ಮಡಿಕೇರಿ, ಮಾ. ೨೯: ಮಡಿಕೇರಿ ನಗರಸಭೆ ಚುನಾವಣಾ ಕದನಕ್ಕೆ ಮುಹೂರ್ತ ನಿಗದಿಯಾಗಿದ್ದು, ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಏಪ್ರಿಲ್ ೨೭ರಂದು ಚುನಾವಣೆಯನ್ನು ನಿಗದಿಮಾಡಲಾಗಿದೆ. ಏಪ್ರಿಲ್ ೮ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಬೇಕಾಗಿದ್ದು, ನಾಮಪತ್ರಗಳನ್ನು ಸಲ್ಲಿಸಲು ಏ.೫ ಕೊನೆಯ ದಿನಾಂಕವಾಗಿದೆ. ಏ.೧೬ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ. ೧೯ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಏ. ೨೭ರಂದು ಬೆಳಿಗ್ಗೆ ೭ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದ್ದು, ಮರುಮತದಾನದ ಅಗತ್ಯವಿದ್ದಲ್ಲಿ ಏ. ೨೯ರಂದು ಬೆ.೭ರಿಂದ ಸಂಜೆ ೫ರವರೆಗೆ ನಡೆಸಬಹುದಾಗಿದೆ. ಮತ ಎಣಿಕಾ ಕಾರ್ಯವು ಏ. ೩೦ರಂದು ಬೆಳಿಗ್ಗೆ ೮ ಗಂಟೆಯಿAದ ಆರಂಭವಾಗಲಿದೆ. ಅದೇ ದಿನ ಚುನಾವಣಾ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಬೇಕು ಎಂದು ಚುನಾವಣಾ ಆಯೋಗದ ಆದೇಶ ಸೂಚಿಸಿದೆ.
ವಿಶೇಷ ಸೂಚನೆ
ಚುನಾವಣೆಗೆ ಸಂಬAಧಿಸಿದAತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿದ್ದು, ವಿವರ ಕಳಗಿನಂತಿದೆ:-
ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಬೇಕು. ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಲು ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ ತನ್ನ ಹಿನ್ನೆಲೆ, ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳು, ತನ್ನ ಸ್ವವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಪರಿಷ್ಕೃತ ನಮೂನೆಯಲ್ಲಿ ಘೋಷಣಾ ಪತ್ರ / ಪ್ರಮಾಣ ಪತ್ರ ಸಲ್ಲಿಸುವಂತೆ ಕ್ರಮ ವಹಿಸಬೇಕು. ಸರ್ಕಾರದ ಅಧಿಸೂಚನೆ-II, ಸಂಖ್ಯೆ:ಸಿ. ಆಸುಇ ೧೨ ಹೆಚ್ಹೆಚ್ಎಲ್೨೦೨೦ ತಾ.೨೧.೧೧.೨೦೨೦ರಂತೆ ಏ.೧೦ರಂದು ಎರಡನೇ ಶನಿವಾರವು ನೆಗೋಷಿಯೆಬಲ್ ಇನ್ಸು÷್ಟçಮೆಂಟ್ಸ್ ಆಕ್ಟ್ ೧೮೮೧ರ ಪ್ರಕಾರ ಸಾರ್ವತ್ರಿಕ ರಜಾದಿನ ಎಂದು ಅಧಿಸೂಚಿಸಲಾಗಿದ್ದು, ಅಂದು ಚುನಾವಣಾಧಿ ಕಾರಿಗಳು ನಾಮಪತ್ರಗಳನ್ನು ಸ್ವೀಕರಿಸುವಂತಿಲ್ಲ.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶ ಸಂಖ್ಯೆ:ಎಸ್.ಇ.ಸಿ.೧೦ ಎಂಐಎಸ್ಸಿ೨೦೧೬ ದಿನಾಂಕ : ೨೯.೦೬.೨೦೧೬ ಹಾಗೂ ತಿದ್ದುಪಡಿ ದಿನಾಂಕ ೦೬.೦೭.೨೦೧೬ರಂತೆ ಕ್ರಮವಹಿಸಬೇಕು.
ಕಾಲಕಾಲಕ್ಕೆ ಚುನಾವಣೆಗೆ ಸಂಬAಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕು. ಸರ್ಕಾರದ ಅಧಿಸೂಚನೆ ಸಂಖ್ಯೆ ಸಂವ್ಯಶಾಇ ೧೨ ಶಾಸನ ೨೦೧೯, ಬೆಂಗಳೂರು ದಿನಾಂಕ ೨೭.೦೪.೨೦೨೦ರಂತೆ ಕರ್ನಾಟಕ ಪೌರ ಸಭೆಗಳ ಅಧಿನಿಯಮ ೧೯೬೪ ಪ್ರಕರಣ ೨೨ಕ್ಕೆ ಹಾಗೂ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ೧೯೭೬ರ ಪ್ರಕರಣ ೧೪ಕ್ಕೆ ತಿದ್ದುಪಡಿ ಮಾಡಲಾಗಿದ್ದು, ‘ಅರ್ಹ ಮತದಾರರನ್ನು ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಯಾವೊಬ್ಬ ಅಭ್ಯರ್ಥಿಯ ಪರವಾಗಿ ತನ್ನ ಮತವನ್ನು ಚಲಾಯಿಸಲು ಇಚ್ಚಿಸದಿರುವ ಸಂದರ್ಭದಲ್ಲಿ ಆತ ‘ಓoಟಿe oಜಿ ಣhe ಚಿbove’ (ಓಔಖಿಂ) (ಮೇಲಿನ ಯಾರೊಬ್ಬರಿಗೂ ಇಲ್ಲ ಎಂದು ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು.
ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ೨೮.ಇಯುಬಿ೨೦೧೮ ದಿನಾಂಕ : ೦೧.೦೬.೨೦೧೮ರಂತೆ ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮ ಕೈಗೊಳ್ಳಬೇಕು. ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸದಾಚಾರ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗದAತೆ ನೋಡಿಕೊಳ್ಳಬೇಕು ಎಂದು ಸೂಚಿಸಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎನ್.ಆರ್. ನಾಗರಾಜು ಆದೇಶ ಹೊರಡಿಸಿದ್ದಾರೆ.