ಶನಿವಾರಸಂತೆ, ಮಾ. ೨೦: ಕೊಡಗನ್ನಾಳಿದ ರಾಜರ ಗದ್ದುಗೆ ಜಾಗದ ವಿವಾದ ಹಾಗೂ ನಾಲ್ಕುನಾಡು ಅರಮನೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಭೇಟಿ ಮಾಡಿ ಚರ್ಚಿಸಿ, ಮನವಿ ಸಲ್ಲಿಸಲಾಯಿತು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಭದ್ರಮ್ಮಮಹಾಂತಪ್ಪ ಭವನದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮಗಳೆಡೆಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಗಮನಸೆಳೆದ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ರಾಜರ ಗದ್ದುಗೆ ಜಾಗದ ವಿವಾದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್ ಮಾತನಾಡಿ, ಸುಮಾರು ೨೦೦ ವರ್ಷಗಳಿಗೂ ಅಧಿಕ ವರ್ಷ ಕೊಡಗನ್ನು ಆಳಿದ ರಾಜರ ಗದ್ದುಗೆಯ ೨೦ ಎಕರೆ ಪ್ರದೇಶ ಇನ್ನೂ ವಿವಾದದಲ್ಲಿದೆ. ರಾಜ್ಯ ಉಚ್ಚನ್ಯಾಯಲಾಯದ ಆದೇಶವನ್ನು ಜಿಲ್ಲಾಡಳಿತ ಪರಿಗಣಿಸುತ್ತಿಲ್ಲ.

ಮಡಿಕೇರಿ ತಾಲೂಕಿನಲ್ಲಿರುವ ನಾಲ್ಕುನಾಡು ಅರಮನೆಯನ್ನು ನವೀಕರಣಗೊಳಿಸುವ ನೆಪದಲ್ಲಿ ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆ ಅರಮನೆಯ ಪ್ರವೇಶ ದ್ವಾರವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಮೂಲ ಸ್ವರೂಪಕ್ಕೆ ದಕ್ಕೆ ತಂದಿದ್ದಾರೆ. ಈ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳಬೇಕೆಂದು ಕೋರಿದರು.

ಈ ಸಂದರ್ಭ ಜಿಲ್ಲಾ ವೀರಶೈವಲಿಂಗಾಯತ ಜಂಗಮ ಅರ್ಚಕರ ಸಂಘದ ಕಾರ್ಯದರ್ಶಿ ಹಾಗೂ ರಾಜ್ಯ ನಿರ್ದೇಶಕ ಸೋಮಶೇಖರ ಶಾಸ್ತಿç ಇದ್ದರು.