ಮಡಿಕೇರಿ, ಮಾ. ೨೯ : ಪ್ರಸ್ತುತ ಎಲ್ಲಾ ಅರಣ್ಯ ಪ್ರದೇಶಗಳು, ಅಭಯಾರಣ್ಯಗಳು ಮತ್ತು ರಾಷ್ಟಿçÃಯ ಉದ್ಯಾನವನಗಳ ಸುತ್ತಲೂ ಸಾಕಷ್ಟು ರೆವಿನ್ಯೂ ಫಾರೆಸ್ಟ್ ಭೂಮಿಗಳಿವೆ. ಇಂತಹ ಪ್ರದೇಶಗಳು ಅರಣ್ಯದ ಅಂಚಿನಲ್ಲಿ ಬರಲಿದ್ದು, ಇವುಗಳನ್ನು ತೆರವುಗೊಳಿಸುವುದು ಈಗಿನ ಅಗತ್ಯತೆ ಯಾಗಿದೆ. ಈ ಮೂಲಕ ಹಾಗೂ ವನ್ಯಪ್ರಾಣಿಗಳ ತಿರುಗಾಟ-ಬದುಕಿಗಾಗಿ ಸೂಕ್ತ ಕಾರಿಡಾರ್ (ಪಥ) ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡದಿದ್ದಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಅಪಾಯಗಳು ವನ್ಯ ಪ್ರಾಣಿಗಳಿಂದ ಉಂಟಾಗುವ ಸಾಧ್ಯತೆ ಇದೆ ಎಂಬುದಾಗಿ ವೈಲ್ಡ್ಲೈಫ್ ಫಸ್ಟ್ ಹಾಗೂ ಕೊಡಗು ಏಕೀಕರಣ ರಂಗದ ಪ್ರಮುಖರಾದ ತಮ್ಮು ಪೂವಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಕಂಡು ಬರುತ್ತಿರುವ ಹುಲಿ ಧಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು ತಮ್ಮ ಅನುಭವ ಹಾಗೂ ಈ ಹಿಂದೆ ಮಾಡಿರುವ ಕೆಲಸ ಕಾರ್ಯಗಳು, ಅರಣ್ಯ ಇಲಾಖೆ ಮೂಲಕ ರೂಪಿತವಾಗಬೇಕಾಗಿರುವ ಯೋಜನೆಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರದೇಶಗಳ ಮೂಲಕ ಬಫರ್ ಜೋನ್ ಎಂಬುದನ್ನು ಪ್ರತ್ಯೇಕವಾಗಿರಿಸಿ ಸಂರಕ್ಷಿಸಬೇಕು. ಭವಿಷ್ಯಕ್ಕಾಗಿ ಸರಿಯಾದ ಸಮರ್ಪಕ ರೀತಿಯ ಯೋಜನೆಗಳನ್ನು ಸರಕಾರ ರೂಪಿಸಬೇಕಿದೆ. ಆದರೆ ದುರದೃಷ್ಟವಶಾತ್ ಅರಣ್ಯ ಇಲಾಖೆಯ ಉನ್ನತ ಮಟ್ಟದ ಕಚೇರಿಗಳಲ್ಲಿ ರಾಜಕೀಯ ಮತ್ತು ಭ್ರಷ್ಟಾಚಾರಗಳು ಕಂಡು ಬರುತ್ತಿದ್ದು, ಇದರ ಪರಿಣಾಮವಾಗಿ ಸಮಸ್ಯೆಗಳು ತಲೆದೋರುತ್ತಿವೆ ಎಂಬುದಾಗಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಇರುವ ಅರಣ್ಯ ಪ್ರದೇಶಗಳಲ್ಲೂ ವೈಜ್ಞಾನಿಕವಾಗಿ ಕಾರ್ಯನಿರ್ವಹಣೆ ಮತ್ತು ಇಲಾಖೆ ಗಮನ ಹರಿಸಬೇಕು. ಅಗತ್ಯವಿರುವ ಕಡೆ ಕಂದಕಗಳು-ಸೂಕ್ತ ಫೆನ್ಸಿಂಗ್‌ಗಳನ್ನು ನಿರ್ಮಾಣ ಮಾಡಬೇಕಿದೆ.

ವೃತ್ತಿಪರ ವಿಜ್ಞಾನಿಗಳು ಮತ್ತು ಅರಣ್ಯ ಇಲಾಖೆ ನಡೆಸಿದ ಸಮೀಕ್ಷೆಯಂತೆ ಪ್ರಸ್ತುತ ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಹುಲಿಗಳ ತಿರುಗಾಟದ ವ್ಯಾಪ್ತಿಯ ಪ್ರದೇಶ ೧೪ ಕಿ.ಮೀ. ನಿಂದ ೫ ಕಿ.ಮೀ.ಗೆ ಇಳಿದಿದೆ. ಇದರ ಪರಿಧಿಯಲ್ಲಿ ಹೆಚ್ಚು ವಯಸ್ಸಾದ ಹುಲಿಗಳಿದ್ದು, ಟೆರಿಟೋರಿಯಲ್ ಫೈಟ್ (ಪರಿಧಿ ವ್ಯಾಪ್ತಿ) ಹುಲಿಗಳ ನಡುವೆ ಉದ್ಭವಿಸುತ್ತವೆ. ನಾಗರಹೊಳೆ ಬಂಡಿಪುರ ಮತ್ತು ಮುದುಮಲೈ (ಕೇರಳ) ಉದ್ಯಾನವನಗಳು ಗಡಿಗಳನ್ನು ಹಂಚಿಕೊಳ್ಳುತ್ತದೆ. ಇಲ್ಲಿ ೨೫೦ಕ್ಕೂ ಅಧಿಕ ಹುಲಿಗಳಿದ್ದು ಅರಣ್ಯದ ಗಡಿಗಳ ನಡುವೆ ಸಂಪರ್ಕಕ್ಕೆ ಅಡ್ಡಿಯಾಗಿದ್ದು ಅರಣ್ಯದ ನೇರ ಸಂಪರ್ಕಕ್ಕೆ ತಡೆಯಾಗಿರುವದು. ಇದಕ್ಕೆ ಒಂದು ಕಾರಣ ಎಂದು ತಮ್ಮು ಪೂವಯ್ಯ ವಿಶ್ಲೇಷಿಸಿದ್ದಾರೆ.

ಬೆಳೆದ ಪ್ರತಿ ಹುಲಿ ತನ್ನ ಪರಿಧಿಯ ವ್ಯಾಪ್ತಿಯ ಪ್ರದೇಶವನ್ನು ಮರಗಳ ಮೇಲೆ ಮೂತ್ರ ವಿಸರ್ಜಿಸುವ ಮೂಲಕ ಗುರುತಿಸುತ್ತದೆ. ಇದು ಇಂದಿನ ಬಾರ್‌ಕೋಡ್‌ನ ಮಾದರಿಯಲ್ಲಿ ಹುಲಿಗಳ ನಡವಳಿಕೆಯಾಗಿದೆ. ಬೇರೆ ಯಾವದೇ ಹುಲಿಗಳು ಈ ಗುರುತು ಮಾಡಿದ ಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಅವುಗಳ ನಡುವೆ ಹೋರಾಟ ನಡೆದು ಬಲಹೀನ ಹುಲಿ ಹೊರಗೆ ಅಟ್ಟಲ್ಪಡುತ್ತದೆ. ಇಂತಹ ಹುಲಿಗಳು ಸಹಜವಾಗಿ ಕಾಡಿನೊಳಗೆ ಆಹಾರ ಸಿಗದಂತಾಗಿ ನಾಡಿನತ್ತ ನುಸುಳಿ ಜಾನುವಾರುಗಳನ್ನು ಆಹಾರಕ್ಕಾಗಿ ಅರಸುತ್ತವೆ. ಸಿಗದಿದ್ದಾಗ ಕೆಲವೊಮ್ಮೆ ಮನುಷ್ಯರ ಮೇಲೂ ಧಾಳಿ ನಡೆಯುತ್ತದೆ ಎಂದು ಹುಲಿಗಳ ವರ್ತನೆ ಬಗ್ಗೆ ಅವರು ಬೆಳಕು ಚೆಲ್ಲಿದರು. ಪ್ರಸ್ತುತ ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂಬುದು ತಮ್ಮ ಅನಿಸಿಕೆಯಾಗಿದೆ.

ಹಿಂದೆ ಏನಾಗಿತ್ತು ? : ನಾಗರಹೊಳೆ ಪ್ರದೇಶ ಆರಂಭದಲ್ಲಿ ಮೈಸೂರು ರಾಜರಿಗೆ ಬೇಟೆಯ ತಾಣವಾಗಿತ್ತು. ನಂತರ ಬ್ರಿಟೀಷರ ಆಗಮನದ ಬಳಿಕ ಇಲ್ಲಿ ವಾಣಿಜ್ಯ ಲಾಭದ ತೇಗದ ಮರಗಳನ್ನು ಬೆಳೆಯಲಾಗಿತ್ತು. ಇದಕ್ಕಾಗಿ ಹೊರಭಾಗದಿಂದ ಕೆಲಸಕ್ಕೆ ಜನರನ್ನೂ ಕರೆತರಲಾಗಿತ್ತು. ನೈಜ ಬುಡಕಟ್ಟು ಜನರು ಬೇರೆ..... ಈ ರೀತಿ ಕೆಲಸಕ್ಕೆ ಬಂದವರು ಬೇರೆಯಾಗಿದ್ದರು. ೧೯೫೫ರ ಸಂದರ್ಭದಲ್ಲಿ ಕೂರ್ಗ್ ಗವರ್ನ್ಮೆಂಟ್ ಇದ್ದಾಗ, ನಾಗರಹೊಳೆಯನ್ನು ಅಭಯಾರಣ್ಯ ಎಂದು ಪರಿಗಣಿಸಲಾಗಿತ್ತು. ೧೯೭೬ರಲ್ಲಿ ಕೊಡಗಿಗೆ ಜಿಲ್ಲಾಧಿಕಾರಿಯಾಗಿ ಬಂದ ವೀಣಾಶ್ರೀರಾಮ್ ಅವರು ಅರಣ್ಯ-ವನ್ಯ ಜೀವಿಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. ಇವರು ೧೯೭೭ರಲ್ಲಿ ನಾಗರಹೊಳೆಯನ್ನು ರಾಷ್ಟಿçÃಯ ಉದ್ಯಾನವನ ಎಂದು ಪ್ರಥಮ ನೋಟಿಫಿಕೇಷನ್ ಹೊರಡಿಸಿದ್ದರು. ನಂತರ ೧೯೮೩ರಲ್ಲಿ ೬ ವರ್ಷಗಳ ಅಂತರದ ಬಳಿಕ ಎರಡನೆಯ ನೋಟಿಫಿಕೇಷನ್ ಮೂಲಕ ಇದು ಅಧಿಕೃತವಾಗಿತ್ತು. ಈ ಸಂದರ್ಭದಲ್ಲಿ ನಾಗರಹೊಳೆಗೆ ಅರಣ್ಯಾಧಿಕಾರಿ ಯಾಗಿ ೧೯೬೭ರ ಅವಧಿಯಿಂದ ಬಂದ ಕೆ.ಎಂ. ಚಿಣ್ಣಪ್ಪ ಅವರು ಎರಡು ದಶಕಗಳ ಕಾಲ ಉತ್ತಮ ಕೆಲಸ ಮಾಡಿದ್ದರು. ಆಗ ಅಧಿಕವಾಗಿದ್ದ ಅಕ್ರಮ ಬೇಟೆಯೂ ಕಡಿಮೆಯಾಗಿತ್ತು.

ಜಾಗ ಗುರುತು : ಅಭಯಾರಣ್ಯದಲ್ಲಿ ಆ ಸಂದರ್ಭ ವಲಸಿಗರಾಗಿ ಬಂದು ನೆಲೆಸಿದ್ದ ಮಂದಿ ಸ್ಥಳಾಂತರದ ಪ್ರಯತ್ನವನ್ನು ಮಾಡಲಾಗಿತ್ತು. ೧೯೯೧ರಲ್ಲಿ ಬಂಗಾರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದಾಗ ವೆಸ್ಟ್ನೆಮ್ಮಲೆಯಲ್ಲಿ ಇದಕ್ಕಾಗಿ ೪೦೦ ಎಕರೆ ಜಾಗ ಗುರುತಿಸಿ ೫೦ ಕುಟುಂಬಗಳನ್ನು ಪರಿಗಣಿಸ ಲಾಗಿತ್ತಾದರೂ ಸ್ಥಳಾಂತರಕ್ಕೆ ವೆಸ್ಟ್ ನೆಮ್ಮಲೆಯಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು.

ಇದಕ್ಕೂ ಮುನ್ನ ೧೯೭೫-೭೬ರ ಅವಧಿಯಲ್ಲಿ ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ೧೫ ಸಾವಿರ ಎಕರೆಯಷ್ಟು ಇದ್ದ ದೇವರಕಾಡು ಬಳಿಕ ಡಿ ನೋಟಿಫೈಯಂತಹ ಕ್ರಮದ ಮೂಲಕ ಪೈಸಾರಿ ಎಂಬAತಾಗಿ ಜಾಗದ ವಿಸ್ತೀರ್ಣ ೫ ಸಾವಿರ ಎಕರೆವರೆಗೆ ಇಳಿದಿತ್ತು. ದೇವರಪುರ ಗುಹ್ಯದಲ್ಲಿ ಕೆಲವು ರಾಜಕಾರಣಿಗಳು ಹಲವರನ್ನು ದೇವರಕಾಡಿನಲ್ಲಿ ಕೂರಿಸಿದ್ದೂ ಇತಿಹಾಸವಿದೆ. ಈ ರೀತಿ ಪ್ರಯತ್ನದ ನಡುವೆ ಕೊಡಗು ಏಕೀಕರಣ ರಂಗ ಪರಿಣಾಮಕಾರಿ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದರಿಂದ ೫ ಸಾವಿರ ಎಕರೆಯಷ್ಟು ದೇವರಕಾಡು ಉಳಿದು ನಿಂತಿದೆ ಎಂಬುದಾಗಿ ತಮ್ಮು ಪೂವಯ್ಯ ತಿಳಿಸಿದರು.

ಇದಾದ ಬಳಿಕ ಲಿಫ್ಟ್ ಎನ್.ಜಿ.ಓ ಸಂಸ್ಥೆ ಮೂಲಕ ಮಾಡಿದ ಪ್ರಯತ್ನದಿಂದ ೬೨೦ ಕುಟುಂಬಗಳು ಅರಣ್ಯದಿಂದ ಹೊರ ಬರಲು ಒಪ್ಪಿದ್ದು, ಅವರಿಗೆ ಆರಂಭದಲ್ಲಿ ವೀರನ ಹೊಸಳ್ಳಿ ನಂತರದಲ್ಲಿ ಸೊಳ್ಳೆಪುರದÀಂತಹ ಕಡೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದು ವಿಶ್ವದಲ್ಲೇ ಶ್ರೇಷ್ಠ ಗುಣಮಟ್ಟದ ಪುನರ್ ವಸತಿಯಾಗಿದೆ. ಮಾನಸ ಗಂಗೋತ್ರಿ ಮೂಲಕ ಸರ್ವೆ ನಡೆಸಿದ್ದು ೧೩೫೦ ಕುಟುಂಬಗಳನ್ನು ಈ ಸಂದರ್ಭ ಗುರುತಿಸಲಾಗಿದ್ದು ಈಗಲೂ ಈ ದಾಖಲೆ ಇದೆ.

ನಂತರದಲ್ಲಿ : ಇವೆಲ್ಲದರ ನಡುವೆ ವೈಜ್ಞಾನಿಕ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದರಿಂದ ನಶಿಸಿ ಹೋಗಿದ್ದ ಹುಲಿಗಳ ಸಂಖ್ಯೆ ಹೆಚ್ಚಿತ್ತು. ೧೯೯೮ರಲ್ಲಿ ೩೭ ಹುಲಿಗಳು ಮಾತ್ರ ಇದ್ದವು. ಬಳಿಕ ಸೂಕ್ತ ರಕ್ಷಣೆ ಸಿಕ್ಕ ಹಿನ್ನಲೆಯಲ್ಲಿ ೨೦೧೮ರ ವೇಳೆಗೆ ಈ ಸಂಖ್ಯೆ ೧೦೦ಕ್ಕೆ ತಲುಪಿದೆ. ಇದೀಗ ಬಂಡಿಪುರ ನಾಗರಹೊಳೆ ಮುದುಮಲೈ (ಕೇರಳ) ಇಲ್ಲಿ ಸುಮಾರು ೨೫೦ ಹುಲಿಗಳಿವೆ.

ಮುಂದಿನ ಅನಿವಾರ್ಯತೆ-ಅಗತ್ಯತೆ : ಮನುಷ್ಯರಂತೆ ಪ್ರಾಣಿಗಳೂ ಬದುಕಬೇಕಾಗಿದೆ. ಇದು ಪರಿಸರದ ಸಮತೋಲನಕ್ಕೂ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಚಿಂತನೆಯೊAದಿಗೆ ದೂರದೃಷ್ಟಿ ಯೋಜನೆ ರೂಪಿತವಾಗಬೇಕು ಎಂಬುದು ತಮ್ಮು ಅಭಿಪ್ರಾಯವಾಗಿದೆ.

ಯುನೆಸ್ಕೋ ಯೋಜನೆ : ಇಂತಹ ಚಿಂತನೆಯಿAದಲೇ ಯುನೆಸ್ಕೊ ಯೋಜನೆ ರೂಪಿತವಾಗಿದ್ದು, ಇದರಲ್ಲಿ ಭವಿಷ್ಯದ ಚಿಂತನೆಯಿದೆ. ಪ್ರಸ್ತುತ ಬ್ರಹ್ಮಗಿರಿ ರಕ್ಷಿತಾರಣ್ಯಕ್ಕೂ ನಾಗರಹೊಳೆ ಅಭಯಾರಣ್ಯಕ್ಕೂ ಸಂಪರ್ಕ ಕಡಿತವಾಗಿದೆ. ಇದರ ನಡುವೆ ಕುಟ್ಟ ವಿಭಾಗದಲ್ಲಿರುವ ೬೦೦ ಎಕರೆ ವಿಸ್ತೀರ್ಣದ ಫೈತ್ ಎಸ್ಟೇಟ್ ಬರುತ್ತದೆ. ಇದನ್ನು ಸರಕಾರ ಸೂಕ್ತ ಕ್ರಮದೊಂದಿಗೆ ಸ್ವಾಧೀನಕ್ಕೆ (ಖರೀದಿ ಮೂಲಕ) ತೆಗೆದುಕೊಂಡಲ್ಲಿ ಇದು ಬ್ರಹ್ಮಗಿರಿ ರಕ್ಷಿತಾರಣ್ಯಕ್ಕೆ ನೇರ ಸಂಪರ್ಕವಾಗಲಿದೆ. ಇದರೊಂದಿಗೆ ಇನ್ನಿತರ ಅರಣ್ಯಗಳೂ ಬೆಸೆದುಕೊಳ್ಳುವದು ಅನುಕೂಲವಾಗಲಿದೆ. ಈ ಮೂಲಕ ಜನವಸತಿಯಿಂದ ಪ್ರತ್ಯೇಕವಾಗಿ ಸುಮಾರು ೭೦೭ ಚದರ ಕಿ.ಮೀ. ಉದ್ದದ ಅರಣ್ಯ ಕಾರಿಡಾರ್ ಸಂಪರ್ಕಗೊಳ್ಳಲಿದೆ. ಫೈತ್ ಎಸ್ಟೇಟ್ ಹಾಗೂ ಕೇರಳದ ನರಿಮಲೆಯನ್ನು ಬ್ರಹ್ಮಗಿರಿ ಹಾಗೂ ನಾಗರಹೊಳೆಗೆ ಸಂಪರ್ಕಗೊAಡರೆ ನಂತರದಲ್ಲಿ ಇದು ನರಿಮಲೆ, ಬ್ರಹ್ಮಗಿರಿ, ಸುಬ್ರಹ್ಮಣ್ಯ ಹಾಗೂ ತಲಕಾವೇರಿ ರಕ್ಷಿತಾರಣ್ಯಗಳು ನೇರ ಸಂಪರ್ಕಗೊಳ್ಳಲಿದ್ದು, ಒಟ್ಟು ೧೬೫೦ ಚ.ಕಿ.ಮೀ ನಷ್ಟು ಪ್ರದೇಶ ವಿಸ್ತಾರವಾಗಲಿದೆ ವನ್ಯ ಪ್ರಾಣಿಗಳು ಇದರೊಳಗೇ ತಮ್ಮ ಬದುಕು ಕಂಡುಕೊಳ್ಳಲಿದ್ದು ಜನವಸತಿ ಪ್ರದೇಶದ ಮೇಲಿನ ಧಾಳಿಗಳು ತಪ್ಪಲಿವೆ.

ಈ ವಿಚಾರಕ್ಕೆ ಸಂಬAಧಿಸಿದAತೆ ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರು ಹೆಚ್ಚು ಆಸಕ್ತಿ ಹೊಂದಿದ್ದರು. ಅರಣ್ಯಕ್ಕೆ ಜಾಗ ಪಡೆಯಲು ಕ್ಯಾಂಪ್ಕೊ (ಕಾಂಪನ್‌ಸೇಟರಿ ಎಫÀರ್‌ಸ್ಟೇಷನ್ ಫಂಡ್ ಕ್ಯಾಂಪ್ಕೊ) ಇದ್ದು, ಇದು ಸುಮಾರು ೯೦೦ ಕೋಟಿಯಷ್ಟು ರಾಜ್ಯಕ್ಕೆ ಬಂದಿದೆ ಎಂಬುದಾಗಿ ತಮ್ಮು ಪೂವಯ್ಯ ವಿವರವಿತ್ತರು. ಸಾರ್ವಜನಿಕ ಹಿತಾಸಕ್ತಿಯಿಂದ ಇದು ಈಗಿನ ಅನಿವಾರ್ಯತೆಯೂ, ಅಗತ್ಯತೆಯೂ ಆಗಿದೆ. ಈ ಮೂಲಕ ಅರಣ್ಯ ಪ್ರದೇಶ ಅರಣ್ಯವಾಗಿಯೇ ಮುಂದುವರಿಯಲಿದ್ದು, ಜನಜೀವನಕ್ಕೆ ಹೆಚ್ಚು ಧಕ್ಕೆ ಪ್ರಾಣಿಗಳಿಂದ ಸಂಭವಿಸದು ಎನ್ನುತ್ತಾರೆ ಅವರು.