ಮಡಿಕೇರಿ, ಮಾ. ೨೫: ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಸರ್ವಾಂಗೀಣ ಅಭಿವೃದ್ಧಿಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಶ್ರಮಿಸಿದೆ. ಪ್ರಸಕ್ತ ಆಡಳಿತಾವಧಿ ಮುಗಿದಿರುವ ಹಿನ್ನೆಲೆ ಮುಂದೆ ರಚನೆಯಾಗುವ ಆಡಳಿತ ಮಂಡಳಿಗೆ ಪೂರಕ ಬೆಂಬಲ ನೀಡುತ್ತೇವೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ದೇವಾಲಯದ ಪೂರಕ ಬೆಂಬಲ ನೀಡುತ್ತೇವೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ ದುಡಿದಿ ದ್ದೇವೆ. ತಾ. ೨೫ಕ್ಕೆ ಆಡಳಿತಾವಧಿ ಮುಗಿದಿದೆ. ಮುಂದಿನ ಆಡಳಿತ ಮಂಡಳಿಯನ್ನು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಸಭೆ ನಡೆದು ಆಡಳಿತ ಮಂಡಳಿ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದ ನಂತರ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಇದುವರೆಗೂ ದೇವಾಲಯದ ಒಳ ಮತ್ತು ಹೊರ ಭಾಗದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಅಶ್ವತ್ಥಕಟ್ಟೆಯನ್ನು ರೂ ೨ ಲಕ್ಷದಲ್ಲಿ ನವೀಕರಣ ಮಾಡಲಾಗಿದೆ. ಕೋಟೆ ಶ್ರೀ ಗಣಪತಿ ದೇವಾಲಯದಲ್ಲಿ ಸಿ.ಸಿ. ಕ್ಯಾಮರ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಓಂಕಾರ ಸದನದಲ್ಲಿ ಸಿಸಿ ಕ್ಯಾಮರ, ಸುಣ್ಣ-ಬಣ್ಣ ಮತ್ತು ಗ್ರಾö್ಯನೆಟ್ ಅಳವಡಿಸಲಾಗಿದೆ. ಬಾವಿ ನೀರನ್ನು ಧಾರ್ಮಿಕ

(ಮೊದಲ ಪುಟದಿಂದ) ಕಾರ್ಯಗಳಿಗೆ ಮಾತ್ರ ಬಳಸಲು ವ್ಯವಸ್ಥೆ ಮಾಡಲಾಗಿದೆ. ಒಳಾವರಣದ ಪೌಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ಹೋಮ ಹವನಕ್ಕೆ ಹಾಗೂ ವಸ್ತç ಬದಲಾವಣೆಗೆ ಪ್ರತ್ಯೇಕ ಕೋಣೆ, ಅರ್ಚಕರಿಗೆ ವಿಶ್ರಾಂತಿ ಗೃಹ, ವಿದ್ಯುತ್ ನಾಮಫಲಕ ಅಳವಡಿಸಲಾಗಿದೆ. ದೇವಾಲಯದ ಪಾವಿತ್ರö್ಯತೆ ಕಾಪಾಡಲು ಡ್ರೆಸ್‌ಕೋಡ್ ನಿಯಮ ಜಾರಿ ಮಾಡಲಾಗಿದೆ. ಪೂಜೆಯ ಸಮಯವನ್ನು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಮೂಲಕ ಭಕ್ತಾಧಿಗಳಿಗೆ ಶೌಚಾಲಯ, ಸ್ನಾನದ ಕೊಠಡಿ, ವಾಹನ ನಿಲುಗಡೆ ವ್ಯವಸ್ಥೆ ಕಾಮಗಾರಿ ಪ್ರಗತಿಯಲ್ಲಿದೆ. ಮೇವಿನ ಸಂಗ್ರಹಣೆಗೆ ಸಂಗ್ರಹಣಾ ಕೊಠಡಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪ್ರಥಮವಾಗಿ ಸಾಂತ್ವನ ಕೇಂದ್ರ ತೆರೆದು ನಿರಾಶ್ರಿತರಿಗೆ ದೇವಾಲಯ ಸಮಿತಿ ವತಿಯಿಂದ ಆಶ್ರಯ ಕಲ್ಪಿಸಿ ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದೇವೆ. ಬಡ ಕುಟುಂಬಗಳ ಕಾರ್ಯಕ್ರಮಕ್ಕೆ ಸದನವನ್ನು ಉಚಿತವಾಗಿ ನೀಡಲಾಗಿದೆ. ದೇವಾಲಯದ ಆದಾಯದ ಶೇ ೩೫ ರಷ್ಟು ಹಣವನ್ನು ಸಿಬ್ಬಂದಿ ಮತ್ತು ಅರ್ಚಕರ ಆರ್ಥಿಕ ಭದ್ರತೆಗೆ ವಿನಿಯೋಗಿಸಲು ಅನುಮೋದನೆ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ೨೬ ವರ್ಷಗಳ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಗಿದೆ. ಜೊತೆಗೆ ರೂ ೮೪ ಕೋಟಿ ಹಣವನ್ನು ದೇವಾಲಯ ಅಭಿವೃದ್ಧಿಗೆ ರಾಜ್ಯ ಸರಕಾರ ಘೋಷಿಸಿದ್ದು, ಈ ಹಣದಲ್ಲಿ ರೂ ೨ ಕೋಟಿ ಹಣವನ್ನು ದೇವಾಲಯಕ್ಕೆ ನೀಡುವಂತೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮೂಲಕ ಸರಕಾರದ ಗಮನ ಸೆಳೆಯಲಾಗಿದೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಸುನಿಲ್ ಕುಮಾರ್, ಉದಯ ಕುಮಾರ್, ಕವಿತ ಕಾವೇರಮ್ಮ, ದಮಯಂತಿ ಇದ್ದರು.