ಮಡಿಕೇರಿ ಏ. ೧೮: ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ನಾಗರಿಕರು ಕೋವಿಡ್-೧೯ ಸೋಂಕದAತೆ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್-ಲಸಿಕೆಯನ್ನು ಚುಚ್ಚಿಸಿಕೊಳ್ಳಲು ಸಮರ್ಪಕ ಸೌಲಭ್ಯ ಕಲ್ಪಿಸಲಾಗಿದೆ. ಹಿರಿಯ ನಾಗರಿಕರು ಇದನ್ನು ಸದುಪಯೋಗ ಗೊಳಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ತಿಳಿಸಿದ್ದಾರೆ. ೨೮ ದಿನಗಳು ಕಳೆದ ಬಳಿಕ ದ್ವಿತೀಯ ಲಸಿಕೆಯನ್ನು ಪಡೆದುಕೊಳ್ಳುವಂತೆ ಸಲಹೆಯಿತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ೧೦ ಸಾವಿರಕ್ಕೂ ಅಧಿಕ ಮಂದಿ ಹಿರಿಯ ನಾಗರಿಕರು ಜಿಲ್ಲೆಯ ೩೮ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ೧೦,೩೮೪ ಮಂದಿ ಹಿರಿಯ ನಾಗರಿಕರು ಲಸಿಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ವಾಸವಿರುವ ೬೦ ರ ಮೇಲ್ಪಟ್ಟಿರುವ ಹಿರಿಯ ನಾಗರಿಕರ ಒಟ್ಟು ಸಂಖ್ಯೆಯಲ್ಲಿ ಈ ಪ್ರಮಾಣ ಶೇ. ಶೇ.೨೫.೬೮ ತಲುಪಿರುವದಾಗಿ ಜಿಲ್ಲಾ ಆರೋಗ್ಯಾಧಿಕಾರಿಡಾ. ಮೋಹನ್ ಮಾಹಿತಿಯಿತ್ತಿದ್ದಾರೆ. ಇನ್ನೂ(ಮೊದಲ ಪುಟದಿಂದ) ಶೇ ೭೪ ರಷ್ಟು ಗುರಿ ಸಾಧಿಸಬೇಕಾಗಿದೆ. ಪ್ರಾರಂಭದಲ್ಲಿ ಜಿಲ್ಲೆಯ ೪೯೩೦(ಶೇ. ೭೫.೧೫) ಮಂದಿ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದರು. ದ್ವಿತೀಯ ಹಂತದಲ್ಲಿ ೪೧೮೪ ಮಂದಿ ಲಸಿಕೆ ಪಡೆದುಕೊಂಡರು. ಉಳಿದವರು ಇನ್ನೂ ಪಡೆದುಕೊಳ್ಳಲು ಕಾಲಾವಕಾಶವಿದೆ ಎಂದು ಡಾ ಮೋಹನ್ ತಿಳಿಸಿದ್ದಾರೆ. ಆರೋಗ್ಯ ಇಲಾಖಾ ಮುಂಚೂಣಿ ಕಾರ್ಯಕರ್ತರ ಪೈಕಿ ಪ್ರಥಮ ಹಂತದಲ್ಲಿ ೨೦೦೭ (ಶೇ. ೬೪.೨%) ಮಂದಿ ಲಸಿಕೆ ಪಡೆದಿದ್ದಾರೆ. ದ್ವಿತೀಯ ಹಂತದಲ್ಲಿ ೫೨೩ ಮಂದಿ ಪಡೆದುಕೊಂಡಿದ್ದಾರೆ.

ಬಿ.ಪಿ, ಶುಗರ್ ಇತ್ಯಾದಿ ಅನಾರೋಗ್ಯದಿಂದ ಬಳಲುತ್ತಿರುವ ೪೫ ರಿಂದ ೫೯ ವಯೋಮಿತಿ ಯವರಿಗೂ ಲಸಿಕೆ ಪಡೆದುಕೊಳ್ಳುವ ಅವಕಾಶವಿದೆ ಎಂದು ಅವರು ಮಾಹಿತಿಯಿತ್ತಿದ್ದಾರೆ. ಇಂತಹವರು ವೈದ್ಯರಿಂದ ದೃಢೀಕರಣ ಪತ್ರ ತಂದಿರಬೇಕು. ಈ ವಯೋಮಿತಿಯ ೧೦೬೭ ಮಂದಿ ಇದುವರೆಗೆ ಲಸಿಕೆ ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ೩೮ ಆರೋಗ್ಯ ಕೇಂದ್ರಗಳಲ್ಲಿ ಇದೀU Àಉಚಿತ ಲಸಿಕೆ ನೀಡಲಾಗುತ್ತಿದೆ. ಈ ಪೈಕಿ ೨೮ ಪ್ರಾಥಮಿಕ ಕೇಂದ್ರಗಳಿವೆ, ೭ ಸಮುದಾಯ ಕೇಂದ್ರಗಳಿವೆ, ವೀರಾಜಪೇÀಟೆ ಮತ್ತು ಸೋಮವಾರಪೇಟೆಯಲ್ಲಿ ಎರಡು ಸಾರ್ವಜನಿಕ ಆಸ್ಪತ್ರೆಗಳಿವೆ. ಅಲ್ಲದೆ, ಮಡಿಕೇರಿಯಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಶ್ರ‍್ರಯದ ಜಿಲ್ಲಾಸ್ಪತ್ರೆಯಿದೆ ಎಂದು ಅವರು ಮಾಹಿತಿಯಿತ್ತರು.

ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ. ಗೋಪಿನಾಥ್ ಹಾಗೂ ಮಡಿಕೇರಿ ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್ “ಶಕ್ತಿ” ಗೆ ಕೆಲವು ಮಾಹಿತಿಗಳನ್ನು ಒದಗಿಸಿದರು.

ಮಡಿಕೇರಿಯ ಜಿಲ್ಲಾಸ್ಪತ್ರೆೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಿರಿಯ ನಾಗರಿಕÀರಿಗೆ ಲಸಿಕೆ ನೀಡುತ್ತಿರುವ ಚಿತ್ರಣ “ಶಕ್ತಿ ಯ ಗಮನಕ್ಕೆ ಬಂದಿದೆ. ಆರೋಗ್ಯ ಸಿಬ್ಬಂದಿ ಹಿರಿಯ ನಾಗರಿಕರಿಗೆ ತೊಂದರೆಯಾಗದAತೆ ವಿಳಂಬವಿಲ್ಲದೆ ಲಸಿಕೆ ನೀಡಿ ಲಸಿಕೆ ನೀಡಿದ ಬಳಿಕ ಅರ್ಧ ಗಂಟೆ ಕೂರಿಸಿ ಏನೂ ತೊಂದರೆಯಿಲ್ಲದಿರು ವದನ್ನು ಖಾತರಿಪಡಿಸಿಕೊಂಡು ಬಳಿಕ ಕಳುಹಿಸುತ್ತಿದ್ದಾರೆ. ಲಸಿಕೆ ಪಡೆದವರು ದೃಢೀಕರಣ ಪತ್ರವೊಂದನ್ನು ಪಡೆದುಕೊಂಡು ಹೋಗಲು ಮರೆಯಬಾರದು. ಈ ಪತ್ರವಿದ್ದರೆ ಮುಂದೆ ೨೮ ದಿನ ಕಳೆದ ಬಳಿಕ ಎರಡನೆ ಹಂತದ ಲಸಿಕೆ ಪಡೆಯಲು ಸುಲಭ ಸಾಧ್ಯವಾಗುತ್ತÀದೆ. ಅಲ್ಲದೆ ಈ ದಾಖಲೆ ಅಗತ್ಯವಿದೆ.