ಗೋಣಿಕೊಪ್ಪಲು, ಮಾ. ೨೨ : ಸುಮಾರು ೧೪೦೦ ಮತದಾರರು ಇರುವ ಈ ಪ್ರದೇಶದಲ್ಲಿ ೨೦೦೦ಕ್ಕೂ ಅಧಿಕ ಮಂದಿ ವಾಸವಿದ್ದಾರೆ. ಬಹುತೇಕ ಮಂದಿ ಕೂಲಿ ಕಾರ್ಮಿಕರಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಮೈಸೂರು, ಗೋಣಿಕೊಪ್ಪ ರಾಜ್ಯ ಹೆದ್ದಾರಿಯ ಕೂಗಳತೆಯ ದೂರದಲ್ಲಿರುವ ಈ ಪ್ರದೇಶದಲ್ಲಿ ಮೂಲಭೂತವಾಗಿ ಬೇಕಾದ ರಸ್ತೆ ಇಲ್ಲದೆ ಇಲ್ಲಿಯ ಜನತೆ ನರಕಯಾತನೆ ಅನುಭವಿಸುತ್ತಿದ್ದಾರೆ. ಮುಖ್ಯ ರಸ್ತೆಗೆ ಹೊಂದಿಕೊAಡAತೆ ಚನ್ನಂಗೊಲ್ಲಿ ಪೈಸಾರಿ ಎಂಬ ಪ್ರದೇಶವು ಸಮೀಪದ ಮಾಯಮುಡಿ ಪಂಚಾಯಿತಿಗೆ ಸೇರ್ಪಡೆಗೊಂಡಿದ್ದು ಚನ್ನಂಗೊಲ್ಲಿ ಕ್ಷೇತ್ರದಿಂದ ಗ್ರಾಮ ಪಂಚಾಯಿತಿಗೆ ನಾಲ್ವರು ಸದಸ್ಯರು ಆಯ್ಕೆಯಾಗಿ ತೆರಳುತ್ತಿದ್ದಾರೆ.ಸರಿಸುಮಾರು ೨೦ ವರ್ಷಗಳಿಂದ ಕೇವಲ ರಸ್ತೆಗಾಗಿ ಇಲ್ಲಿಯ ಗ್ರಾಮಸ್ಥರು ಇಲಾಖೆಯ ಅಧಿಕಾರಿಗಳ ಮುಂದೆ ನಡೆದು ಸುಸ್ತಾಗಿದ್ದಾರೆ. ಚುನಾವಣಾ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿ ತೆರಳುತ್ತಿದ್ದಾರೆ ವಿನಾಃ ಇಲ್ಲಿಯ ತನಕ ರಸ್ತೆ ಕಾರ್ಯ ಮಾತ್ರ ಇನ್ನೂ ಆಗಿಲ್ಲ. ಪಂಚಾಯಿತಿ, ಜಿ.ಪಂ, ಶಾಸಕರ ಅನುದಾನ ಇಲ್ಲಿಗೆ ಬಿಡುಗಡೆಯಾದರೂ ರಸ್ತೆ ಕಾಮಗಾರಿ ಮಾತ್ರ ನಿರಂತರ ಅಡ್ಡಿಯಾಗುತ್ತಿದೆ. ಇಲ್ಲಿಯ ಜನತೆಗೆ ಆರೋಗ್ಯ ಸಮಸ್ಯೆ ಎದುರಾದಲ್ಲಿ ಯಾವುದೇ ವಾಹನಗಳು ಈ ಭಾಗಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ರಾತ್ರಿಯ ವೇಳೆಯಲ್ಲಿ ಏನಾದರೂ ತೊಂದರೆ ಸಂಭವಿಸಿದರೆ ನಡೆದುಕೊಂಡೆ ಮುಖ್ಯ ರಸ್ತೆಗೆ ತೆರಳಬೇಕಾದ ಪರಿಸ್ಥಿತಿ ಇಲ್ಲಿಯ ಜನತೆಯದ್ದಾಗಿದೆ. ಆಟೋ ರಿಕ್ಷಾವಂತೂ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಗೆ ಈ ರಸ್ತೆ ತಲುಪಿದೆ. ಮಳೆಗಾಲದಲ್ಲಂತೂ ಇಲ್ಲಿಯ ನಿವಾಸಿಗಳ ಪರಿಸ್ಥಿತಿ ಹೇಳತೀರದ್ದಾಗಿದೆ.

ಈ ಪ್ರದೇಶವು ದೇವರಕಾಡು ಅರಣ್ಯ ಎಂಬ ವ್ಯಾಪ್ತಿಗೆ ಸೇರಿದ್ದು ಇಲ್ಲಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಬಾರದೆಂದು ರಾಜ್ಯ ಉಚ್ಚನ್ಯಾಯಾಲಯದಲ್ಲಿ ಮಾಯಮುಡಿಯ ಸಂಸ್ಥೆಯೊAದು ತಡೆಯಾಜ್ಞೆ ತಂದಿದೆ. ಇದರಿಂದಾಗಿ ಸರ್ಕಾರದ ಅನುದಾನವಿದ್ದರೂ ಇಲ್ಲಿಗೆ ಹಳೆಯ ರಸ್ತೆಯನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ ಮಾಯಮುಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಧನುಗಾಲ ಗ್ರಾಮವು ೫೦೦ಕ್ಕೂ ಅಧಿಕ ವಿವಿಧ ಸಮುದಾಯದ ಕುಟುಂಬಗಳು ವಾಸವಾಗಿದ್ದಾರೆ. ಬಹುತೇಕ ಕುಟುಂಬಗಳು ದಿನನಿತ್ಯದ ಕೂಲಿ ಕೆಲಸವನ್ನೇ ನಂಬಿದ್ದಾರೆ. ವಾಸಕ್ಕೊಂದು ಮನೆ ಬೇಕೆಂಬ ಆಸೆಯಿಂದ ಸಿಕ್ಕ

(ಮೊದಲ ಪುಟದಿಂದ) ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಹಲವಾರು ದಶಕಗಳಿಂದ ವಾಸವಿರುವ ಇಲ್ಲಿಯ ಜನತೆಯ ಅನುಕೂಲಕ್ಕಾಗಿ ಅಂಚೆ ಕಚೇರಿ, ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯನ್ನು ಸರ್ಕಾರ ನೀಡಿದೆ. ವಿದ್ಯುತ್, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿದೆ. ಆದರೆ ಈ ಗ್ರಾಮಕ್ಕೆ ತೆರಳುವ ರಸ್ತೆಯನ್ನು ನೋಡಿದರೆ, ಸಾಕಪ್ಪ ಸಾಕು ಎಂದೆನಿಸುತ್ತದೆ. ಇಲ್ಲಿಯ ಗ್ರಾಮದ ಅವ್ಯವಸ್ಥೆ. ಅನೇಕ ಸರ್ಕಾರ ಬಂದರೂ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ತೆರಳುವ ಇವರು ಮತ್ತೊಂದು ಚುನಾವಣೆಗೆ ಹಾಜರಾಗುವುದು ಮಾಮೂಲಿಯಾಗಿದೆ.

ಇಲ್ಲಿಯ ಜನತೆ ಪ್ರಮುಖವಾಗಿ ರಸ್ತೆ ಬೇಡಿಕೆಯನ್ನು ಮುಂದಿಟ್ಟು ಗ್ರಾಮಕ್ಕೆ ಬರುವ ಜನಪ್ರತಿನಿಧಿಗಳಿಗೆ ತಮ್ಮ ಸಮಸ್ಯೆಗಳನ್ನು ನಿವೇದÀನೆ ಮಾಡಿಕೊಂಡೆ ಸಮಯ ಕಳೆದಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಯಾರು ಕೂಡ ಈ ಬಗ್ಗೆ ರಸ್ತೆ ಕಾಮಗಾರಿಗೆ ಮುಂದಾಗುತ್ತಿಲ್ಲ.

ದಶಕಗಳಿಂದ ರಸ್ತೆ ಇಲ್ಲದೆ ಸಂಕಷ್ಟದಲ್ಲಿರುವ ಚನ್ನಂಗೊಲ್ಲಿ ಪೈಸಾರಿಯ ಜನತೆಯ ಸಮಸ್ಯೆಗಳನ್ನು ಆಲಿಸಲು ಹಿರಿಯ ವಕೀಲ ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಭೇಟಿ ನೀಡಿ ಇಲ್ಲಿಯ ವಿದ್ಯಾಮಾನಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಗ್ರಾಮಸ್ಥರು ನೀಡಿದ ವಾಸ್ತವ ಪರಿಸ್ಥಿತಿಯನ್ನು ನ್ಯಾಯಾಲಯದ ಮುಂದೆ ಮಂಡಿಸಿ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಜನತೆಯೊಂದಿಗೆ ಹೋರಾಟ ಮಾಡುವ ಭರವಸೆ ನೀಡಿದ್ದಾರೆ. ಇಲ್ಲಿಯ ಸಮಸ್ಯೆಯನ್ನು ಆಲಿಸಿ ಮಲೆನಾಡು ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ೧೦ ಲಕ್ಷ ಅನುದಾನವನ್ನು ರಸ್ತೆ ಅಭಿವೃದ್ಧಿಗಾಗಿ ವಿನಿಯೋಗ ಮಾಡಲಾಗಿದೆ. ಮುಖ್ಯ ರಸ್ತೆಯಿಂದ ರಸ್ತೆ ಕಾಮಗಾರಿ ನಡೆಯಲಿದೆ. ಯಾವುದೇ ವ್ಯಾಜ್ಯ ಇದ್ದಲ್ಲೂ ಮೂಲಭೂತ ಸೌಕರ್ಯಕ್ಕೆ ತೊಂದರೆಯಾಗಕೂಡದು. ಈ ಭಾಗದಲ್ಲಿ ಹೊಸ ಕಾಮಗಾರಿ ಯಾವುದೂ ಮಾಡುತ್ತಿಲ್ಲ. ಬದಲಾಗಿ ಇರುವ ರಸ್ತೆಯನ್ನು ದುರಸ್ಥಿಯಷ್ಟೇ ಮಾಡುತ್ತಿದ್ದೇವೆ. ಪೈಸಾರಿಯ ಒಳಭಾಗದಲ್ಲಿ ಸರ್ಕಾರದ ವತಿಯಿಂದ ಎಲ್ಲಾ ಸೌಲಭ್ಯವೂ ನೀಡಲಾಗಿದೆ. ಆದರೆ ರಸ್ತೆಗಾಗಿ ತಡೆಯಾಗುತ್ತಿರುವುದು ಸರಿಯಲ್ಲ.

-ಶಾಂತೆಯAಡ ವೀಣಾ ಅಚ್ಚಯ್ಯ,

ವಿಧಾನಪರಿಷತ್ ಸದಸ್ಯರು, ಕೊಡಗು ಜಿಲ್ಲೆ

ಮುಕ್ತಿ ಸಿಗಲಿ

ಚನ್ನಂಗೊಲ್ಲಿ ಪೈಸಾರಿಯ ನಿವಾಸಿಗಳ ರಸ್ತೆ ಸಮಸ್ಯೆ ಪರಿಹಾರಕ್ಕೆ ಶಾಸಕರ ಅನುದಾನದಿಂದ ೧೦ ಲಕ್ಷ ಹಣವನ್ನು ಮಂಜೂರು ಮಾಡಲಾಗಿದೆ. ಮನುಷ್ಯನಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಈ ಪ್ರದೇಶಕ್ಕೆ ಹೊಸದಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ. ೧೯೭೨ರಿಂದ ಸಾರ್ವಜನಿಕರ ಓಡಾಟಕ್ಕೆ ಇರುವ ರಸ್ತೆಯನ್ನು ದುರಸ್ಥಿ ಮಾಡಲು ಮುಂದೆ ಬಂದಿದ್ದೇವೆ. ಆದರೆ ಇದಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ರಸ್ತೆ ಕಾಮಗಾರಿ ಮಾಡಲು ಅವಕಾಶ ನೀಡುತ್ತಿಲ್ಲ. ರಾಜಕೀಯ ಪಕ್ಷಗಳು ಪೈಪೋಟಿ ನಡೆಸುವ ಬದಲು ಈ ಜನತೆಗೆ ಬೇಕಾದ ರಸ್ತೆಯ ದುರಸ್ಥಿಯನ್ನು ಮಾಡಿಕೊಟ್ಟಲ್ಲಿ ದಶಕದ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿದಂತಾಗುತ್ತದೆ.

-ಗುಮ್ಮಟ್ಟೀರ ಕಿಲನ್ ಗಣಪತಿ, ನಿದೆೆÃðಶಕರು ಆರ್‌ಎಂಸಿ ಗೋಣಿಕೊಪ್ಪ

ದಶಕಗಳಿಂದ ರಸ್ತೆಗಾಗಿ ಹೋರಾಟ ನಡೆಸಿ ಸುಸ್ತಾಗಿದ್ದೇವೆ. ಮನೆಗೆ ತೆರಳಲು ಉತ್ತಮ ರಸ್ತೆ ಇಲ್ಲದೆ ಪಡುತ್ತಿರುವ ಕಷ್ಟ ಯಾರಿಗೆ ಹೇಳುವುದು ಎಂದು ತೋಚುತ್ತಿಲ್ಲ. ನಾವು ಕೇವಲ ಹಳೆಯ ರಸ್ತೆಯನ್ನು ದುರಸ್ಥಿ ಮಾಡಿ ಎಂಬ ಬೆÉÃಡಿಕೆ ಇಟ್ಟಿದ್ದೇವೆ. ಹೊಸದಾಗಿ ಏನನ್ನೂ ಕೇಳುತ್ತಿಲ್ಲ. ಯಾವುದೇ ಜನಪ್ರತಿನಿಧಿಗಳಾಗಲಿ ನಮ್ಮ ರಸ್ತೆ ಸಮಸ್ಯೆಯನ್ನು ಬಗೆಹರಿಸಿ ನ್ಯಾಯ ಕೊಡಿಸಲಿ.

-ಕೆ.ಬಿ. ಅನಿಲ್, ಗ್ರಾಮಸ್ಥ.