ಸೋಮವಾರಪೇಟೆ,ಮಾ.೨೬: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕಾಗಡಿಕಟ್ಟೆ-ಹೊನ್ನವಳ್ಳಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಕಸದ ತ್ಯಾಜ್ಯಗಳು ಸಂಗ್ರಹವಾಗಿದ್ದು, ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ ಸಂಬAಧಿಸಿದ ಗ್ರಾ.ಪಂ. ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಕಾಗಡಿಕಟ್ಟೆಯಿಂದ ಹೊನ್ನವಳ್ಳಿ ವರೆಗಿನ ರಾಜ್ಯ ಹೆದ್ದಾರಿಯ ಬದಿಗಳಲ್ಲಿ ಕಸದ ರಾಶಿ ಬಿದ್ದಿದೆ. ಇದೇ ರಸ್ತೆಯಲ್ಲಿ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತೆರಳುತ್ತಿದ್ದರೂ ಯಾವದೇ ಕ್ರಮ ವಹಿಸುತ್ತಿಲ್ಲ. ಜಿ.ಪಂ.ನಿAದ ತ್ಯಾಜ್ಯ ವಿಲೇವಾರಿಗೆ ವಾಹನ ಮತ್ತು ಕಸದ ಬುಟ್ಟಿಗಳನ್ನು ನೀಡಿದ್ದರೂ ಪಂಚಾ ಯಿತಿಯಿಂದ ಸಾರ್ವಜನಿಕರಿಗೆ ಬುಟ್ಟಿಗಳ ವಿತರಣೆ ಮಾಡಿಲ್ಲ. ವಾಹನದ ಮೂಲಕ ತ್ಯಾಜ್ಯ ಸಂಗ್ರಹಿಸುತ್ತಿಲ್ಲ ಎಂದು ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಆರೋಪಿಸಿದ್ದಾರೆ.

ತಕ್ಷಣ ರಸ್ತೆ ಬದಿಯಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿರುವ ಡಿಸೋಜ ಅವರು, ಜಿ.ಪಂ.ನಿAದ ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಕಸ ಸಂಗ್ರಹಣೆಯ ವಾಹನ ಉಪಯೋಗ ವಾಗುತ್ತಿದೆಯೇ? ಕಸದ ಬುಟ್ಟಿಗಳ ವಿತರಣೆಯಾಗಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದು, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.