ಮಡಿಕೇರಿ, ಮಾ. ೨೫: ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾ. ೨ ರಂದು ಅಮೆಚೂರು ಗ್ರಾಮದ ಬಾಲಕೃಷ್ಣ ಅವರು ಪೆರಾಜೆ ಆಸ್ಪತ್ರೆಗೆ ತೆರಳಿ ವಾಪಸ್ಸು ಬರುವ ವೇಳೆ ಕುಸುಮದರ ಮತ್ತು ಚಿದಂಬರ ಎಂಬವರು ಹಳೇ ವಿಚಾರವನ್ನು ತೆಗೆದು ಬಾಲಕೃಷ್ಣ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.