಾಗ್ಯ, ಉಪ ನಿರೀಕ್ಷಕರುಗಳಾದ ಬಿ.ಎಸ್. ಮೋಹನ್ಕುಮಾರ್, ಅನಿಲ್ ಎಂ ಚೋಗದಂಡೆ, ಸಿಬ್ಬಂದಿಗಳಾದ ಸಿ. ಗೋವಿನಂದ ನಾಯ್ಕ್, ನಂದಗೋಕುಲ, ಸಂತೋಷ ಪೂಜಾರಿ, ಗಂಗಾಧರ ಹಾಗೂ ವಾಹನ ಚಾಲಕರಾದ ಕಿಶೋರ್ ಪಾಲ್ಗೊಂಡಿದ್ದರು.