ಪೊನ್ನಂಪೇಟೆ, ಮಾ. ೨೭: ಏಪ್ರಿಲ್ ೨,೩ ಹಾಗೂ ೪ ರಂದು ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ೪ನೇ ವರ್ಷದ ಒಕ್ಕಲಿಗರ ಕ್ರೀಡೋತ್ಸವವನ್ನು ಆಯೋಜಿಸ ಲಾಗಿದ್ದು, ವೇದಿಕೆಯ ಅಧ್ಯಕ್ಷ ಲೋಹಿತ್ ಗೌಡ, ಉಪಾಧ್ಯಕ್ಷ ವಿ.ಪಿ. ಡಾಲು, ಖಜಾಂಚಿ ಕೆ.ಬಿ. ಪವನ್ಕುಮಾರ್, ನಿರ್ದೇಶಕರು ಗಳಾದ ವಿ.ಸಿ. ಸುದೀಪ್, ಕೆ.ಪಿ. ಅಜಿತ್ ಹಾಗೂ ಕ್ರೀಡಾ ಸಂಚಾಲಕ ಪ್ರಮೋದ್ ಒಕ್ಕಲಿಗರ ಕ್ರೀಡಾಕೂಟದ ಲೋಗೋ ಹಾಗೂ ಜರ್ಸಿ ಬಿಡುಗಡೆ ಮಾಡಿದರು.
ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಒಕ್ಕಲಿಗರ ಕ್ರೀಡೋತ್ಸವದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗರು ಭಾಗವಹಿಸಬಹುದಾಗಿದ್ದು, ಪುರುಷÀರಿಗೆ ಲೀಗ್ ಮಾದರಿಯ ಕ್ರಿಕೆಟ್ ಹಾಗೂ ಹಗ್ಗ-ಜಗ್ಗಾಟ ಸ್ಪರ್ಧೆ, ಮಹಿಳೆಯರಿಗೆ ಬೆಂಕಿ ರಹಿತ ಅಡುಗೆ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆ, ದಂಪತಿಗಳಿಗೆ ಲಾಕ್ ಮತ್ತು ವಾಕ್ ಸ್ಪರ್ಧೆ, ಎರಡೂವರೆ ವರ್ಷದಿಂದ ೫ ವರ್ಷದೊಳಗಿರುವ ಮಕ್ಕಳಿಗೆ ಫ್ಯಾಶನ್ ಶೋ, ೬ ರಿಂದ ೧೦ ವರ್ಷದೊಳಗಿನ ಮಕ್ಕಳಿಗೆ ಹಾಗೂ ೧೧ ರಿಂದ ೧೬ ವರ್ಷದೊಳಗಿನವರಿಗೆ ಸೂಪರ್ ಮಿನಿಟ್ ಗೇಮ್ಸ್ ಸೇರಿದಂತೆ ಹಿರಿಯರಿಗೆ ಹಲವು ಬಗೆಯ ಆಟೋಟಗಳನ್ನು ಆಯೋಜಿಸಲಾಗಿದೆ ಎಂದು ಕ್ರೀಡಾ ಸಂಚಾಲಕ ಪ್ರಮೋದ್ ಮಾಹಿತಿ ನೀಡಿದ್ದಾರೆ.