ಸುಂಟಿಕೊಪ್ಪ, ಮಾ. ೨೧: ತಡೆಗೋಡೆ ಪೂರ್ಣಗೊಳ್ಳದ ಕಟ್ಟಡ, ಚರಂಡಿ ನಿರ್ಮಾಣ, ಕೊಳವೆ ಬಾವಿಯಲ್ಲಿ ಕುಡಿಯುವ ನೀರಿಲ್ಲ; ಇದಕ್ಕೆ ಮೊದಲು ಆದÀ್ಯತೆ ನೀಡಿ ಎಂದು ಗ್ರಾಮಸ್ಥರು ಕಂಬಿಬಾಣೆ ಗ್ರಾಮ ಸಭೆಯಲ್ಲಿ ಒತ್ತಾಯಿಸಿದರು.

ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಯ ೨೦೨೦-೨೧ನೇ ಸಾಲಿನ ೨ನೇ ಹಂತದ ಉದ್ಯೋಗ ಖಾತ್ರಿ ಯೋಜನೆ ಮತ್ತು ೧೪ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗÀಣದಲ್ಲಿ ಸೋಮವಾರಪೇಟೆ ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಕೆ.ಎಂ. ಅಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಲೆಯ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಲೆಕ್ಕಪರಿಶೋಧಕ ವಿಕ್ರಮ್ ಕಾಮಗಾರಿಗಳ ಮಾಹಿತಿ, ಇದುವರೆಗೆ ನಡೆದ ಕಾಮಗಾರಿಗಳ ಅನುದಾನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆಯಡಿ ಪಂಚಾಯಿತಿ ಸಮೀಪ ಸರಕಾರಿ ಕೆರೆಗೆ ತಡೆಗೋಡೆ ನಿರ್ಮಿಸಲು ಹಲವಾರು ಬಾರಿ ಗ್ರಾಮ ಸಭೆಯಲ್ಲಿ ಮನವಿ ಮಾಡಿದರೂ ಇದನ್ನು ಕಡೆಗಣಿಸಲಾಗಿದೆ.

ಪಂಚಾಯಿತಿ ಕಟ್ಟಡದ ಮೇಲಿನ ಕಟ್ಟಡದ ಕೆಲಸ ಪೂರ್ಣಗೊಂಡಿಲ್ಲ. ಇದನ್ನು ಪೂರ್ಣಗೊಳಿಸಬೇಕು. ಪಂಚಾಯಿತಿ ಮುಂಭಾಗದ ರಸ್ತೆಯ ಎರಡು ಬದಿ ಚರಂಡಿ ನಿರ್ಮಿಸಿಲ್ಲ; ಇದರಿಂದ ರಸ್ತೆ ಹಾಳಾಗುತ್ತದೆ. ಭೂದಾನ ಪೈಸಾರಿಯಲ್ಲಿ ಕೊರೆದ ಕೊಳವೆ ಬಾವಿಗೆ ಮೋಟಾರು ಅಳವಡಿಸಿ ನೀರೇ ಇಲ್ಲ. ಇದರಿಂದ ಈ ಭಾಗದ ಜನರು ನೀರಿಗಾಗಿ ಪರದಾಡುವಂತಾಗಿದೆ. ಬೇರೆ ವ್ಯವಸ್ಥೆ ಕಲ್ಪಿಸಿ ಇಂಗುಗುAಡಿ ಕೆಲಸ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಗ್ರಾಮಸ್ಥರಾದ ಗಣೇಶ, ಅಜಿತ್, ಆನಂದ ಇತರರು ಒತ್ತಾಯಿಸಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಮಧುನಾಗಪ್ಪ ಮಾತನಾಡಿ, ಅಪೂರ್ಣಗೊಂಡ ಕಾಮಗಾರಿಯನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಹಂತಹAತವಾಗಿ ಕೈಗೆತ್ತಿಕೊಳ್ಳಲಾಗು ವುದು ಎಂದರು. ವೇದಿಕೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಮತಿ, ಕಾರ್ಯದರ್ಶಿ ಸಿ.ಜೆ. ನಿತ್ಯಾ, ಪಂಚಾಯಿತಿ ಉಪಾಧ್ಯಕ್ಷೆ ಎಂ.ಎನ್. ಅಶ್ವಿನಿ, ಸದಸ್ಯರಾದ ಕೆ.ಬಿ. ಕೃಷ್ಣ, ಎನ್. ಶಂಕರ, ರಾಧ, ಉಪಸ್ಥಿತರಿದ್ದರು.