ಜಿಲ್ಲಾಧಿಕಾರಿ ಮಾಹಿತಿ
ಮಡಿಕೇರಿ, ಮಾ. ೨೫: ಸರ್ಕಾರದ ಆದೇಶದಂತೆ ನಡೆಸಲಾಗುತ್ತಿರುವ ಗ್ರಾಮ ವಾಸ್ತವ್ಯದಿಂದ ಜನಪರ ಕೆಲಸಗಳು ಸುಸೂತ್ರವಾಗಿ ನಡೆಯಲು ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ತಹಶೀಲ್ದಾರ್‌ಗಳಿಗೆ ನಿಗದಿತ ಗ್ರಾಮಗಳಲ್ಲಿ ವಾಸ್ತವ್ಯ ಹೂಡಲು ಸೂಚಿಸಿದ್ದೇನೆ. ಗ್ರಾಮಗಳ ಸಾಕಷ್ಟು ಸಮಸ್ಯೆಗಳು ತಹಶೀಲ್ದಾರ್ ಮಟ್ಟದಲ್ಲಿ ಪರಿಹಾರವಾಗುವುದರಿಂದ ಮೊದಲು ತಹಶೀಲ್ದಾರ್‌ಗಳು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿ ಪರಿಹಾರವಾಗದ ಸಮಸ್ಯೆಗಳ ಬಗ್ಗೆ ತನಗೆ ಮಾಹಿತಿ ನೀಡಿದ ಬಳಿಕ ತಾನು ಅಲ್ಲಿ ವಾಸ್ತವ್ಯ ಹೂಡಿ ಅವುಗಳ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.