ನಾಪೋಕ್ಲು, ಮಾ. ೨೧: ನಾಪೋಕ್ಲು ಗ್ರಾಮ ಪಂಚಾಯಿತಿಯ ಅಜ್ಜಿಮುಟ್ಟ ಗ್ರಾಮದಲ್ಲಿ ನಡೆಸಿದ ರಸ್ತೆ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ರಸ್ತೆ ಕಳೆದ ೩೦ ವರ್ಷಗಳಿಂದ ದುರಸ್ತಿಪಡಿಸದೆ ಹಾಗೇ ಉಳಿದಿತ್ತು. ಇಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರವಿದ್ದು, ವಿದ್ಯಾರ್ಥಿಗಳು, ಗ್ರಾಮಸ್ಥರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದರು. ಬಹಳ ವರ್ಷಗಳ ನಂತರ ರಸ್ತೆ ದುರಸ್ತಿಯಾಗುತ್ತಿದೆ ಎಂದು ಸಂತಸದಲ್ಲಿದ್ದ ನಮಗೆ ಈ ಕಳಪೆ ಕಾಮಗಾರಿಯಿಂದ ಇನ್ನೂ ಹೆಚ್ಚಿನ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ರಸ್ತೆಗೆ ಹಾಕಿದ ಡಾಮರನ್ನು ಕೈಯಿಂದ ಕಿತ್ತು ತೆಗೆದು ತೋರಿಸಿದ ಅವರು ಕೂಡಲೇ ಸಂಬAಧಪಟ್ಟ ಇಂಜಿನಿಯರ್ ಸ್ಥಳಕ್ಕೆ ಆಗಮಿಸ ಬೇಕು. ಗುತ್ತಿಗೆದಾರನಿಗೆ ಯಾವದೇ ಕಾರಣಕ್ಕೂ ಹಣ ಮಂಜೂರು ಮಾಡಬಾರದು ಎಂದು ಆಗ್ರಹಿಸಿದ ಗ್ರಾಮಸ್ಥರು ತಪ್ಪಿದ್ದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗು ವದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಟಿ.ಆರ್. ರಘು, ಸುರೇಶ್, ಸುನಿಲ್, ಮತ್ತಿತರರು ಇದ್ದರು.