ವೀರಾಜಪೇಟೆ, ಮಾ. ೨೫: ಕೊಡಗು ಜಿಲ್ಲೆಯು ಕ್ರೀಡೆಗಳ ನಾಡು, ರಾಜ್ಯದಲ್ಲಿ ಪುಟ್ಟ ಜಿಲ್ಲೆಯಾದರೂ ದೇಶೀಯ ಕ್ರೀಡೆಯಲ್ಲಿ ತನ್ನದೆಯಾದ ಛಾಪು ಮೂಡಿಸಿದೆ. ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸು ವಂತಾಗಬೇಕು ಎಂದು ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ವೀರಾಜಪೇಟೆ ತಾಲೂಕಿನ ಕೊಮ್ಮೆತೋಡು ಗ್ರಾಮದ ಕೆ.ವೈ.ಸಿ. ಸಂಸ್ಥೆಯ ವತಿಯಿಂದ ದ್ವಿತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಮಿನಿ ಕ್ರಿಡಾಂಗಣದಲ್ಲಿ ನಡೆಯಿತು. ಅಂತಿಮ ಪಂದ್ಯಾಟದ ವೀಕ್ಷಣೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎ.ಎಸ್ ಪೊನ್ನಣ್ಣ ಅವರು, ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಮಾನ್ಯತೆ ನೀಡುವಂತೆ ಎಲ್ಲಾ ದೇಶೀಯ ವೀರಾಜಪೇಟೆ, ಮಾ. ೨೫: ಕೊಡಗು ಜಿಲ್ಲೆಯು ಕ್ರೀಡೆಗಳ ನಾಡು, ರಾಜ್ಯದಲ್ಲಿ ಪುಟ್ಟ ಜಿಲ್ಲೆಯಾದರೂ ದೇಶೀಯ ಕ್ರೀಡೆಯಲ್ಲಿ ತನ್ನದೆಯಾದ ಛಾಪು ಮೂಡಿಸಿದೆ. ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸು ವಂತಾಗಬೇಕು ಎಂದು ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ವೀರಾಜಪೇಟೆ ತಾಲೂಕಿನ ಕೊಮ್ಮೆತೋಡು ಗ್ರಾಮದ ಕೆ.ವೈ.ಸಿ. ಸಂಸ್ಥೆಯ ವತಿಯಿಂದ ದ್ವಿತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಮಿನಿ ಕ್ರಿಡಾಂಗಣದಲ್ಲಿ ನಡೆಯಿತು. ಅಂತಿಮ ಪಂದ್ಯಾಟದ ವೀಕ್ಷಣೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎ.ಎಸ್ ಪೊನ್ನಣ್ಣ ಅವರು, ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಮಾನ್ಯತೆ ನೀಡುವಂತೆ ಎಲ್ಲಾ ದೇಶೀಯ ಆಯೋಜನೆಯಿಂದ ಗ್ರಾಮೀಣ ಪ್ರತಿಭೆಗಳು ಮುಖ್ಯವಾಹಿನಿಗೆ ಬರುವಂತಾಗಿದೆ. ಗ್ರಾಮೀಣ ವಿಭಾಗದ ಕ್ರೀಡೆಗಳಲ್ಲಿ ಭಾಗವಹಿಸಿದ ಉದಯೋನ್ಮುಖ ಆಟಗಾರರು ಇಂದು ದೇಶವನ್ನು ಪ್ರತಿನಿಧಿಸುವಂತಾಗಿದೆ ಎಂದರು. ಸಮಾರಂಭದಲ್ಲಿ ಚಿಲ್ಲವಂಡ ಕಾವೇರಪ್ಪ, ಜಮಾಅತ್ ಅಧ್ಯಕ್ಷ ಹಮೀದ್, ಜಾನ್ಸನ್, ಕೆ.ಎಂ.ಸಿ. ಜಿಲ್ಲಾಧ್ಯಕ್ಷ ಹನೀಫ, ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್ ಗುಂಡಿಕೆರೆ, ರಸಾಕ್, ಪ.ಪಂ. ಸದಸ್ಯ ಮೊಹಮ್ಮದ್ ರಾಫಿ ಮುಖಂಡರಾದ ಸಿ.ಎ. ನಾಸೀರ್, ಶರಣು ನಂಜಪ್ಪ, ಫೈಸಲ್ ಮತ್ತು ಆಯೋಜಕರಾದ ಸಲೀಮ್, ಸಿದ್ದೀಕ್ ಕೆ.ಎಸ್., ರಫೀಕ್ ಪಿ.ಎಂ. ಅವರುಗಳು ಉಪಸ್ಥಿತರಿದ್ದರು.

ವಾಲಿಬಾಲ್ ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಿಂದ ೨೧ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾಟವು ಡೆಕ್ಕನ್ ಬಾಯ್ಸ್ ನಾಪೋಕ್ಲು ಮತ್ತು ಹೊದವಾಡ ತಂಡಗಳ ನಡುವೆ ನಡೆಯಿತು. ಹೊದವಾಡ ತಂಡವನ್ನು ಮಣಿಸಿದ ನಾಪೋಕ್ಲು ಡಕ್ಕನ್ ಬಾಯ್ಸ್ ತಂಡವು ವಾಲಿಬಾಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

-ಕೆ.ಕೆ.ಎಸ್.