ಮಡಿಕೇರಿ, ಮಾ. ೨೨: ನವೋದಯ ವಿದ್ಯಾಲಯ ಸಮಿತಿಯ ೨೦೨೧-೨೨ರ ಸಾಲಿಗೆ ೬ನೇ ತರಗತಿ ಪ್ರವೇಶಕ್ಕೆ ೨೦೨೧ ರ ಏಪ್ರಿಲ್, ೧೦ ರಂದು ನಡೆಯಬೇಕಿದ್ದ ಜವಹಾರ್ ನವೋದಯ ವಿದ್ಯಾಲಯದ ಆಯ್ಕೆ ಪರೀಕ್ಷೆ ಮುಂದೂಡಲಾಗಿದ್ದು, ಮಿಜೋರಾಂ, ಮೆಘಾಲಯ ಹಾಗೂ ನಾಗಾಲ್ಯಾಂಡ್ ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ೨೦೨೧ರ ಮೇ ೧೬ ರಂದು ಪರೀಕ್ಷೆ ನಡೆಯಲಿದೆ ಹಾಗೂ ಮಿಜೋರಾಂ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ೨೦೨೧ರ ಜೂನ್ ೧೯ ರಂದು ಪರೀಕ್ಷೆ ನಡೆಯಲಿದೆ ಎಂದು ಪಾಂಶುಪಾಲರು ತಿಳಿಸಿದ್ದಾರೆ.