ಮಡಿಕೇರಿ, ಮಾ. ೨೧: ಮಡಿಕೇರಿ ಬಾರ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಕೀಲರಿಗೆ ಹಾಗೂ ವಕೀಲರ ಕುಟುಂಬದವರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ವಕೀಲರು ವೃತ್ತಿ ಜಂಜಾಟ ಮರೆತು ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ವಕೀಲರು ಹಾಗೂ ಕುಟುಂಬಸ್ಥರಿಗಾಗಿ ವಿವಿಧ ಹಂತದ ಓಟ, ಭಾರದ ಗುಂಡು ಎಸೆತ, ರೈಫಲ್ ಶೂಟಿಂಗ್, ಮನರಂಜನಾತ್ಮಕ ಆಟೋಟಗಳು, ವಕೀಲರ ಎರಡು ತಂಡಗಳು ನಡುವೆ ಕ್ರಿಕೆಟ್ ಪಂದ್ಯಾಟ ನಡೆಯಿತು.
ಈ ಸಂದರ್ಭ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎಸ್. ಕವನ್, ಕಾರ್ಯದರ್ಶಿ ಡಿ.ಜಿ. ಕಿಶೋರ್,
ಖಜಾಂಜಿ ದೇವಿಪ್ರಸಾದ್, ಕ್ರೀಡಾ ಸಂಚಾಲಕರಾದ ಕಪಿಲ್, ಮುದ್ದಯ್ಯ ಇದ್ದರು.