ಸೋಮವಾರಪೇಟೆ, ಮಾ. ೨೨: ಸಮೀಪದ ಐಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾತ್ರಿ ಹಾಗೂ ರಜಾ ದಿನಗಳಂದು ಕೆಲ ಪುಂಡರು ಮದ್ಯ ಸೇವಿಸಿ ಬಾಟಲಿಗಳನ್ನು ಸ್ಥಳದಲ್ಲೇ ಎಸೆದು ವಿಕೃತಿ ಮೆರೆಯುತ್ತಿದ್ದಾರೆ.

ಪ್ರೌಢಶಾಲೆಯ ಆವರಣ, ತರಗತಿಗಳ ಮುಂಭಾಗ, ಮೆಟ್ಟಿಲುಗಳ ಮೇಲೆ ಕುಳಿತು ಮದ್ಯ ಸೇವಿಸುವ ಪುಂಡರು, ಮದ್ಯದ ಕವರ್, ಗ್ಲಾಸ್, ನೀರಿನ ಬಾಟಲ್, ಉಪ್ಪಿನ ಕಾಯಿ, ಸಿಗರೇಟಿನ ತುಂಡುಗಳನ್ನು ಶಾಲಾ ಆವರಣದಲ್ಲಿ ಎಸೆದು ವಿಕೃತಿ ಮೆರೆಯುತ್ತಿದ್ದಾರೆ. ಇಂತಹ ಪುಂಡರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.