*ಗೋಣಿಕೊಪ್ಪ, ಮಾ. ೨೭: ಮಾನಸಿಕ ಮತ್ತು ಭೌತಿಕ ಸದೃಢ ರಾಗುವ ಮೂಲಕ ನಿರ್ಭಯದಿಂದ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಹೊಂದಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗೋಣಿಕೊಪ್ಪ ಸಂತ ಥಾಮಸ್ ಶಾಲೆ ಆವರಣದಲ್ಲಿ ತಾಲೂಕು ಶಿಕ್ಷಣ ಇಲಾಖೆ, ಸಂತ ಥೋಮಸ್ ಶಾಲೆ ಆಶ್ರಯದಲ್ಲಿ ನಡೆದ ಎಸ್.ಎಸ್. ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ನಿವಾರಣೆ ಹಾಗೂ ಪರೀಕ್ಷಾ ಸಿದ್ಧತೆ ಬಗ್ಗೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
೨೦೨೧ರಲ್ಲಿ ಉತ್ತಮ ಗುಣಮಟ್ಟದ ಫಲಿತಾಂಶ ಹೊಂದುವ ನಿರೀಕ್ಷೆಯಿದೆ. ತಾಲೂಕಿನಲ್ಲಿ ೨೦೪೭ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಭಯ, ಆತಂಕ, ಅನುಮಾನಗಳು ಮತ್ತು ದ್ವಂದ್ವಗಳಿಗೆ ಅವಕಾಶಕೊಡದೆ ೯೦ ದಿನಗಳ ಕಾಲಾವಕಾಶದಲ್ಲಿ ಸಮಯವನ್ನು ಸದುಪಯೋಗ ಪಡಿಸಿಕೊಂಡು ಅಧ್ಯಯನ ನಡೆಸಿ ಉತ್ತಮ ಫಲಿತಾಂಶ ಹೊಂದಬೇಕು ಎಂದು ಸಲಹೆ ನೀಡಿದರು.
ಸಂತ ಥೋಮಸ್ ಶಾಲೆಯ ಪ್ರಾಂಶುಪಾಲ ಫಾದರ್ ಜಾರ್ಜ್ ಮಾತನಾಡಿ, ನಿಮ್ಮ ಆಸಕ್ತಿಯನ್ನು ಉತ್ತೇಜಿಸಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ಹೇಳಿದರು. ಯಾವುದೇ ಅನುಮಾನ ಗಳಿದ್ದರೂ ಶಿಕ್ಷಕರಲ್ಲಿ ಪ್ರಶ್ನಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಮೂಡಬಿದ್ರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸ್ಥಾಪಕ ಯುವರಾಜ್ ಜೈನ್ ವಿದ್ಯಾರ್ಥಿಗಳಿಗೆ ಸರಳ ಕಲಿಕೆಯ ಬಗ್ಗೆ ವಿವರಿಸಿದರು. ಪರೀಕ್ಷೆಯೆಂಬ ಒತ್ತಡವನ್ನು ಮನಸ್ಸಿನಲ್ಲಿ ತುಂಬಿಕೊಳ್ಳದೆ ನಿರಾಳವಾಗಿ ಪರೀಕ್ಷೆಯನ್ನು ಎದುರಿಸಬೇಕು. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದೆ ಕಲಿಕೆಯ ಬಗ್ಗೆ ಧ್ಯಾನ ಮನಸ್ಸನ್ನು ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಇರುವ ಮಾರ್ಗಗಳ ಬಗ್ಗೆ ವಿವರಿಸಿದರು.
ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ಅಯ್ಯಪ್ಪ, ಬಿ.ಆರ್.ಪಿ. ಉತ್ತಪ್ಪ, ಶಿಕ್ಷಣ ಸಂಯೋಜಕರು ಮಾರ್ಗರೇಟ್, ಗೋಣಿಕೊಪ್ಪ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜ್ಯೋತಿಶ್ವರಿ, ರೆವರೆಂಡ್ ಫಾದರ್ ಪ್ರಾನ್ಸೀಸ್ ಹಾಗೂ ಶಿಕ್ಷಕರು ಸೇರಿದಂತೆ ಗೋಣಿ ಕೊಪ್ಪ, ತಿತಿಮತಿ, ಮಾಯಮುಡಿ, ದೇವರಪುರ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳು ತರಬೇತಿ ಕಾರ್ಯಾ ಗಾರದಲ್ಲಿ ಭಾಗವಹಿಸಿ ಎಸ್.ಎಸ್. ಎಲ್.ಸಿ. ಫಲಿತಾಂಶವನ್ನು ಹೊಂದುವ ಬಗ್ಗೆ ತರಬೇತಿ ಹೊಂದಿದರು.