ಮಡಿಕೇರಿ, ಮಾ. ೨೨: ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ, ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಭರವಸಾ ಕೋಶ ಮತ್ತು ಉದ್ಯೋಗವಕಾಶ ಸಮಿತಿಯ ಸಹಯೋಗದಲ್ಲಿ ಭಾರತ ಸೇನೆ ಆಯ್ಕೆ ಪ್ರಕ್ರಿಯೆ ಎಂಬ ವಿಷಯ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರವನ್ನು ತಾ. ೨೩ ರಂದು (ಇಂದು) ಏರ್ಪಡಿಸಲಾಗಿದೆ ಎಂದು ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಹಾಗೂ ಉದ್ಯೋಗವಕಾಶ ಸಮಿತಿಯ ಸಂಚಾಲಕ ಪಿ.ಎನ್. ನಾಗರಾಜಮೂರ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.