ಸುಂಟಿಕೊಪ್ಪ, ಮಾ. ೧೯: ರಾಷ್ಟಿçÃಯ ಹೆದ್ದಾರಿ ೨೭೫ಕ್ಕೆ ಹೊಂದಿಕೊAಡಿರುವ ಸುಂಟಿಕೊಪ್ಪ ಗ್ರೇಡ್ ಗ್ರಾಮ ಪಂಚಾಯಿತಿಯ ಬೀದಿ ದೀಪಗಳು ಉರಿಯುತ್ತಿಲ್ಲ! ಅದರಲ್ಲೂ ಗ್ರಾ.ಪಂ. ಕಚೇರಿ ಸಮೀಪದಲ್ಲೇ ಇರುವ ಬೀದಿ ದೀಪ ಸ್ಥಬ್ಧಗೊಂಡಿದೆ. ದೀಪದಡಿ ಕತ್ತಲೆ ಎಂಬ ನಾಣ್ಣುಡಿಯಂತೆ ಪಂಚಾಯಿತಿ ಕಾರ್ಯವೈಖರಿಗೆ ಕೈಕನ್ನಡಿ ಹಿಡಿದಂತಾಗಿದೆ.
ಕಳೆದ ೧೫ ದಿನಗಳಿಂದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅದರಲ್ಲೂ ಪಟ್ಟಣ ಪ್ರದೇಶ ರಾಷ್ಟಿçÃಯ ಹೆದ್ದಾರಿ ಬದಿ, ಮಾದಾಪುರ ರಸ್ತೆ, ಪಂಪ್ಹೌಸ್ ರಸ್ತೆ, ಗದ್ದೆಹಳ್ಳ, ಶ್ರೀದೇವಿ ಬಡಾವಣೆ ಈ ವಿಭಾಗದ ಬೀದಿ ದೀಪಗಳು ಕಣ್ಣು ಮುಚ್ಚಿವೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ನೂತನ ಆಡಳಿತ ಮಂಡಳಿ, ಅಧಿಕಾರಿವರ್ಗದವರು ಈ ಬಗ್ಗೆ ಎಚ್ಚರವಹಿಸಿ ರಾತ್ರಿವೇಳೆ ಬೀದಿ ದೀಪ ಉರಿಸಲು ಮುಂದಾಗಬೇಕೆAದು ಪಟ್ಟಣ ನಿವಾಸಿಗಳು, ವರ್ತಕರು ಆಗ್ರಹಿಸಿದ್ದಾರೆ.
ಹಳೆ ಆಡಳಿತ ಮಂಡಳಿಯವರ ಕಾರ್ಯಸೂಚಿ ಅನುಷ್ಠಾನವಾಗಬಾರದು ಹೊಸದಾಗಿ ಪಂಚಾಯಿತಿ ಕಾರ್ಯಸೂಚಿ ರಚಿಸಬೇಕೆಂದು ನೂತನ ಆಡಳಿತ ಮಂಡಳಿಯವರು ಪ್ರಥಮ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕನಿಷ್ಟ ರಾತ್ರಿವೇಳೆ ಬೀದಿ ದೀಪ ಉರಿಸಲು, ಕುಡಿಯುವ ನೀರು ಒದಗಿಸಲು ಪ್ರಥಮ ಆದ್ಯತೆ ನೀಡಬೇಕು; ಇದರಲ್ಲಿ ತಾರತಮ್ಯ ಸಲ್ಲ ಎಂದು ಗ್ರಾಮಸ್ಥರಾದ ಜುಬೇರ್, ಬಾಶಿದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.