ಇತಿಹಾಸವನ್ನು ಅರಿಯಲು ಯಾವುದೇ ವ್ಯಕ್ತಿ ಅಥವಾ ಪ್ರದೇಶದ ಸ್ಪಷ್ಟ ಉಲ್ಲೇಖಗಳು ದೊರೆಯುವವರೆಗೆ ಆ ವ್ಯಕ್ತಿ ಅಥವಾ ಆ ಭಾಗದ ಬಗ್ಗೆ ಇರುವ ಪುರಾಣಗಳು ಒಂದು ಮಾಧ್ಯಮವಷ್ಟೆ. ಜೊತೆಗೆ ಲಭ್ಯ ಅವಶೇಷಗಳು ಅಕರಗಳಾಗಬಲ್ಲವು. ಈ ದೃಷ್ಟಿಯಿಂದ ಕೊಡಗಿನ ಇತಿಹಾಸದ ಪ್ರಾಚೀನತೆಯನ್ನು ದಾಖಲಿಸುವ ಮೊದಲು ಆ ಭಾಗದಲ್ಲಿ ಪ್ರಚಲಿತವಿರುವ ಪುರಾಣ, ದಂತಕಥೆಗಳನ್ನು ವಿಶ್ಲೇಷಿಸಲೇಬೇಕಾಗುತ್ತದೆ. ಕೊಡಗಿಗೆ ಸಂಬAಧಿಸಿದAತೆ, ಇತಿಹಾಸ ಪೂರ್ವಕಾಲದ ಘಟನೆಗಳು ಹಾಗೂ ಸಂಬAಧಿಸಿದ ಪುರಾಣ ಕಾಲದ ಮಾಹಿತಿಯನ್ನು ಗಮನಿಸಿದಾಗ ‘ಕಾವೇರಿ ಮಹಾತ್ಮೆö್ಯ’ಯಲ್ಲಿ ಕೊಡಗಿಗೆ ಸಂಬAಧಿಸಿದ ಕೆಲವು ಪುರಾಣಗಳು, ಐತಿಹ್ಯಗಳು ದೊರೆಯುತ್ತವೆ ಹಾಗೂ ಪಶ್ಚಿಮ ಘಟ್ಟಗಳಿಗೆ ಕ್ರಿ. ಪೂ. ೧೦೭೫ರ ಅಗಸ್ತö್ಯ ಕರೆತಂದ ವೇಳಿರರು ಹಾಗೂ ಕುರುಬರ ಮೂಲಪುರುಷರೆನ್ನುವ ‘ಅರುವಲ್ಲರ್’ಗಳನ್ನು ಕರೆತಂದ ಬಗೆ ಹಾಗೂ ಈ ವೇಳಿರರ ಪೈಕಿಯ ‘ನಣ್ಣನ್’ ಕೊಡಗನ್ನು ಆಳಿದ ಸಂಗತಿಯು ಶಂಗ ಸಾಹಿತ್ಯದಿಂದ ತಿಳಿಯುತ್ತದೆ. (ಕೆ. ಮಮ್ನನ್, ಕೇರಳ ಕಲ್ಚರ್ ೧೯೪೨, ಪು. ೮೦) ಕಾವೇರಿ ನದಿಯ ಉಗಮ ಕೊಡಗಿನ ಮೂಲ, ಕೊಡಗಿನ ಮೂಲನಿವಾಸಿಗಳಾದ ಕೊಡವರು ಹಾಗೂ ದಲಿತ ಕೆಂಬಟ್ಟಿಗಳ ಕುರಿತಾದ ಬಗ್ಗೆ ಇದರಲ್ಲಿ ವಿಪುಲ ಮಾಹಿತಿ ದೊರೆಯುತ್ತದೆ. ಕೊಡಗಿಗೆ ‘ಬ್ರಹ್ಮಕ್ಷೇತ್ರ’ ‘ಮತ್ಸö್ಯದೇಶ’ ಮತ್ತು ‘ಕ್ರೋಢದೇಶ’ ಎಂಬ ಹೆಸರುಗಳು ಇದ್ದುದು ಕೂಡ ತಿಳಿದುಬರುತ್ತದೆ. ಕ್ರಿ.ಪೂ. ೩ರಿಂದ ಕ್ರಿ. ಶ. ೩ನೇ ಶತಮಾನದವರೆಗೆ ಶಂಗ ಸಾಹಿತ್ಯದಲ್ಲಿ ಕುಡುನಾಡುವಿನ (ಕೊಡಗು) ಅಸ್ತಿತ್ವವನ್ನು ಸೂಚಿಸಿದೆ. ಭೂ ವಿಜ್ಞಾನದ ಆಧಾರದಲ್ಲಿ ಅದರ ಅಸ್ತಿತ್ವ ೭೫ ಮಿಲಿಯನ್ ವರ್ಷದ ಅಸ್ತಿತ್ವವೆಂದು ಪುರಾಣಗಳು ಹುಟ್ಟಿಕೊಂಡ ಮೇಲೆ ಬ್ರಹ್ಮಕ್ಷೇತ್ರ, ಮತ್ಸö್ಯದೇಶ, ಕ್ರೋಢದೇಶ ಎಂದು ಹೆಸರು ಬಂದಿರಬಹುದಾಗಿದೆ.

ಕಾವೇರಿ ಪುರಾಣದಲ್ಲಿ ಉಲ್ಲೇಖವಾಗಿರುವಂತಹ ಚಂದ್ರವರ್ಮನು ಕೊಡವರ ಮೂಲ ಪುರುಷ. ರಾಜಕುಮಾರಇಂದಿಗೂ ಈ ಆಚರಣೆಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಹಿಂದೂ ಧರ್ಮದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆಗಳಿಗೆ ವಿಶಿಷ್ಟವಾದ ಮಹತ್ವವನ್ನು ನೀಡಲಾಗಿದೆ. ಇತರ ಧರ್ಮಗಳಲ್ಲಿ ಕೆಲವು ಆಚರಣೆಗಳನ್ನು ಆ ಧರ್ಮದವರು ಕಡ್ಡಾಯವಾಗಿ ಮಾಡಲೇಬೇಕೆಂದು ನಿರ್ಬಂಧವಿರುತ್ತದೆ. ಅದಕ್ಕಾಗಿ ನಿರ್ದಿಷ್ಟ ದಿನ ಹಾಗೂ ಸಮಯವನ್ನು ಗೊತ್ತುಪಡಿಸಲಾಗಿರುತ್ತದೆ. ಹಿಂದೂ ಧರ್ಮದಲ್ಲಿ ಅಂತಹ ಕಟ್ಟುಪಾಡುಗಳಿಲ್ಲ. ಇಲ್ಲಿ ಮುಕ್ತವಾಗಿ ದೇವರ ದರ್ಶನ, ಪೂಜೆ, ಪುನಸ್ಕಾರಗಳನ್ನು, ಹಬ್ಬ ಹರಿದಿನಗಳಲ್ಲಿ ಎಲ್ಲರೂ ಸೇರಿ ಜಾತ್ರೆ ಉತ್ಸವಗಳನ್ನು ಆಯಾ ಕ್ಷೇತ್ರಗಳಲ್ಲಿ ಸ್ವಯಂ ಪ್ರೇರಿತರಾಗಿ ಮಾಡುತ್ತಾರೆ. ಯಾವುದೇ ಒಂದು ಕ್ಷೇತ್ರದ ಚಾರಿತ್ರಿಕ ಘಟನೆಗಳನ್ನು ಕಟ್ಟಿಕೊಡಲು ಲಿಖಿತ ಆಧಾರಗಳನ್ನು ಒದಗಿಸಿಕೊಡುವುದರ ಜೊತೆಗೆ ಪುರಾಣಗಳಿಂದಲೂ ಮಾಹಿತಿ ಒದಗಿಸಬಹುದು. ಪುರಾಣ ರಚನೆಯು ಒಂದು ಸೃಜನಶೀಲ ಪ್ರಕ್ರಿಯೆ. ಲಿಖಿತ ಆಧಾರಗಳನ್ನು ಸಂಗ್ರಹಿಸಿ, ರಕ್ಷಿಸುವವರು ಕಡಿಮೆ ಇರುವುದರಿಂದ ಆಯಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಅಲ್ಲಿಯ ನಿವಾಸಿ ಗಳು ದೇವರುಗಳ ಬಗ್ಗೆ ಧಾರ್ಮಿಕ ಕಥೆಗಳ ರೂಪದಲ್ಲಿ ತಮ್ಮ ಕಲ್ಪನೆಗೆ ನಿಲುಕಿದಂತೆ, ಭಕ್ತಿ ಭಾವನೆಗಳು ಮೂಡುವಂತೆ ಅಲ್ಲಿಯ ಪವಿತ್ರ ಕ್ಷೇತ್ರದ ಬಗ್ಗೆ ಪುರಾಣಗಳನ್ನು ನಿರೂಪಿಸುತ್ತಾರೆ.

ಭೂಲೋಕವೆಂಬ ಈ ಚಿಕ್ಕ ಗ್ರಹದ ಜೀವಿಗಳಾಗಿರುವ ನಾವು, ನಮ್ಮ ಪರಂಪರೆ, ಚರಿತ್ರೆ, ತತ್ವಜ್ಞಾನ, ಸಾಹಿತ್ಯ, ಸಂಸ್ಕೃತಿ, ಕಲೆ, ವಿದ್ಯೆ, ವಿಜ್ಞಾನ ಮತಧರ್ಮಗಳಿಂದ ಯಾವ ಶಕ್ತಿಯನ್ನು ಪಡೆದಿರುತ್ತೇವೆಯೋ ಹಾಗೆಯೇ ನಮ್ಮ ದೇವಸ್ಥಾನ, ಮಸೀದಿ, ಮಂದಿರ, ಇಗರ್ಜಿ ಗುರುದ್ವಾರಗಳಲ್ಲಿ ಯಾರನ್ನು ಪೂಜಿಸುತ್ತೇವೋ ಮತ್ತು ನಮ್ಮ ಜಪ, ತಪ, ಅರ್ಚನೆ, ಪೂಜೆ, ಪ್ರಾರ್ಥನೆ ಗಳಿಂದ ಯಾರನ್ನು ಪಡೆಯಲು ಬಯಸಿರುವೆವೋ ಯಾವ ಶಕ್ತಿ ಹಿರಿದು, ಕಿರಿದು ಚರಾಚರ ವಸ್ತುವಿನ್ಯಾಸಗಳೆಲ್ಲದರಲ್ಲೂ ಬಿಂಬಿತವಾಗಿ ಏಕವೂ ಅನೇಕವೂ, ವೈವಿಧ್ಯಪೂರ್ಣವೂ ವಿಸ್ಮಯಕರವೂ ಆದ ಈ ಸೃಷ್ಟಿ ಎನಿಸಿರುವುದೋ ಆ ವಿಶ್ವಚೇತನ, ಜಗತ್ ಶಕ್ತಿ, ಜಗನ್ಮಾತೆಯಾದ ಕಾವೇರಿ, ಕೊಡವರ ಕುಲದೇವತೆಯಾಗಿದ್ದಾಳೆ. ಕಾವೇರಿ ಮಾತೆಯು ಲೌಕಿಕ ದೃಷ್ಟಿಯಿಂದ ಸರ್ವೋಪಕಾರಿಣಿ, ಸದಾ ದಾನಶೀಲೆಯಾಗಿ ಕಂಗೊಳಿಸಿದ್ದಾಳೆ. ಆಧ್ಯಾತ್ಮಿಕ ದೃಷ್ಟಿಯಿಂದ ಭವತಾರಿಣಿ, ಭದ್ರಂಕರಿ, ಭಗವತಿ ಎಂಬುದಾಗಿ ಬೆಳಗುತ್ತಿದ್ದಾಳೆ.

ಕಾವೇರಿ ಬಹು ಪುರಾತನ ಕಾಲದಿಂದಲೂ ಜನಮನದಲ್ಲಿ ನೆಲೆಸಿದ್ದಾಳೆ. ಅಸಂಖ್ಯಾತ ಭಕ್ತರು ಸ್ನಾನ ಪೂಜೆಗಳನ್ನು ಮಾಡಿ ‘ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ! ನರ್ಮದೇ ಸಿಂಧು, ಕಾವೇರಿ ಜಲೆ ಅಸ್ಮಿನ್ ಸನ್ನಿಧಿಂ ಕುರು” ಎಂದು ಪ್ರಾರ್ಥಿಸುತ್ತಾರೆ. ಕಾವೇರಿಯ ಸ್ಮರಣೆಯಿಂದ ಸಕಲ ಪಾಪ ನಿವಾರಣೆಯಾಗುತ್ತದೆಂದು ನಂಬಿ, ಭಕ್ತರು ತಮ್ಮ ಬಾಳಿನಲ್ಲಿ ಕಾವೇರಿಯ ಮಹಿಮೆಯನ್ನು ಕಂಡು ಧನ್ಯರಾಗಿದ್ದಾರೆ.

ಕಾವೇರಿಯು ಸಂಪತ್ತಿನ ವರಲಕ್ಷಿö್ಮಯಾಗಿ, ಲಕ್ಷಾಂತರ ಎಕರೆ ಬಂಜರು ಭೂಮಿಯನ್ನು ಫಲವತ್ತಾಗಿಸಿದ್ದಾಳೆ. ಕಾವೇರಿಯ ಜಲದಿಂದ ವಿದ್ಯುತ್ ಬೆಳಕು ಹರಿದು ಮನೆ ಮನೆಗಳಲ್ಲಿ ಬಂಗಾರದ ನದಿಯಾಗಿ ಪ್ರಸಿದ್ಧಿ ಪಡೆದಿದ್ದಾಳೆ. ಬ್ರಹ್ಮಗಿರಿಯ ತಪ್ಪಲಿನಲ್ಲಿ ಮೈ ತಳೆದು ನಿಂತ ಕಾವೇರಿ ನಾದ ಈತನು ಒಮ್ಮೆ ತೀರ್ಥಯಾತ್ರೆಯ ನೆಪದಿಂದ ಕೊಡಗಿನ ಪರಿಸರದಲ್ಲಿರುವ ಬ್ರಹ್ಮಗಿರಿ ಬೆಟ್ಟಕ್ಕೆ ಬಂದು ಪಾರ್ವತಿಯನ್ನು ಕುರಿತು ತಪಸ್ಸು ಮಾಡಿದನು. ಇವನ ಕಠಿಣ ತಪಸ್ಸಿಗೆ ಮೆಚ್ಚಿದ ಪಾರ್ವತಿ ಒಂದು ಸುಂದರ ಸ್ತಿçÃಯನ್ನು, ಶತ್ರು ನಿಗ್ರಹ ಖಡ್ಗವನ್ನು ಅನುಗ್ರಹಿಸಿದಳು. ಚಂದ್ರವರ್ಮನು ಸತೀ ಸಮೇತನಾಗಿ ವೈಭವದಿಂದ ರಾಜ್ಯವಾಳಿದನು. ಇವನಿಗೆ ದೇವಕಾಂತನನ್ನು ಒಳಗೊಂಡAತೆ ಹನ್ನೊಂದು ವೀರ ಕ್ಷತ್ರಿಯ ಕುಮಾರರು ಜನಿಸಿದರು. ಇವರಿಗೆ ವಿದರ್ಭ ದೇಶದ ನೂರು ಮಂದಿ ರಾಜಕುಮಾರಿಯರನ್ನು ತಂದು ವಿವಾಹ ಮಾಡಲಾಯಿತು. ಆನಂತರ ಹಿರಿಯನಾದ ದೇವಕಾಂತನಿಗೆ ಪಟ್ಟಕಟ್ಟಿ ತಾನು ತಪಸ್ಸಿಗೆ ಹೊರಟನು. ಇವರಿಗೆ ಹುಟ್ಟಿದ ನೂರು ಜನ ಮಕ್ಕಳಿಗೆ ವಾಸಿಸಲು ಜಾಗವಿಲ್ಲವಾಗಿ ಮತ್ತು ಕೃಷಿ ಮಾಡಲು ಭೂಮಿ ಸಾಲದಾದುದರಿಂದ ತಮ್ಮ ಉಗುರುಗಳನ್ನೇ ಆಯುಧಗಳನ್ನಾಗಿ ಮಾಡಿ ಬೆಟ್ಟಗುಡ್ಡಗಳ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದರು. ಈ ಪ್ರದೇಶ ಮುಂದೆ ‘ಕ್ರೋಢ’ ದೇಶವೆಂದು ಹೆಸರು ಪಡೆದು ಕ್ರಮೇಣ ‘ಕೊಡಗು’ ಎಂದೆನಿಸಿತು.

ಕೊಡವರು ಪ್ರಕೃತಿಯನ್ನು ದೇವರೆಂದು ನಂಬಿದ್ದಾರೆ. ಕೊಡವರಲ್ಲಿ ಮಾತೃವಿಗೆ ಪ್ರಮುಖ ಸ್ಥಾನಮಾನ. ಆದ್ದರಿಂದಲೇ ಕಾವೇರಿಯು ಮಾತೃದೇವತೆಯಾಗಿದ್ದಾಳೆ. ಹರಪ್ಪನಾಗರಿಕತೆ, ಮೊಹೆಂಜೊದಾರೋ, ಈಜಿಪ್ಟ್ ನಾಗರಿಕತೆಯಲ್ಲಿ ಪ್ರಕೃತಿಯನ್ನು ಶಕ್ತಿಯ ಮೂಲವೆಂದು ಪೂಜಿಸುತ್ತಿದ್ದರು. ಸೂರ್ಯ, ನದಿಮೂಲವನ್ನು ಆರಾಧಿಸುತ್ತಿದ್ದರು. ಈ ಪ್ರಭಾವ ಕೊಡವರಲ್ಲಿ ಮುಂದುವರೆದಿರಬಹುದಾಗಿದೆ. ಕೊಡವರ ಪ್ರತಿಯೊಂದು ಕೆಲಸ ಕಾರ್ಯಗಳು ಕಾವೇರಿ ಮಾತೆಯ ಪ್ರಾರ್ಥನೆಯಿಂದ ಪ್ರಾರಂಭಗೊAಡು, ಕಾವೇರಿ ಸ್ತುತಿಯಲ್ಲೇ ಅಂತ್ಯವನ್ನು ಕಾಣುತ್ತವೆ.

ಶ್ರೀ ಕಾವೇರಿ ಮಾತೆಯ ನಂಬಿಕೆ ಆಚರಣೆಗಳು :

ಪ್ರಪಂಚದ ಎಲ್ಲಾ ಧರ್ಮಗಳಲ್ಲಿಯೂ ಧಾರ್ಮಿಕ ಆಚರಣೆಗಳಿವೆ. ಇಂದಿಗೂ ಈ ಆಚರಣೆಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಹಿಂದೂ ಧರ್ಮದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆಗಳಿಗೆ ವಿಶಿಷ್ಟವಾದ ಮಹತ್ವವನ್ನು ನೀಡಲಾಗಿದೆ. ಇತರ ಧರ್ಮಗಳಲ್ಲಿ ಕೆಲವು ಆಚರಣೆಗಳನ್ನು ಆ ಧರ್ಮದವರು ಕಡ್ಡಾಯವಾಗಿ ಮಾಡಲೇಬೇಕೆಂದು ನಿರ್ಬಂಧವಿರುತ್ತದೆ. ಅದಕ್ಕಾಗಿ ನಿರ್ದಿಷ್ಟ ದಿನ ಹಾಗೂ ಸಮಯವನ್ನು ಗೊತ್ತುಪಡಿಸಲಾಗಿರುತ್ತದೆ. ಹಿಂದೂ ಧರ್ಮದಲ್ಲಿ ಅಂತಹ ಕಟ್ಟುಪಾಡುಗಳಿಲ್ಲ. ಇಲ್ಲಿ ಮುಕ್ತವಾಗಿ ದೇವರ ದರ್ಶನ, ಪೂಜೆ, ಪುನಸ್ಕಾರಗಳನ್ನು, ಹಬ್ಬ ಹರಿದಿನಗಳಲ್ಲಿ ಎಲ್ಲರೂ ಸೇರಿ ಜಾತ್ರೆ ಉತ್ಸವಗಳನ್ನು ಆಯಾ ಕ್ಷೇತ್ರಗಳಲ್ಲಿ ಸ್ವಯಂ ಪ್ರೇರಿತರಾಗಿ ಮಾಡುತ್ತಾರೆ. ಯಾವುದೇ ಒಂದು ಕ್ಷೇತ್ರದ ಚಾರಿತ್ರಿಕ ಘಟನೆಗಳನ್ನು ಕಟ್ಟಿಕೊಡಲು ಲಿಖಿತ ಆಧಾರಗಳನ್ನು ಒದಗಿಸಿಕೊಡುವುದರ ಜೊತೆಗೆ ಪುರಾಣಗಳಿಂದಲೂ ಮಾಹಿತಿ ಒದಗಿಸಬಹುದು. ಪುರಾಣ ರಚನೆಯು ಒಂದು ಸೃಜನಶೀಲ ಪ್ರಕ್ರಿಯೆ. ಲಿಖಿತ ಆಧಾರಗಳನ್ನು ಸಂಗ್ರಹಿಸಿ, ರಕ್ಷಿಸುವವರು ಕಡಿಮೆ ಇರುವುದರಿಂದ ಆಯಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಅಲ್ಲಿಯ ನಿವಾಸಿ ಗಳು ದೇವರುಗಳ ಬಗ್ಗೆ ಧಾರ್ಮಿಕ ಕಥೆಗಳ ರೂಪದಲ್ಲಿ ತಮ್ಮ ಕಲ್ಪನೆಗೆ ನಿಲುಕಿದಂತೆ, ಭಕ್ತಿ ಭಾವನೆಗಳು ಮೂಡುವಂತೆ ಅಲ್ಲಿಯ ಪವಿತ್ರ ಕ್ಷೇತ್ರದ ಬಗ್ಗೆ ಪುರಾಣಗಳನ್ನು ನಿರೂಪಿಸುತ್ತಾರೆ.

ಭೂಲೋಕವೆಂಬ ಈ ಚಿಕ್ಕ ಗ್ರಹದ ಜೀವಿಗಳಾಗಿರುವ ನಾವು, ನಮ್ಮ ಪರಂಪರೆ, ಚರಿತ್ರೆ, ತತ್ವಜ್ಞಾನ, ಸಾಹಿತ್ಯ, ಸಂಸ್ಕೃತಿ, ಕಲೆ, ವಿದ್ಯೆ, ವಿಜ್ಞಾನ ಮತಧರ್ಮಗಳಿಂದ ಯಾವ ಶಕ್ತಿಯನ್ನು ಪಡೆದಿರುತ್ತೇವೆಯೋ ಹಾಗೆಯೇ ನಮ್ಮ ದೇವಸ್ಥಾನ, ಮಸೀದಿ, ಮಂದಿರ, ಇಗರ್ಜಿ ಗುರುದ್ವಾರಗಳಲ್ಲಿ ಯಾರನ್ನು ಪೂಜಿಸುತ್ತೇವೋ ಮತ್ತು ನಮ್ಮ ಜಪ, ತಪ, ಅರ್ಚನೆ, ಪೂಜೆ, ಪ್ರಾರ್ಥನೆ ಗಳಿಂದ ಯಾರನ್ನು ಪಡೆಯಲು ಬಯಸಿರುವೆವೋ ಯಾವ ಶಕ್ತಿ ಹಿರಿದು, ಕಿರಿದು ಚರಾಚರ ವಸ್ತುವಿನ್ಯಾಸಗಳೆಲ್ಲದರಲ್ಲೂ ಬಿಂಬಿತವಾಗಿ ಏಕವೂ ಅನೇಕವೂ, ವೈವಿಧ್ಯಪೂರ್ಣವೂ ವಿಸ್ಮಯಕರವೂ ಆದ ಈ ಸೃಷ್ಟಿ ಎನಿಸಿರುವುದೋ ಆ ವಿಶ್ವಚೇತನ, ಜಗತ್ ಶಕ್ತಿ, ಜಗನ್ಮಾತೆಯಾದ ಕಾವೇರಿ, ಕೊಡವರ ಕುಲದೇವತೆಯಾಗಿದ್ದಾಳೆ. ಕಾವೇರಿ ಮಾತೆಯು ಲೌಕಿಕ ದೃಷ್ಟಿಯಿಂದ ಸರ್ವೋಪಕಾರಿಣಿ, ಸದಾ ದಾನಶೀಲೆಯಾಗಿ ಕಂಗೊಳಿಸಿದ್ದಾಳೆ. ಆಧ್ಯಾತ್ಮಿಕ ದೃಷ್ಟಿಯಿಂದ ಭವತಾರಿಣಿ, ಭದ್ರಂಕರಿ, ಭಗವತಿ ಎಂಬುದಾಗಿ ಬೆಳಗುತ್ತಿದ್ದಾಳೆ.

ಕಾವೇರಿ ಬಹು ಪುರಾತನ ಕಾಲದಿಂದಲೂ ಜನಮನದಲ್ಲಿ ನೆಲೆಸಿದ್ದಾಳೆ. ಅಸಂಖ್ಯಾತ ಭಕ್ತರು ಸ್ನಾನ ಪೂಜೆಗಳನ್ನು ಮಾಡಿ ‘ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ! ನರ್ಮದೇ ಸಿಂಧು, ಕಾವೇರಿ ಜಲೆ ಅಸ್ಮಿನ್ ಸನ್ನಿಧಿಂ ಕುರು” ಎಂದು ಪ್ರಾರ್ಥಿಸುತ್ತಾರೆ. ಕಾವೇರಿಯ ಸ್ಮರಣೆಯಿಂದ ಸಕಲ ಪಾಪ ನಿವಾರಣೆಯಾಗುತ್ತದೆಂದು ನಂಬಿ, ಭಕ್ತರು ತಮ್ಮ ಬಾಳಿನಲ್ಲಿ ಕಾವೇರಿಯ ಮಹಿಮೆಯನ್ನು ಕಂಡು ಧನ್ಯರಾಗಿದ್ದಾರೆ.

ಕಾವೇರಿಯು ಸಂಪತ್ತಿನ ವರಲಕ್ಷಿö್ಮಯಾಗಿ, ಲಕ್ಷಾಂತರ ಎಕರೆ ಬಂಜರು ಭೂಮಿಯನ್ನು ಫಲವತ್ತಾಗಿಸಿದ್ದಾಳೆ. ಕಾವೇರಿಯ ಜಲದಿಂದ ವಿದ್ಯುತ್ ಬೆಳಕು ಹರಿದು ಮನೆ ಮನೆಗಳಲ್ಲಿ ಬಂಗಾರದ ನದಿಯಾಗಿ ಪ್ರಸಿದ್ಧಿ ಪಡೆದಿದ್ದಾಳೆ. ಬ್ರಹ್ಮಗಿರಿಯ ತಪ್ಪಲಿನಲ್ಲಿ ಮೈ ತಳೆದು ನಿಂತ ಕಾವೇರಿ ವೃಕ್ಷ’ವಾಗಿದೆ. ಅಗಸ್ತö್ಯ ಮುನಿಗಳಿಗೆ ತ್ರಿಮೂರ್ತಿಗಳ ದರ್ಶನವಾದದ್ದು, ಈ ವೃಕ್ಷದ ಕೆಳಗೆ ಎಂಬುದಾಗಿ ಧಾರ್ಮಿಕ ಕಥೆಗಳಿವೆ.

ಈ ಕ್ಷೇತ್ರದಲ್ಲಿ ಅಗಸ್ತö್ಯ ಮುನಿಗಳು ಮರಳಿನಿಂದ ಲಿಂಗ ಪ್ರತಿಷ್ಠಾಪನೆ ಮಾಡಿದುದರಿಂದ ಇದನ್ನು ಅಗಸ್ತೆö್ಯÃಶ್ವರ ಲಿಂಗವೆAದು ಕರೆಯುತ್ತಾರೆ. ಉತ್ತರ ಭಾರತದಿಂದ ತಪೋವನಕ್ಕೆ ಬಂದ ಅಗಸ್ತö್ಯರು ಶಿವ ಭಕ್ತರಾಗಿದ್ದರು. ಅವರನ್ನು ವಿವಾಹವಾದ ಕಾವೇರಿಯು ಪರಮೇಶ್ವರನ ಭಕ್ತಳಾಗಿದ್ದಳು. ಕಾವೇರಿ ತಾನು ನದಿಯಾಗಿ ಹರಿಯುವ ಸ್ಥಳದಲ್ಲೆಲ್ಲಾ ಶಿವನದರ್ಶನ ಮಾಡಲು ಹಾಗೂ ದೇವರ ಪಾದ ತೊಳೆಯಲು ದೇವಾಲಯಗಳನ್ನು ಪ್ರತಿಷ್ಠಾಪಿಸುವಂತೆ ಅಗಸ್ತö್ಯರಿಂದ ವಚನ ಪಡೆದಳಂತೆ. ಅದರಂತೆ ಹಿಂಬಾಲಿಸಿದ ಅಗಸ್ತö್ಯರು ನದಿಯ ತೀರದಲ್ಲಿ ಅವರು ಉಳಿದುಕೊಂಡ ಕಡೆಯಲ್ಲೆಲ್ಲಾ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿರಬಹುದಾಗಿದೆ.

ಕಾವೇರಿಯ ಉಗಮ ಸ್ಥಾನ

ಹಿಂದೆ ಅಗಸ್ತö್ಯ ಮಹರ್ಷಿಗಳು ತಮ್ಮ ವಿವಾಹದ ಸಂದರ್ಭದಲ್ಲಿ ತಾನು ಮೂರು ನಿಮಿಷಗಳು ನಿನ್ನನ್ನು ಬಿಟ್ಟಿರುವುದಿಲ್ಲವೆಂಬ ವಚನವನ್ನು ಕಾವೇರಿಗೆ ನೀಡುತ್ತಾರೆ. ಅದರಂತೆ ಒಂದು ದಿನ ಸಂಧ್ಯಾವAದನೆಗೆAದು ಹೋಗುವಾಗ ಕಾವೇರಿಯನ್ನು ಜಲವಾಗಿ ಪರಿವರ್ತಿಸಿ ತಮ್ಮ ಕಮಂಡಲದಲ್ಲಿಟ್ಟು ಶಿಷ್ಯ ವೃಂದದವರಿಗೆ ತಿಳಿಸಿ ಹೊರಡುತ್ತಾರೆ. ಜಲವಾಗಿ ಪರಿವರ್ತನೆಗೊಂಡಿದ್ದ ಕಾವೇರಿ ಇದೇ ಸೂಕ್ತ ಸಮಯವೆಂದು ತಿಳಿದು ಬ್ರಹ್ಮ ಮುಹೂರ್ತದ ಶುಭ ಸಂದರ್ಭದಲ್ಲಿ ಲೋಕ ಕಲ್ಯಾಣಕ್ಕಾಗಿ ಹರಿಯಲು ನಿಶ್ಚಯಿಸಿ ಕಮಂಡಲದಿAದ ಹೊರಬಂದು ಈ ಕೊಳದಲ್ಲಿ ನದಿಯಾಗಿ ಹರಿಯಲು ಪ್ರಾರಂಭಿಸುತ್ತಾಳೆ. ಆದ್ದರಿಂದ ಈ ಕ್ಷೇತ್ರವನ್ನು ಬ್ರಹ್ಮ ಕುಂಡಿಕೆ (ಮೂಲಸ್ಥಾನ) ಎಂದು ಕರೆಯುತ್ತಾರೆ.

ಬ್ರಹ್ಮ ಕುಂಡಿಕೆಯಿAದ ಉದ್ಭವಿಸಿದ ಕಾವೇರಿಯು ಹರಿದು ಹರಡಿರುವ ಕೊಳವನ್ನು ‘ತೀರ್ಥ ಸರೋವರ’ ಎಂದು ಕರೆಯುತ್ತಾರೆ. ತುಲಾ ಮಾಸದ ಪ್ರಾರಂಭದ ಮೂರು ದಿನಗಳು ಇಲ್ಲಿ ವಿಶೇಷ ತೀರ್ಥ ಸ್ನಾನವಿರುತ್ತದೆ.

ತುಲಾ ಮಾಸದಲ್ಲಿ ಕಾವೇರಿ ನದಿ ಪವಿತ್ರ ಗಂಗಾ ನದಿಯೊಡನೆ ಸಮ್ಮಿಲನವಾಗಿ ಉದ್ಭವವಾಗುವುದರಿಂದ ತುಲಾ ಸಂಕ್ರಮಣವು (ಕಾವೇರಿ ಸಂಕ್ರಮಣ) ಕೊಡಗಿನಲ್ಲಿ ಬಹಳ ವಿಶೇಷವಾಗಿರುತ್ತದೆ. ಈ ಕೊಳದಲ್ಲಿ ತೀರ್ಥಸ್ನಾನ ಮಾಡಿದರೆ ಪಾಪ ಪರಿಹಾರವಾಗಿ ಪುಣ್ಯ ಲಭಿಸುತ್ತದೆಂಬ ನಂಬಿಕೆ ಇದೆ. ತುಲಾ ಮಾಸದ ಕಾವೇರಿ ಸಂಕ್ರಮಣದAದು ಭಕ್ತರು ಪವಿತ್ರದ ಕೊಳದಲ್ಲಿ ಸ್ನಾನ ಮಾಡಿ, ತೀರ್ಥವನ್ನು ತೆಗೆದುಕೊಂಡು ಹೋಗುತ್ತಾರೆ. ಕೊಡಗಿನ ಜನರ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರ್ಥಿಕ ಬದುಕಿಗೆ ಆಧಾರವಾಗಿರುವ ‘ಕಾವೇರಿ ನದಿ’ಯನ್ನು ಜೀವನದಿಯಾಗಿ ಪರಿಗಣಿಸಿ ಅದಕ್ಕೆ ದೇವತೆಯ ಸ್ಥಾನ ನೀಡಿ, ಪೂಜಿಸಿ ಗೌರವಿಸುವುದನ್ನು ನಾವು ಇಲ್ಲಿ ಕಾಣಬಹುದಾಗಿದೆ.

ಶ್ರೀ ಕಾವೇರಿ ಮಾತೆಯ ಧಾರ್ಮಿಕ ಹಿನ್ನೆಲೆ : ಭಾರತದ ವಿಂಧ್ಯ ಪರ್ವತ ದಿನೇ ದಿನೇ ಬೆಳೆಯುತ್ತ ಹೋದಂತೆ ಇತ್ತ ದಕ್ಷಿಣ ಪ್ರಸ್ಥಭೂಮಿ ವಾಲುತ್ತಾ ಸಮುದ್ರದೊಳಗೆ ಮುಳುಗುವುದನ್ನು ಕಂಡ ದೇವಾನುದೇವತೆಗಳು ಸಮಾಲೋಚಿಸಿ ಈ ಪರ್ವತಗಳ ಬೆಳವಣಿಗೆಯನ್ನು ತಡೆಯಲು ಭೂಮಂಡಲದ ಅಗಸ್ತö್ಯ ಮಹರ್ಷಿಗಳು ಸಮರ್ಥರು ಎಂದು ತಿಳಿದು ಅವರು ಉತ್ತರದ ಹಿಮಾಲಯದಿಂದ ದಕ್ಷಿಣದ ಕಡೆಗೆ ಪ್ರಯಾಣಿಸಬೇಕು ಎಂಬುದಾಗಿ ಹೇಳುತ್ತಾರೆ. ದೈವಲೀಲಾನುಸಾರವಾಗಿ ಅಗಸ್ತö್ಯರು ಉತ್ತರ ಭಾರತದಿಂದ ದಕ್ಷಿಣದ ಕಡೆಗೆ ಹೋಗುವ ಸಂದರ್ಭದಲ್ಲಿ ವಿಂಧ್ಯಪರ್ವತ ರಾಜನಿಗೆ ನಮಸ್ಕರಿಸಿ ನಾನು ದಕ್ಷಿಣ ಭಾರತದ ಕಡೆಗೆ ತೀರ್ಥ ಯಾತ್ರೆಗೆಂದು ಹೋಗುತ್ತಿದ್ದೇನೆ. ನಾನು ಬರುವವರೆಗೆ ನೀನು ಬೆಳೆಯ ಬಾರದು ಎಂಬುದಾಗಿ ವಚನ ಪಡೆದು ದಕ್ಷಿಣದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. (ಮುಂದುವರಿಯುವುದು)

-ಡಾ|| ಕಾವೇರಿ ಪ್ರಕಾಶ್

ನಾಪೋಕ್ಲು.