ಗೋಣಿಕೊಪ್ಪಲು, ಮಾ.೨೯: ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ಪಂಚಾಯಿತಿಗೆ ನಡೆದ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯವಾಯಿತು. ಪೊನ್ನಂಪೇಟೆಯ ೧೧, ಗೋಣಿಕೊಪ್ಪಲುವಿನ ೮ ಮತದಾನ ಕೇಂದ್ರಗಳಲ್ಲಿ ಯಾವುದೇ ಅಡ್ಡಿ ಇಲ್ಲದೆ ಗೋಣಿಕೊಪ್ಪಲು, ಮಾ.೨೯: ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ಪಂಚಾಯಿತಿಗೆ ನಡೆದ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯವಾಯಿತು. ಪೊನ್ನಂಪೇಟೆಯ ೧೧, ಗೋಣಿಕೊಪ್ಪಲುವಿನ ೮ ಮತದಾನ ಕೇಂದ್ರಗಳಲ್ಲಿ ಯಾವುದೇ ಅಡ್ಡಿ ಇಲ್ಲದೆ ಸಹಾಯಕರು ಸ್ಯಾನಿಟೈಸ್, ಥರ್ಮಲ್‌ಸ್ಕಾö್ಯನ್ ನಡೆಸಿದರು.

ಪೊನ್ನಂಪೇಟೆಯಲ್ಲಿ ೨೦ ಸ್ಥಾನಗಳಿಗೆ ೫೦ ಅಭ್ಯರ್ಥಿಗಳು ಕಣದಲ್ಲಿದ್ದರೆ, ಗೋಣಿಕೊಪ್ಪ ಪಂಚಾಯಿತಿಯಲ್ಲಿ ೨೧ ಸ್ಥಾನಕ್ಕೆ ೫೧ ಅಭ್ಯರ್ಥಿಗಳು ಕಣದಲ್ಲಿದ್ದರು. ಹಲವೆಡೆ ಹಲವಾರು ಸ್ವತಂತ್ರ ಅಭ್ಯರ್ಥಿಗಳಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಕೊನೆಯ ಹಂತದಲ್ಲಿ ಅಭ್ಯರ್ಥಿಗಳು ಮತಗಟ್ಟೆಗೆ ಬರುವ ಮತದಾರರ ಬಳಿ ಮತಯಾಚಿಸುವ ದೃಶ್ಯಗಳು ಕಂಡು ಬಂದವು. ಎಲ್ಲಾ ಮತಗಟ್ಟೆಯ ಸುತ್ತಲಿನ ೨೦೦ಮೀ. ವ್ಯಾಪ್ತಿಯ ಸ್ಥಳವನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಣೆ ಮಾಡಲಾಗಿತ್ತು.

ವಿಪರೀತ ಬಿಸಿಲಿನ ತಾಪ ಸಹಿಸಲಾರದೆ ಮತದಾನದ ಕೇಂದ್ರದ ಬಳಿ ವಿವಿಧ ಪಕ್ಷದ ಅಭ್ಯರ್ಥಿಗಳು ಶಾಮಿಯಾನ ಅಳವಡಿಸಿ ಬಿಸಿಲಿ ನಿಂದ ರಕ್ಷಣೆ ಪಡೆದರು. ಮುಂಜಾನೆ ೭ಗಂಟೆಗೆ ಮತದಾನ ಆರಂಭ ವಾಯಿತು. ಯಾವುದೇ ಮತದಾನ ಕೇಂದ್ರದಲ್ಲಿ ಸರತಿ ಸಾಲು ಅಷ್ಟಾಗಿ ಕಂಡು ಬರಲಿಲ್ಲ.

(ಮೊದಲ ಪುಟದಿಂದ) ಸುಡು ಬಿಸಿಲಿದ್ದ ಕಾರಣ ಮಧ್ಯಾಹ್ನದ ವೇಳೆ ಮತದಾರರು ಮತ ಕೇಂದ್ರದತ್ತ ವಿರಳವಾಗಿ ಆಗಮಿಸಿದರು. ವಯೋವೃದ್ಧರನ್ನು ಮತದಾನ ಕೇಂದ್ರಕ್ಕೆ ವಾಹನದ ಮೂಲಕ ಕರೆ ತಂದು ಮತದಾನ ಮಾಡಿಸಿದರು.

ಗೋಣಿಕೊಪ್ಪಲುವಿನ ೧ನೇ ವಿಭಾಗದ ಮಹಿಳಾ ಸಮಾಜದ ಮತದಾನ ಕೇಂದ್ರದ ಸಮೀಪ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಸೇರಿರುವುದನ್ನು ಅರಿತ ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಹಾಗೂ ಸಿಬ್ಬಂದಿಗಳು ಗುಂಪಾಗಿ ಸೇರದಂತೆ ಎಚ್ಚರಿಕೆ ನೀಡಿದರು. ಸಮೀಪದಲ್ಲಿರುವ ಅಂಗಡಿಗಳನ್ನು ಮುಚ್ಚಿಸಿ ಮತದಾನಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಿದರು. ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಿದರು.

ಪೊಲೀಸ್ ವಾಹನದಲ್ಲಿ ಧ್ವನಿವರ್ಧಕ ಮೂಲಕ ಮಾಸ್ಕ್ಗಳನ್ನು ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಹಕರಿಸುವಂತೆ ನಾಗರಿಕರಿಗೆ ಗೋಣಿಕೊಪ್ಪ ಠಾಣಾಧಿಕಾರಿ ಸುಬ್ಬಯ್ಯ ಪ್ರಚಾರ ನಡೆಸಿದರು. ವಿವಿಧ ಪಕ್ಷದ ಮುಖಂಡರುಗಳು ಮತದಾನದ ಕೇಂದ್ರದ ಬಳಿ ಆಗಮಿಸಿ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದರು. ಮತದಾನಕ್ಕೆ ಆಗಮಿಸುವ ಮತದಾರರನ್ನು ಕೊನೆಗಳಿಗೆಯ ಓಲೈಕೆಯಲ್ಲಿ ತೊಡಗಿದ್ದರು. ವೀರಾಜಪೇಟೆ ತಾಲೂಕು ತಹಶಿಲ್ದಾರ್ ಹಾಗೂ ಚುನಾವಣಾಧಿಕಾರಿಯಾದ ಯೋಗಾನಂದ್ ಅವರು ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅವಳಿ ಪಂಚಾಯಿತಿಗಳಲ್ಲಿ ಚುನಾವಣೆಗಾಗಿ ೧೧೪ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. ಡಿವೈಎಸ್ಪಿ ಜಯಕುಮಾರ್ ಮುಂದಾಳತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಮತ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಕಾರ್ಯ ನಡೆಸಿದರು.

-ಹೆಚ್.ಕೆ.ಜಗದೀಶ್/ ಎನ್.ಎನ್. ದಿನೇಶ್ / ಚನ್ನನಾಯಕ