ಗುಡ್ಡೆಹೊಸೂರು, ಮಾ. ೨೨: ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ತಾ. ೨೪ ರಿಂದ ಮೂರು ದಿನಗಳ ಕಾಲ ಕಳಿಯಾಟ ಕಾರ್ಯಕ್ರಮ ನಡೆಯಲಿದೆ. ತಾ.೨೪ರಂದು ಹರಿಸೇವೆ, ತಾ.೨೫ ಹಾಗೂ ೨೬ರಂದು ಸಂಜೆ ಉಪದೈವಗಳ ಕೋಲ ನಡೆಯಲಿದೆ. ರಾತ್ರಿ ೮ ಗಂಟೆಯಿAದ ಶ್ರೀವಿಷ್ಣುಮೂರ್ತಿ, ಶ್ರೀಪಾಷಾಣಮೂರ್ತಿ, ಶ್ರೀರುದ್ರಚಾಮುಂಡಿ ದೈವಗಳ ಕೋಲಕಾರ್ಯಕ್ರಮ ನಡೆಯಲಿದೆ. ಈ ಮೂರು ದಿನಗಳ ಕಾಲ ದೈವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.