ಪಾಲಿಬೆಟ್ಟ, ಮಾ. ೨೨ : ಕಾಡು ಪ್ರಾಣಿಗಳೊಂದಿಗೆ ಕಾಡನ್ನೇ ನಂಬಿ ಜೀವನ ನಡೆಸುತ್ತಿರುವ ಆದಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ವಿಫಲವಾಗಿದ್ದು ಆದಿವಾಸಿಗಳ ಬೇಡಿಕೆ ಈಡೇರಿಸಿ ಅಭಿವೃದ್ಧಿಯೊಂದಿಗೆ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರಿತಾ ಪೂಣಚ್ಚ ಹೇಳಿದರು.
ನಾಗರಹೊಳೆ ಅರಣ್ಯ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆ ಹಾಗೂ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ‘ಶಕ್ತಿ’ಯೊಂದಿಗೆ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಅರಣ್ಯದಂಚಿನಲ್ಲಿ ತಲತಲಾಂತರಗಳಿAದ ವಾಸವಾಗಿದ್ದು, ಅಭಿವೃದ್ಧಿಯಿಂದ ವಂಚಿತರಾಗಿ ಕೊಡಗು ಜಿಲ್ಲೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಅರಣ್ಯದಂಚಿನಲ್ಲಿ ತಲತಲಾಂತರಗಳಿAದ ವಾಸವಾಗಿದ್ದು, ಅಭಿವೃದ್ಧಿಯಿಂದ ವಂಚಿತರಾಗಿ ಮೂಲ ಸೌಕರ್ಯವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ೨೦೦೬ರಲ್ಲಿ ಅರಣ್ಯ ಮಸೂದೆ ಕಾಯ್ದೆ ಜಾರಿಯಾಗಿದ್ದು, ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಬೇಕೆನ್ನುವ ನಿಯಮವಿದ್ದರೂ ಇಂದಿಗೂ ಆದಿವಾಸಿ ಬುಡಕಟ್ಟು ಜನಾಂಗಗಳಿಗೆ ತಲುಪದೇ ಇರುವುದು ವಿಷಾದನೀಯ ಎಂದರು.
ಈ ಸಂದರ್ಭ ದಿಡ್ಡಳ್ಳಿಯ ಮುತ್ತಮ್ಮ, ಗಣೇಶ್, ಮಂಜುಳ, ಮಹೇಶ್, ರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.