ಗೋಣಿಕೊಪ್ಪಲು, ಮಾ. ೨೨: ರಾಷ್ಟಿçÃಯ ಉದ್ಯಾನವನ ನಾಗರ ಹೊಳೆಯಲ್ಲಿ ಆದಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯು ೬ನೇ ದಿನಕ್ಕೆ ಕಾಲಿರಿಸಿದೆ. ಅರಣ್ಯ ಹಕ್ಕು ಯತಾವತ್ತಾಗಿ ಜನವರಿಗೆ ಸಿಗುವ ತನಕ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೋರಾಟದ ಮುಂಚೂಣಿ ವಹಿಸಿರುವ ಜೆ.ಕೆ.ತಿಮ್ಮ ಹಾಗೂ ಜೆ.ಎ.ಶಿವು ತಿಳಿಸಿದ್ದಾರೆ. ಮಕ್ಕಳು,ಮಹಿಳೆಯರಾದಿಯಾಗಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿ ದ್ದಾರೆ. ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾಅಚ್ಚಯ್ಯ ಭೇಟಿ ನೀಡಿ ಹೋರಾಟಗಾರರ ಅಹವಾಲು ಸ್ವೀಕರಿಸಿದರು. ಕಾಯಿದೆಯನ್ನು ಯಥಾವತ್ತಾಗಿ ಜಾರಿಗೊಳಿಸಲು ವಿಧಾನ ಮಂಡಳದ ಅಧಿವೇಶನದಲ್ಲಿ ಪ್ರಸ್ತಾಪ ಮಾಡುವುದಾಗಿ ಗೋಣಿಕೊಪ್ಪಲು, ಮಾ. ೨೨: ರಾಷ್ಟಿçÃಯ ಉದ್ಯಾನವನ ನಾಗರ ಹೊಳೆಯಲ್ಲಿ ಆದಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯು ೬ನೇ ದಿನಕ್ಕೆ ಕಾಲಿರಿಸಿದೆ. ಅರಣ್ಯ ಹಕ್ಕು ಯತಾವತ್ತಾಗಿ ಜನವರಿಗೆ ಸಿಗುವ ತನಕ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೋರಾಟದ ಮುಂಚೂಣಿ ವಹಿಸಿರುವ ಜೆ.ಕೆ.ತಿಮ್ಮ ಹಾಗೂ ಜೆ.ಎ.ಶಿವು ತಿಳಿಸಿದ್ದಾರೆ. ಮಕ್ಕಳು,ಮಹಿಳೆಯರಾದಿಯಾಗಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿ ದ್ದಾರೆ. ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾಅಚ್ಚಯ್ಯ ಭೇಟಿ ನೀಡಿ ಹೋರಾಟಗಾರರ ಅಹವಾಲು ಸ್ವೀಕರಿಸಿದರು. ಕಾಯಿದೆಯನ್ನು ಯಥಾವತ್ತಾಗಿ ಜಾರಿಗೊಳಿಸಲು ವಿಧಾನ ಮಂಡಳದ ಅಧಿವೇಶನದಲ್ಲಿ ಪ್ರಸ್ತಾಪ ಮಾಡುವುದಾಗಿ ಆದಿವಾಸಿಗಳಿಗೆ ಭರವಸೆ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಹೋರಾಟವು ೬ನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ತಾನೂ ಕೂಡ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಭೇಟಿಯ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೇಚಮಾಡ ಸರಿತ ಪೂಣಚ್ಚ, ಬಿ.ಎನ್. ಪ್ರಥ್ಯು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಹಿರಿಯ ಮುಖಂಡರಾದ ತೀತಿರ ಧರ್ಮಜ ಎ.ಜೆ. ಬಾಬು, ಕಡೇಮಾಡ ಕುಸುಮಾ ಜೋಯಪ್ಪ, ಮುಂತಾದವರು ಹಾಜರಿದ್ದರು. ಇದೇ ಸಂದರ್ಭ ವೀಣಾಅಚ್ಚಯ್ಯ ಹಾಗೂ ಮುಖಂಡರು ಅರಣ್ಯದಲ್ಲಿ ಸಂಪಿಗೆ ಗಿಡ ನೆಡುವ ಮೂಲಕ ಅರಣ್ಯವನ್ನು ಸಂರಕ್ಷಿಸುವ ಸಂದೇಶ ನೀಡಿದರು.

-ಹೆಚ್.ಕೆ. ಜಗದೀಶ್